ಸಾಗರ ಮಾರಿಕಾಂಬ ಜಾತ್ರಾ ಮಹೋತ್ಸವ : ವಾಹನ ನಿಲುಗಡೆ ನಿಷೇಧ

Sagar Marikamba Jatra Mahotsava: Ban on parking

ಸಾಗರ ಮಾರಿಕಾಂಬ ಜಾತ್ರಾ ಮಹೋತ್ಸವ : ವಾಹನ ನಿಲುಗಡೆ ನಿಷೇಧ
ಸಾಗರ ಮಾರಿಕಾಂಬ ಜಾತ್ರಾ ಮಹೋತ್ಸವ : ವಾಹನ ನಿಲುಗಡೆ ನಿಷೇಧ

MALENADUTODAY.COM | SHIVAMOGGA NEWS |SAGARA TALUK

ಶಿವಮೊಗ್ಗ, ಫೆಬ್ರವರಿ 04 : ಸಾಗರ ನಗರದಲ್ಲಿ ಪ್ರಸಿದ್ಧ ಮಾರಿಕಾಂಬ ಜಾತ್ರಾ ಮಹೋತ್ಸವವು ಫೆ.07 ರಿಂದ ಫೆ.15 ರವರೆಗೆ ನಡೆಯಲಿದ್ದು ವಾಹನ ನಿಲುಗಡೆ ನಿಷೇಧ ಹಾಗೂ ಪಾರ್ಕಿಂಗ್​ ವ್ಯವಸ್ಥೆಗಾಗಿ ಜಿಲ್ಲಾಧಿಕಾರಿಗಳಾದ ಡಾ.ಆರ್.ಸೆಲ್ವಮಣಿ ಇವರು ಈ ಕೆಳಕಂಡಂತೆ ತಾತ್ಕಾಲಿಕ ಅಧಿಸೂಚನೆ ಹೊರಡಿಸಿದ್ದಾರೆ.

Sagara Marikambe : ಸಾಗರ ಮಾರಿಕಾಂಬೆ ಜಾತ್ರೆಗೆ ಇವತ್ತಿನಿಂದ ಧಾರ್ಮಿಕ ಪೂಜೆ ! ಪ್ರಕ್ರಿಯೆ, ಪದ್ದತಿ, ವಿಧಾನ ಏನು? ಪ್ರಸಿದ್ಧ ಉತ್ಸವದಲ್ಲಿ ಯಾವಾಗ ಏನೇನು ನಡೆಯಲಿದೆ? ವಿವರ ಇಲ್ಲಿದೆ

ಸಾಗರ ಪೇಟೆ ಪೊಲೀಸ್ ಠಾಣೆ ಎದುರಿನ ಜೆ.ಸಿ ವೃತ್ತದಿಂದ ಜೆ.ಸಿ ರಸ್ತೆ ಮೂಲಕ ಸಾಗರ ಸರ್ಕಲ್ ಮಾರ್ಗವಾಗಿ ಐತಪ್ಪ ವೃತ್ತದವರೆಗೆ ಎರಡೂ ಕಡೆ ಹೋಗಿ ಬರುವ ವಾಹನಗಳನ್ನು ನಿಷೇಧಿಸಲಾಗಿದೆ. ಅಂಬೇಡ್ಕರ್ ವೃತ್ತದಿಂದ ಸಾಗರ ಸರ್ಕಲ್‍ವರೆಗೆ ವಾಹನ ಸಂಚಾರ ನಿಷೇಧಿಸಿದೆ.

BIG EXCLUSIVE : Cafe Coffee Day : ಅವರ್ ಬಿಟ್, ಇವರ್ ಬಿಟ್​ ತೀರ್ಥಹಳ್ಳಿ ಎಲೆಕ್ಷನ್​ ಕಣಕ್ಕೆ ಬಂತು ಡಿಕೆ ಶಿವಕುಮಾರ್ ಅಳಿಯನ ಹೆಸರು

ಸತ್ಯನಾರಾಯಣ ಸ್ವಾಮಿ ದೇವಸ್ಥಾನ ಸರ್ಕಲ್‍ನಿಂದ ಸಾಗರ ಸರ್ಕಲ್‍ವರೆಗೆ ವಾಹನ ಸಂಚಾರ ನಿಷೇಧಿಸಿದೆ. ದುರ್ಗಾಂಬ ವೃತ್ತ ಮೂಲಕ ಸೊರಬ ರಸ್ತೆ ಮಾರ್ಕೇಟ್ ರಸ್ತೆ ಮೂಲಕ ಎಸ್,ಎನ್ ವೃತ್ತದವರೆಗೆ ಎಲ್ಲಾ ಮಾದರಿ ವಾಹನ ನಿಲುಗಡೆಯನ್ನು ಮತ್ತು ಎಲ್ಲಾ ಮಾದರಿಯ ಸರಕು ವಾಹನಗಳನ್ನು ನಿಷೇಧಿಸಲಾಗಿದ್ದು ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಆಂಬುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತು ಪಡಿಸಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

*ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com