BREAKING NEWS/ ಶಿವಮೊಗ್ಗಕ್ಕೆ ಮತ್ತೆ ಬರಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ! ಈ ಸಲ ಎಲ್ಲಿಗೊತ್ತಾ ಕಾರ್ಯಕ್ರಮ

BREAKING NEWS/ PRIME MINISTER Narendra Modi to return to Shimoga!

BREAKING NEWS/  ಶಿವಮೊಗ್ಗಕ್ಕೆ ಮತ್ತೆ ಬರಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ! ಈ ಸಲ ಎಲ್ಲಿಗೊತ್ತಾ ಕಾರ್ಯಕ್ರಮ
BREAKING NEWS/ ಶಿವಮೊಗ್ಗಕ್ಕೆ ಮತ್ತೆ ಬರಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ! ಈ ಸಲ ಎಲ್ಲಿಗೊತ್ತಾ ಕಾರ್ಯಕ್ರಮ

KARNATAKA NEWS/ ONLINE / Malenadu today/ SHIVAMOGGA / Apr 22, 2023


ಶಿವಮೊಗ್ಗ/   ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಮತ್ತೆ ಬರುತ್ತಿದ್ದಾರೆ. ಇದು ಈ ವರ್ಷದಲ್ಲಿಯೇ ಅವರ ಮೂರನೇ ಭೇಟಿ.  ಹೌದು, ಮೊದಲು ಶಿವಮೊಗ್ಗ ವಿಮಾನ ನಿಲ್ದಾಣ (Shivamogga airport )  ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ , ಏರ್​ಪೋರ್ಟ್​ನ ಅನಾವರಣದಿಂದ ಆಗುವ ಪ್ರಯೋಜನದ ಬಗ್ಗೆ ಹೇಳಿದ್ದರು. 


Read/ BREAKING NEWS/ ಶಿವಮೊಗ್ಗ ಜೆಡಿಎಸ್​ಗೆ ಕಾಂಗ್ರೆಸ್​ & ಬಿಜೆಪಿಯಿಂದ ಪ್ಲಸ್​ 1/ ವರ್ಕ್​ ಆಗುತ್ತಾ ಹೊಸ ಸ್ಟ್ಯಾಟರ್ಜಿ 

ಎರಡನೇ ಸಲ ದಾವಣಗೆರೆಯಲ್ಲಿ ಸಂಕಲ್ಪಯಾತ್ರೆ ಸಮಾವೇಶದಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿಯವರು ಅಲ್ಲಿಂದ ವಾಪಸ್ ದೆಹಲಿಗೆ ಹೋಗಲು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಿಕೊಂಡಿದ್ದರು.

ವಿಶೇಷ ವಿಮಾನ ನಿಲ್ದಾಣದಲ್ಲಿ ಶಿವಮೊಗ್ಗ ಏರ್​ಪೋರ್ಟ್​ನಿಂದ ದೆಹಲಿಗೆ ವಾಪಸ್ ಆಗಿದ್ದರು. ಚುನಾವಣೆಯ ಹೊಸ್ತಿನಲ್ಲಿನಲ್ಲಿ ಈ ಭೇಟಿಯು ಸಹ ಸಾಕಷ್ಟು ಕುತೂಹಲ ಮೂಡಿಸಿತ್ತು. 

ಇದೀಗ ಮತ್ತೆ ಪ್ರಧಾನಿ ನರೇಂದರ ಮೋದಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಅಲ್ಲದೆ ಅಬ್ಬರದ ಚುನಾವಣಾ ಪ್ರಚಾರವನ್ನು ಕೈಗೊಳ್ಳಲಿದ್ದಾರೆ. ಅಂದುಕೊಂಡಂತೆ ನಡೆದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮೋದಿ  ಪ್ರಚಾರಕ ಕೈಗೊಳ್ಳಲಿದ್ದಾರೆ. 

ಮೇ 1ರಂದು ಅವರು ಶಿವಮೊಗ್ಗಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಆಯನೂರಿನಲ್ಲಿ ಮೋದಿ ರ‍್ಯಾಲಿ ನಡೆಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. 

ಆಯನೂರಿನ ಸಮಾವೇಶದಲ್ಲಿ ಲಕ್ಷಾಂತರ ಮಂದಿಯನ್ನು ಸೇರಿಸಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ಕರಾವಳಿಯಲ್ಲಿ ಅಂಕೋಲಾದಲ್ಲಿ ಪ್ರಚಾರ ಕೈಗೊಳ್ಳಲಿರುವ ಪ್ರಧಾನಿ ಆನಂತರ ಶಿವಮೊಗ್ಗಕ್ಕೆ ಬರಲಿದ್ದಾರಂತೆ. ಒಟ್ಟು 18 ರ್ಯಾಲಿಗಳನ್ನು ಅವರು ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. 



Malenadutoday.com Social media

Tags:Kannadanewspaper, kannadanewslive, kannadanewsonline, kannadanewschannellist, kannadanewspaperlist, kannadanewsnow, kannadanewshunt, kannadanewspaperonline, kannadanewschannel, kannadanewsanchorslist, kannadanewsapp, kannadanewsarticles, malenadutoday, kannadanewsappdownload, kannadanewsall, kannadanewsshivamogga, kannadanewsnow, malenadutoday, malenadu news, malenadu express, malenadu live, #KannadaNews, #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,   #karnatakaassemblyelection2023,