ಸಾಗರ ಸುದ್ದಿ : ಪೌರಾಯುಕ್ತರ ಮೇಲೆ ಹಲ್ಲೆ ಖಂಡಿಸಿ ಸಾಗರ ತಾಲ್ಲೂಕಿನಲ್ಲಿ ಪ್ರತಿಭಟನೆ

ಸಾಗರ ಸುದ್ದಿ :  ಪೌರಾಯುಕ್ತರ ಮೇಲೆ ಹಲ್ಲೆ ಖಂಡಿಸಿ ಸಾಗರ ತಾಲ್ಲೂಕಿನಲ್ಲಿ ಪ್ರತಿಭಟನೆ

ಪೌರಾಯುಕ್ತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಸಾಗರ (ಶಿವಮೊಗ್ಗ), ಡಿಸೆಂಬರ್,೦೧:ಸಾಗರದ ಪ್ರಮುಖ ಬೀದಿಯಲ್ಲಿ ಹಣ್ಣು ವ್ಯಾಪಾರಿ ತೆರವುಗೊಳಿಸಿರುವ ನಗರಸಭೆ ಪೌರಾಯುಕ್ತರ ವಿರುದ್ಧ ಪ್ರತಿಭಟಿಸಿ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿ ಸಿರುವ ಕಾಂಗ್ರೆಸ್ ಮುಖಂಡರು ಮತ್ತು ಹಣ್ಣು ವ್ಯಾಪಾ ರಿಗಳ ತಂಡದ ದೌರ್ಜನ್ಯ ಖಂಡಿಸಿ ನಗರಸಭೆ ಎದುರು ನಗರಸಭೆ ಆಡಳಿತ ಹಾಗೂ ಅಧ್ಯಕ್ಷರು,ಪೌರಸೇವಾ ನೌಕರರು ಮತ್ತು ಬಿಜೆಪಿ ಪ್ರಮುಖರು ಪ್ರತಿಭಟನೆ ನಡೆಸಿದರು.

ವಿ.ಹೆಚ್.ಪಿ ಮುಖಂಡನಿಗೆ ಸೆಂಟ್ರಲ್ ಜೈಲಿನಿಂದ ಹಣಕ್ಕಾಗಿ ಬೆದರಿಕೆ ಕರೆ! ಹಣ ಕೇಳಲು ಬಂದು ಸಿಕ್ಕಿಬಿದ್ದ ಕಟ್ಟಪ್ಪ !  ರೌಡಿಗಳಿಗೆ ಜೈಲುಗಳೇ ಹಣ ಸುಲಿಗೆಗೆ ರಾಜಮಾರ್ಗವಾಗುತ್ತಿದೆಯಾ?  BREAKING NEWS

ಬುಧವಾರ ಸಂಜೆ ಪ್ರತಿಭಟನೆಗೆ ಜನಜಮಾಯಿಸಿರುವಾಗ ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ.ನಾಗಪ್ಪ ಅವರ ಸಹೋದರ ಹೆಚ್.ಕೆ.ಗಣಪತಿ ಅವರು ಪಾಲ್ಗೊಂಡಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ಗಣಪತಿ ಮೃತಪಟ್ಟಿದ್ದರು.

ಇದರಿಂದ ಆಕ್ರೋಶಂಡ  ಪ್ರತಿಭಟನೆ ಕಾವು ಏರತೊಡಗಿತು.ಗುರುವಾರ ಬೆಳಿಗ್ಗೆ ಮೃತ ದೇಹ ಮರಣೋತ್ತರ ಪರೀಕ್ಷೆಯ ನಂತರ ನಗರಸಭೆ ಆವರಣಕ್ಕೆ ಮೃತ ದೇಹವನ್ನು ತರಲಾಗಿತ್ತು. ಈ ವೇಳೆ  ಎಲ್ಲಾ ಪಕ್ಷದ ಮುಖಂಡರುಗಳು ಪ್ರಮುಖರುಗಳು ಪೌರಾಯುಕ್ತರ ಸಹೋದರನ ಸಾವಿನ ಕುರಿತು ಸಂತಾಪ ಸೂಚಿಸಿದರು. ಇನ್ನೂ ಇದೇ ವೇಳೇ ನಗರಸಭೆ ಪೌರಸೇವಾ ನೌಕರರು ಪ್ರತಿಭಟನೆ ನಡೆಸಿದರು.

ಸರ್ಕಾರಿ ಅಧಿಕಾರಿಗಳೇ ಹುಷಾರ್ |  ರಹಸ್ಯ ಕ್ಯಾರ್ಯಾಚರಣೆ ​ ಹೆಸರಿನಲ್ಲಿ ಹೆದರಿಸುವವರಿದ್ದಾರೆ? 

ಪೌರಾಯುಕ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ಮುಂದುವರಿಸಿರುವ ಪೌರ ನೌಕರರು ಹಲ್ಲೆಕೋರರ ಬಂಧಿಸುವ ತನಕ ನಗರದ ಸ್ವಚ್ಚತೆ ನೀರು ನೈರ್ಮಲ್ಯ ನಿರ್ವಹಣೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದ್ದಿದ್ದರು. 

ಪೌರಾಯುಕ್ತರ ಮೇಲೆ ಹಲ್ಲೆ-ಪ್ರಕರಣ ದಾಖಲು

ಇನ್ನೊಂದೆಡೆ,  ಪ್ರತಿಭಟನೆ ಸಂದರ್ಭದಲ್ಲಿ ಮನವಿ ಸ್ವೀಕರಿಸಿ ಪ್ರತಿಭಟನಕಾರ ರೊಂದಿಗೆ ಮಾತನಾಡುತ್ತಿರುವಾಗ ನಗರಸಭೆ ಪೌರಾಯುಕ್ತ ಹೆಚ್.ಕೆ.ನಾಗಪ್ಪನವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನಗರ ಸಭೆಯೊಳಗೆ 50 ಜನರು ನುಗ್ಗಿರುವ ಆರೋಪ ಸಂಬಂಧ  ಪೌರನೌಕರರ ಸಂಘದ ಅಧ್ಯಕ್ಷ ನಾಗರಾಜ್ ನೀಡಿರುವ ದೂರಿನನ್ವಯ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಡಿಗ ಸಮುದಾಯದ ಪ್ರತಿಭಟನೆ-ಪೌರಾಯುಕ್ತರ ಮೇಲಿನ ಹಲ್ಲೆಕೋರರ ಬಂಧನಕ್ಕೆ ಆಗ್ರಹ

ಸಾಗರದ ಪ್ರಮುಖ ಬೀದಿಯಲ್ಲಿ ಹಣ್ಣು ವ್ಯಾಪಾರಿ ತೆರವುಗೊಳಿಸಿರುವ ನಗರಸಭೆ ಪೌರಾಯುಕ್ತರ ವಿರುದ್ಧ ಪ್ರತಿಭಟಿಸಿ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿರುವ ಹಲ್ಲೆಕೋರರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಈಡಿಗ ಸಮು ದಾಯದ ಪ್ರಮುಖರಿಂದ ಸಾಗರ ನಗರಸಭೆ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಈಡಿಗ ಸಮುದಾಯದ ಅಧಿಕಾರಿ ಪೌರಾಯುಕ್ತ ನಾಗಪ್ಪನವರ ಮೇಲೆ ಹಲ್ಲೆ ದೌರ್ಜನ್ಯ ಖಂಡಿಸಿದರು.ಪೊಲೀಸರು ತಕ್ಷಣ ಹಲ್ಲೆಕೋರರ ವಿರುದ್ಧ ಕ್ರಮವಹಿಸದೆ ಇದ್ದಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಸಾಗರ ಪೇಟೆ ಪೊಲೀಸ್ ಠಾಣೆ ಎದುರು ರಾತ್ರಿ ಜಮಾಯಿಸಿ ಎಚ್ಚರಿಸಿದರು.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link