ಗಿಳಿಶಾಸ್ತ್ರ ಹೇಳುತ್ತಿದ್ದವರನ್ನ ಅರೆಸ್ಟ್ ಮಾಡಿದ ಅಧಿಕಾರಿಗಳ ತಂಡ! ಕಾರಣವೇನು ಗೊತ್ತಾ?

team of officials arrested those who were teaching parrot shastra! Do you know the reason?

ಗಿಳಿಶಾಸ್ತ್ರ ಹೇಳುತ್ತಿದ್ದವರನ್ನ ಅರೆಸ್ಟ್ ಮಾಡಿದ ಅಧಿಕಾರಿಗಳ ತಂಡ! ಕಾರಣವೇನು ಗೊತ್ತಾ?
team of officials arrested those who were teaching parrot shastra! Do you know the reason?

SHIVAMOGGA  |  Jan 9, 2024  |  ಇತ್ತೀಚೆಗೆ ಹುಲಿ ಉಗುರು ಮೇಲಿದ್ದ ಇಲಾಖೆಗಳ  ಕಣ್ಣು ಇದೀಗ ಗಿಳಿಶಾಸ್ತ್ರ ಹೇಳುವವರ ಮೇಲೂ ಬಿದ್ದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಗರ ಅರಣ್ಯ ಸಂಚಾರಿ ದಳದ ಪೊಲೀಸರು ಗಿಳಿಶಾಸ್ತ್ರ ಹೇಳುವವರ ಬಳಿಯಲ್ಲಿ ಇದ್ದ ಎರಡು ಗಿಳಿಗಳನ್ನ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಈ ಸಂಬಂಧ ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ. 

ಗಿಳಿಶಾಸ್ತ್ರ

ಇತ್ತೀಚೆಗೆ ಗಿಳಿಶಾಸ್ತ್ರ ಹೇಳುವವರು ಸಿಟಿ ಕಡೆಗಳಲ್ಲಿ ಕಡಿಮೆಯಾಗಿದ್ದು ಹಳ್ಳಿಗಳಲ್ಲಿ ಇವರ ತಿರುಗಾಟ ಕಾಣಸಿಗುತ್ತಿದೆ. ಹಾಗೆ ರಿಪ್ಪನ್​ಪೇಟೆ ಬಳಿ  ಗಿಳಿಶಾಸ್ತ್ರ ಹೇಳುತ್ತಿದ್ದ ಇಬ್ಬರು ಸಾಗರ ಅರಣ್ಯ ಸಂಚಾರಿ ದಳದ ಕೈಗೆ ಸಿಕ್ಕಿಬಿದ್ದಿದ್ದಾರೆ. 

ಇಲ್ಲಿನ ಕೆರೆಹಳ್ಳಿ ಕ್ರಾಸ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಇಬ್ಬರ ಬಳಿಯಲ್ಲಿ ಅರಣ್ಯ ಇಲಾಖೆಯು ಹೇಳುವಂತೆ ಅಪರೂಪದ ಸಂರಕ್ಷಿತ ಉಂಗುರದ ಗಿಳಿಗಳು ಪತ್ತೆಯಾಗಿವೆ.  ಇವುಗಳನ್ನ ಇಂಗ್ಲೀಷ್​ನಲ್ಲಿ Rose-ringed parakeet ಎಂದು ಕರೆಯಲಾಗುತ್ತದೆ. ಕಾಡಿನಲ್ಲಿ ಕಾಣಸಿಗುವ ಇವುಗಳನ್ನ ಪಳಗಿಸಿ ಗಿಳಿಶಾಸ್ತ್ರ ಹೇಳಲು ಬಳಸಿಕೊಳ್ಳುವುದು ಅಪರಾಧ

ಈ ಹಿನ್ನೆಲೆಯಲ್ಲಿ ಗಿಳಿಗಳನ್ನ ವಶಕ್ಕೆ ಪಡೆದ ತಂಡದ ಅಧಿಕಾರಿಗಿಳು ಇಬ್ಬರ ವಿರುದ್ಧ  ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.