ನಿವೇಶನ ಕೊಟ್ಟಿಲ್ಲ ಅಂತಾ ನೀರಿನ ಟ್ಯಾಂಕ್​ ಹತ್ತಿದ ಯುವಕ!

Young man climbs into water tank for not being given a plot

ನಿವೇಶನ ಕೊಟ್ಟಿಲ್ಲ ಅಂತಾ ನೀರಿನ ಟ್ಯಾಂಕ್​ ಹತ್ತಿದ ಯುವಕ!

KARNATAKA NEWS/ ONLINE / Malenadu today/ May 1, 2023 GOOGLE NEWS


ಸಾಗರ/ ಶಿವಮೊಗ್ಗ/ ಇಲ್ಲಿನ ವರದಳ್ಳಿ ರಸ್ತೆಯಲ್ಲಿ ಸಿಗುವ ಅಗ್ನಿಶಾಮಕ ಠಾಣೆ ಎದುರು ಇರುವ ನೀರಿನ ಟ್ಯಾಂಕ್ ಹತ್ತಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ ಘಟನೆ ಇವತ್ತು ಬೆಳಗ್ಗೆ ನಡೆದಿದೆ. 

ಏನಿದು ಘಟನೆ?   

ಸರ್ಕಾರದಿಂದ ನಿವೇಶನ ಒದಗಿಸಿಲ್ಲ ಎಂದು ದೂರಿರುವ ಯುವಕನೊಬ್ಬ ನಿವೇಶನ ಒದಗಿಸುವಂತೆ ಆಗ್ರಹಿಸಿ ನೀರಿ ಟ್ಯಾಂಕ್ ಹತ್ತಿ ಪ್ರತಿಭಟನೆಗೆ ಮುಂದಾಗಿದ್ದ. ಅಲ್ಲದೆ ಬೇಡಿಕೆ ಈಡೇರದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ಈತ ನೀರಿನ ಟ್ಯಾಂಕ್​ ಹತ್ತಿದ ವಿಚಾರ ತಿಳಿಯುತ್ತಲೇ ಸಾಗರ ಟೌನ್​ ಪೊಲೀಸ್ (sagara town police station ) ಮತ್ತು ಅಗ್ನಿಶಾಮ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. 



ಹಾಗೂ ಹೀಗೂ ಮಾಡಿ, ಮೇಲಕ್ಕೆ ಹತ್ತಿದ್ದ ಯುವಕನನ್ನ ಸಮಾಧಾನ ಪಡಿಸಲು ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿ ಪ್ರಯತ್ನಿಸಿದ್ದಾರೆ. ಅಷ್ಟೊತ್ತಿಗೆ ನಗರಸಭೆ ಸದಸ್ಯಗಣೇಶ್ ಪ್ರಸಾದ್ ಮತ್ತು ಸವಿತಾ ಸಮಾಜದ ಸ್ಥಳೀಯ ಮುಖಡಂರು ರವಿ ಕುಮಾರ್​ ಸ್ಥಳಕ್ಕೆ ಬಂದು ಯುವಕನ ಮನವೊಲಿಸಿದ್ದಾರೆ. 

ನೀರಿನ ಟ್ಯಾಂಕ್​ ಮೇಲಕ್ಕತ್ತಿ ಪ್ರತಿಭಟಿಸಿದ ಯುವಕ ಈಶ್ವರ್ ಎಂದು ಗೊತ್ತಾಗಿದ್ದು, ಆತ ಸ್ಥಳೀಯವಾಗಿ ಅಂಗಡಿಯೊಂದು ಇಟ್ಟುಕೊಂಡಿದ್ಧಾನೆ ಎಂದು ತಿಳಿದುಬಂದಿದೆ.  

ಶಿವಮೊಗ್ಗಕ್ಕೆ ಇಂದು ಅಮಿತ್ ಶಾ ಆಗಮನ



ಶಿವಮೊಗ್ಗ/ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಹಿನ್ನೆಲೆಯಲ್ಲಿ ಇವತ್ತು ಶಿವಮೊಗ್ಗಕ್ಕೆ ಬಿಜೆಪಿ ವರಿಷ್ಟ ಕೇಂದ್ರ ಗೃಹಸಚಿವ ಅಮಿತ್ ಶಾ (home minister amit shah) ಆಗಮಿಸಲಿದ್ದಾರೆ. 

ಅಮಿತ್​ ಶಾ ಆಗಮನಕ್ಕೆ ಸಕಲ ಸಿದ್ಧತೆ 

ಅಮಿತ್ ಶಾ ಆಗಮನಕ್ಕಾಗಿ ಬಿಜೆಪಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಶಿವಮೊಗ್ಗ ಬಿಜೆಪಿಯಲ್ಲಿ ಹೊಸ ಹುರುಪು ಮನೆ ಮಾಡಿದೆ. ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿಕೊಂಡಿರುವ ಬಿಜೆಪಿ ಕಾರ್ಯಕರ್ತರಿಗೆ ಇವತ್ತು ಅಮಿತ್ ಶಾ ಮತ್ತೊಂದಿಷ್ಟು ಸ್ಪೂರ್ತಿ ತುಂಬಲಿದ್ದಾರೆ. 

ಎಷ್ಟೊತ್ತಿಗೆ ಬರುತ್ತಾರೆ ಅಮಿತ್ ಶಾ

ಬಿಜೆಪಿ ಕಚೇರಿಯ ಮಾಹಿತಿ ಪ್ರಕಾರ ಇವತ್ತು ದಿನಾಂಕ  01.05.23 ರ  ಸೋಮವಾರ  ಸಂಜೆ  06.00 ಕ್ಕೆ 

ಶಿವಮೊಗ್ಗ ನಗರದ  ಶಿವಪ್ಪ ನಾಯಕ ವೃತ್ತ ದಿಂದ  ನೆಹರು ರಸ್ತೆ, ದುರ್ಗಿ ಗುಡಿ  ,ಜೈಲ್ ರಸ್ತೆ, ಲಕ್ಷ್ಮಿ ಟಾಕೀಸ್  ವರೆಗೆ  ಕೇಂದ್ರ  ಗೃಹ ಸಚಿ ಅಮಿತ್ ಶಾ  ರವರು  ಬಿಜೆಪಿ  ಚುನಾವಣಾ  ರೋಡ್ ಶೋ ನಡೆಸಲಿದ್ದಾರೆ. 

ಶೂನ್ಯ ಸಂಚಾರ 

ಇನ್ನೂ ಅಮಿತ್ ಶಾ ರೋಡ್​ ಶೋ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಆಗುವ ಸಾದ್ಯತೆ ಇದ್ದು, ಬದಲಿ ಮಾರ್ಗವನ್ನು ವಾಹನ ಸವಾರರು ಬಳಸುವಂತೆ ಸೂಚಿಸಲಾಗಿದೆ. 

ಮಧ್ಯಾಹ್ನ 03:00 ರಿಂದ ಸಂಜೆ 07:00 ಗಂಟೆಯವರೆಗೆ ಬಿಹೆಚ್ ರಸ್ತೆಯ ಕರ್ನಾಟಕ ಸಂಘ, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತದ ಗೋಪಿ ವೃತ್ತ, ಜೈಲ್ ವೃತ್ತ, ಲಕ್ಷ್ಮೀ ಟಾಕೀಸ್ ವರೆಗೆ ಶೂನ್ಯ ಸಂಚಾರ ಮಾರ್ಗವಾಗಿರಲಿದೆ. ಅಂದರೆ, ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇರೋದಿಲ್ಲ. ಅಲ್ಲದೆ ವಾಹನಗಳ ಪಾರ್ಕಿಂಗ್​ ಕೂಡ ಮಾಡುವಂತಿಲ್ಲ. 

ಪಾರ್ಕಿಂಗ್​ ಎಲ್ಲಿ?

ಸುಗಮ ಸಂಚಾರದ ದೃಷ್ಠಿಯಿಂದ ಸಾರ್ವಜನಿಕರು ಸದರಿ  ಮಾರ್ಗಗಳನ್ನು ಹೊರತು ಪಡಿಸಿ, ಬದಲೀ ಮಾರ್ಗಗಳನ್ನು ಬಳಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ. 

ಇನ್ನೂ   ರೋಡ್ ಶೋ ನಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಫ್ರೀಡಂ ಪಾರ್ಕ್ ಮೈದಾನ, ಎನ್ಇಎಸ್ ಮೈದಾನ ಮತ್ತು ಸೈನ್ಸ್ ಕಾಲೇಜ್ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 

ಸಾಗರದಲ್ಲಿ ಕರಡಿ ದಾಳಿ

ಸಾಗರ/ಶಿವಮೊಗ್ಗ/  ಇಲ್ಲಿನ ಜೋಗದ ಹೆನ್ನಿ ಬಳಿಯಲ್ಲಿ ಕರಡಿ ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ. ದಾಳಿಯಲ್ಲಿ ತಿಮ್ಮನಾಯ್ಕ್ ಎಂಬವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. 

ಸೌದೆ ಒಟ್ಟು ಮಾಡಲು ಅಂತಾ ತೋಟಕ್ಕೆ ತೆರಳಿದ್ದ ಅವರ ಮೇಲೆ ಅಲ್ಲಿದ್ದ ಕರಡಿಯು ದಾಳಿ ನಡೆಸಿದೆ. ಏಕಾಯೇಕಿ ನಡೆದ ದಾಳಿಯಲ್ಲಿ ತಿಮ್ಮನಾಯ್ಕ್​ರಿಗೆ ತಪ್ಪಿಸಿಕೊಳ್ಳಲು ಸಹ ಆಗಲಿಲ್ಲ. ಜೋರಾಗಿ ಕಿರುಚಿಕೊಂಡಿದ್ದಾರೆ. ಈ ವೇಳೇ ಕರಡಿ ಅಲ್ಲಿಂದ ಕಾಲ್ಕಿತ್ತಿದೆ. 



ಇದನ್ನೂ ಓದಿ / ಒಂದೇ ದಿನ 90 ಲಕ್ಷದ ಎಣ್ಣೆ ಜಪ್ತಿ/ ಶಿಕಾರಿಪುರದಲ್ಲಿ ಭರ್ಜರಿ ಹಣ ಪತ್ತೆ/  ಒಂದೇ ರಾತ್ರಿ 19 ಪಿಟ್ಟಿಕೇಸ್/ ಎ.ಎ. ಸರ್ಕಲ್​ ನಲ್ಲಿ ರೂಟ್ ಮಾರ್ಚ್​! ಪೊಲೀಸ್ ನ್ಯೂಸ್​ 

 

ಇವರ ಚೀರಾಟ ಕೇಳಿಸ್ತಿದ್ದಂತೆ, ಸ್ಥಳೀಯರು ಓಡಿ ಬಂದಿದ್ದಾರೆ. ತೀವ್ರವಾದ ಗಾಯಗಳಾಗಿದ್ದ ತಿಮ್ಮನಾಯ್ಕ್​ರನ್ನ ತಕ್ಷಣವೆ ಆಸ್ಪತ್ರೆಗೆ ರವಾನಿಸಿದ್ದಾರೆ.  ಸಾಗರ ಉಪವೀಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅವರನ್ನು ಶಿವಮೊಗ್ಗ ಮೆಗ್ಗಾನ್​ ಆಸ್ಪತ್ರೆಗೆ ರವಾನಿಸಲಾಗಿದೆ. 

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 

ಘಟನೆಯಲ್ಲಿ ತಿಮ್ಮನಾಯ್ಕ್​ರಿಗೆ ಕಣ್ಣಿಗೆ ತೀವ್ರ ಸ್ವರೂಪದ ಹಾನಿಯಾಗಿದ್ದು, ಮುಖದ ತುಂಬೆಲ್ಲಾ ಗಾಯಗಳಾಗಿವೆ. ಘಟನೆ ಬಗ್ಗೆ ತಿಳಿದ ಸ್ಥಳೀಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. 




Malenadutoday.com Social media