ಸಿಗಂದೂರು ಲಾಂಚ್​ನಲ್ಲಿ ವಾಹನ ಸಂಚಾರಕ್ಕೆ ನಿಷಿದ್ಧ! ಪರ್ಯಾಯ ಮಾರ್ಗ ಯಾವುದು? ಪ್ರವಾಸಿಗರ ಗಮನಕ್ಕೆ!

Vehicle traffic restriction at sigandur launch What is the alternative way to get to sigandur Chowdeshwari temple? To the attention of the tourists!

ಸಿಗಂದೂರು ಲಾಂಚ್​ನಲ್ಲಿ ವಾಹನ ಸಂಚಾರಕ್ಕೆ ನಿಷಿದ್ಧ! ಪರ್ಯಾಯ ಮಾರ್ಗ ಯಾವುದು? ಪ್ರವಾಸಿಗರ ಗಮನಕ್ಕೆ!

KARNATAKA NEWS/ ONLINE / Malenadu today/ Jun 14, 2023 SHIVAMOGGA NEWS

ಸಾಗರ ತಾಲ್ಲೂಕಿನ  ಹೊಳೆಬಾಗಿಲು ಲಾಂಚ್ ಸೇವೆ ಇವತ್ತಿನಿಂದ ಮಳೆ ಬಂದು ಹಿನ್ನೀರಿನಲ್ಲಿ ನೀರಾಗುವರೆಗೂ, ಜನರಿಗಷ್ಟೇ ಸೀಮಿತವಾಗಲಿದೆ. ಏಕೆಂದರೆ, ಲಾಂಚ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ.  ಶರಾವತಿ ಹಿನ್ನೀರು ತೀವ್ರ ಕುಸಿತ ಕಂಡಿದ್ದು, ಇವತ್ತಿನಿಂದ ಹೊಳೆಬಾಗಿಲು ಲಾಂಚ್‌ನಲ್ಲಿ ಜನರ ಸಂಚಾರಕ್ಕಷ್ಟೆ ಅವಕಾಶವಿದ್ದು, ವಾಹನ ಸಂಚಾರ ಸ್ಥಗಿತಗೊಳ್ಳಲಿದೆ.

ಪ್ಲೀಸ್ ಭದ್ರಾವತಿ ವಿಐಎಸ್​ಎಲ್​ ಕಾರ್ಖಾನೆಯನ್ನು ಮುಚ್ಚಬೇಡಿ! ಕೇಂದ್ರ ಉಕ್ಕು ಪ್ರಾಧಿಕಾರಕ್ಕೆ ಸಂಸದರ ಮನವಿ

ಶರಾವತಿ ಹಿನ್ನೀರಿನಲ್ಲಿ ದಿನ ಒಂದರೆಡು ಅಡಿಗಳ ರೀತಿಯಲ್ಲಿ ನೀರು ತಗ್ಗುತ್ತಿದೆ, ಮಳೆ ಬರುವ ಮನ್ಸೂಚನೆಗಳು ಸಹ ಸ್ಪಷ್ಟವಾಗುತ್ತಿಲ್ಲ. ಹೀಗಾಗಿ  ನೀರಿನಲ್ಲಿದ್ದ ಮರದ ದಿಮ್ಮಿಗಳು, ಮರಳು ದಿಬ್ಬಗಳು ಲಾಂಚಿನ ತಳಭಾಗಕ್ಕೆ ತಾಗುತ್ತಿವೆ.ಹೀಗಾಗಿ ಲಾಂಚ್​ ಅಪಘಾತಕ್ಕೀಡಾಡುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಕೇವಲ ಜನರನ್ನ ಮಾತ್ರ ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸಲು ಅವಕಾಶ ಕಲ್ಪಿಸಲಾಗಿದೆ. 

ಸಿಗಂದೂರು ಭಕ್ತರಿಗೆ ಸಮಸ್ಯೆ

ಸ್ಥಳೀಯರ ಸಂಚಾರಕ್ಕೆಂದೆ ಲಾಂಚ್ ಮೀಸಲಿದ್ದರೂ ಸಹ, ಸಿಗಂದೂರು ಚೌಡೇಶ್ವರಿಯ ಭಕ್ತರು ಹೊಳೆಬಾಗಿಲು ಲಾಂಚ್​ನಲ್ಲಿಯೇ ತೆರಳಿ ಸಿಗಂದೂರು ಚೌಡೇಶ್ವರಿಯ ದರ್ಶನ ಪಡೆಯುತ್ತಿದ್ದರು. ಆದರೆ,  ಇದೀಗ ತುರ್ತು  ವಾಹನಗಳು ಸೇರಿದಂತೆ ಯಾವುದೇ ವೆಹಿಕಲ್​ಗಳನ್ನು  ಕೂಡ ಲಾಂಚ್ ನಲ್ಲಿ ಹಾಕಲು ಅವಕಾಶವಿಲ್ಲದ್ದರಿಂದ ಭಕ್ತರು ಹಾಗೂ  ಹಿನ್ನಿರಿನ ಜನರಿಗೆ ಇನ್ನಿಲ್ಲದ ಸಮಸ್ಯೆಯೇ ಎದುರಾಗುತ್ತಿದೆ. 

ಪರ್ಯಾಯ ಮಾರ್ಗೇನು?

 ಸಿಗಂದೂರಿಗೆ ಬರುವ ಭಕ್ತರು ತಮ್ಮ ವಾಹನಗಳನ್ನು ಅಂಬಾರಗೋಡಿನಲ್ಲಿ ನಿಲ್ಲಿಸ ಬೇಕಿದೆ. ಆನಂತರ ಅಲ್ಲಿಗೆ ಬಂದು ತಮ್ಮ ವಾಹನಗಳನ್ನು ಹತ್ತಿ ವಾಪಸ್ ಆಗಬೇಕಿದೆ. ಇಲ್ಲದಿದ್ದರೇ, ಹೊಸನಗರ ಮಾರ್ಗವಾಗಿ ಸಿಗಂದೂರಿಗೆ ಹೋಗಬೇಕಾಗುತ್ತದೆ. ಹೊಸನಗರ, ನಗರ, ಸಂಪೆಕಟ್ಟೆ- ನಿಟ್ಟೂರು ಮಾರ್ಗವಾಗಿ ಸುತ್ತು ಬಳಸಿ, ದೇವಸ್ಥಾನಕ್ಕೆ ಹೋಗಬೇಕಾದ ಅನಿವಾರ್ಯತೆ ಬರುತ್ತದೆ.

 ದಡದಲ್ಲಿ ವಾಹನ ದಟ್ಟಣೆಯೂ ಹೆಚ್ಚಾಗ ಲಿದ್ದು, ಜನದಟ್ಟಣೆಯಿಂದಾಗಿ ಲಾಂಚ್‌ನಲ್ಲಿ ನೂಕುನುಗ್ಗಲು ಉಂಟಾಗುವ ಸಾಧ್ಯತೆಯಿದೆ. ಅಲ್ಲದೆ, ಪ್ಲಾಟ್ ಫಾರಂ ಕೆಸರಾಗಿದ್ದು, ಜಾಗ್ರತೆ ಯಿಂದ ಪ್ರವಾಸಿಗರು ಪ್ರಯಾಣಿಸಬೇಕಾಗಿದೆ ಎಂದು ಸಾಗರ ಉಪ ಕಡವು ನಿರೀಕ್ಷಕರು ಸಾರ್ವಜನಿಕರಿಗೆ ಎಚ್ಚರಿಸಿದ್ದಾರೆ.

ಗ್ಯಾರಂಟಿ ಬೆನ್ನಲ್ಲೆ, ಬಿಜೆಪಿ ವಿರುದ್ಧ ಶುರುವಾಗಲಿದೆ ಕಾಂಗ್ರೆಸ್ ಅಭಿಯಾನ! ಏನದು?