ಬೇಳೂರು ಗೋಪಾಲಕೃಷ್ಣರ ನಾಮಪತ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದೇಕೆ!? ಆಮೇಲೇನಾಯ್ತು! ಸಾಗರ ವರದಿ ಇಲ್ಲಿದೆ

Why did Belur Gopalakrishna's nomination spark a controversy? What happened then!

ಬೇಳೂರು ಗೋಪಾಲಕೃಷ್ಣರ ನಾಮಪತ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದೇಕೆ!? ಆಮೇಲೇನಾಯ್ತು! ಸಾಗರ ವರದಿ ಇಲ್ಲಿದೆ
ಬೇಳೂರು ಗೋಪಾಲಕೃಷ್ಣ

KARNATAKA NEWS/ ONLINE / Malenadu today/ SHIVAMOGGA / Apr 22, 2023


ಸಾಗರ  ಶಿವಮೊಗ್ಗ/ #karnatakaelection/  ಸಾಗರ ವಿಧಾನಸಭಾ ಕ್ಷೇತ್ರದ  (sagara assembly constituency) ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಶಾಸಕ ಗೋಪಾಲ ಕೃಷ್ಣ ಬೇಳೂರು ಅವರ ನಾಮಪತ್ರದ ವಿರುದ್ಧ ಬಿಜೆಪಿ ಅಭ್ಯರ್ಥಿ ಶಾಸಕ ಹರತಾಳು ಹಾಲಪ್ಪನವರ ಏಜೆಂಟ್ ರಮೇಶ್ ಚುನಾವಣಾಧಿಕಾರಿಗಳಿಗೆ ತಕರಾರು ಸಲ್ಲಿಸಿ ನಾಮಪತ್ರ ತಿರಸ್ಕರಿಸುವಂತೆ ಮನವಿ ಮಾಡಿದ್ದರು.



ಮನವಿಯಲ್ಲಿ ಏನಿತ್ತು!

ಈ ಮನವಿಯಲ್ಲಿ ಬೇಳೂರು ಗೋಪಾಲಕೃಷ್ಣರವರು ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಲೋಪಗಳಿವೆ ಎಂದು ದೂರಿದ್ದರು. 8 ಅಂಶಗಳನ್ನು ಗುರುತಿಸಿ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು. ಅಲ್ಲದೆ ನಾಮಪತ್ರ ತಿರಸ್ಕರಿಸಬೇಕು ಎಂದು ವಾದಿಸಿದ್ದರು.  



ಸಾಗರಕ್ಕೆ ಡಿಸಿ ದೌಡು!

ಇನ್ನೂ ತಕರಾರು ಕುರಿತು ಜಿಲ್ಲಾಧಿಕಾರಿ ಡಾ.ಆರ್​.ಸೆಲ್ವಮಣಿಯವರಿಗೆ  ಸಾಗರ ಎಸಿ ಪಲ್ಲವಿ ಸಾತೇನಹಳ್ಳಿ ಮಾಹಿತಿ ನೀಡಿದ್ರು. ಇನ್ನೂ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ   ಸಾಗರಕ್ಕೆ ಆಗಮಿಸಿ ಬಿಜೆಪಿಯ ತಕರಾರು ಅರ್ಜಿಯನ್ನು ಪರಿಶೀಲಿಸಿ ಚುನಾವಣೆಯ ನಿಯಮಗಳನ್ನು ವಿವರಿಸಿದರು. 



ಚುನಾವಣಾಧಿಕಾರಿ ಹೇಳಿದ್ದೇನು!?

ಯಾವುದೇ ನಾಮಪತ್ರವನ್ನು ಸ್ವೀಕರಿಸುವಾಗಲೇ ಚುನಾವಣಾಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಿ ನಂತರ ಸ್ವೀಕರಿಸಬೇಕು ಎಂಬ ನಿಯಮವಿದೆ.  

ಇದಕ್ಕೆ ಕಾರಣ ಚುನಾವಣೆಗೆ ಸ್ಪರ್ದಿಸುವ ಅಭ್ಯರ್ಥಿಯ ಹಕ್ಕು ಚ್ಯುತಿಯಾಗಬಾರದು ಎಂಬುದು. ಈ ಕಾರಣದಿಂದ ನಾಮಪತ್ರ ಸಲ್ಲಿಕೆಯ ಹಂತದಲ್ಲಿಯೇ ನಾಮಪತ್ರ ತಿರಸ್ಕೃತ ಅಥವಾ ಪುರಸ್ಕೃತ ಖಚಿತವಾಗಬೇಕಿದೆ.

 ನಂತರದ ತಕರಾರುಗಳನ್ನು ಚುನಾವಣಾಧಿಕಾರಿಗಳು ಪುರಸ್ಕರಿಸುವುದಿಲ್ಲ  ಎಂದು ಸ್ಪಷ್ಟಪಡಿಸಿದರು. 

ಕಾಂಗ್ರೆಸ್ ಆಕ್ರೋಶ

ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ  ಕಾಂಗ್ರೆಸ್ ಪಕ್ಷದ ಸಾಗರ ಪಟ್ಟಣದ ಅಧ್ಯಕ್ಷ ಐ.ಎನ್.ಸುರೇಶ್‌ ಬಾಬು ಪ್ರತಿಭಾರಿಯೂ ಬಿಜೆಪಿಯಿಂದ ಇಂತ ಹ ಕ್ಷುಲ್ಲಕ ಕಾರಣ ನೀಡಿ ತಕರಾರು

ಸಲ್ಲಿಸುವ ಕಾರ್ಯಗಳನ್ನು ಮಾಡುತ್ತಲೇ ಇರುತ್ತದೆ. ಹಿಂದೆ  ಕಾಗೋಡು ತಿಮ್ಮಪ್ಪನವರು ಸ್ಪರ್ಧಿಸಿರುವಾಗಲೂ ಹೀಗೆ ತಕರಾರು ಸಲ್ಲಿಸಿದ್ದರು ಎಂದು ದೂರಿದ್ದಾರೆ. 



Malenadutoday.com Social media

Tags:Kannadanewspaper, kannadanewslive, kannadanewsonline, kannadanewschannellist, kannadanewspaperlist, kannadanewsnow, kannadanewshunt, kannadanewspaperonline, kannadanewschannel, kannadanewsanchorslist, kannadanewsapp, kannadanewsarticles, malenadutoday, kannadanewsappdownload, kannadanewsall, kannadanewsshivamogga, kannadanewsnow, malenadutoday, malenadu news, malenadu express, malenadu live, #KannadaNews, #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,   #karnatakaassemblyelection2023,