ಭದ್ರಾವತಿಯಲ್ಲಿ ಅನುಮಾನಸ್ಪದ ವ್ಯಕ್ತಿ ಅರೆಸ್ಟ್ ಚಿನ್ನದ ಅಂಗಡಿ ಮಾಲೀಕನಿಗೆ ಶಾಕ್ | ದಾವಣಗೆರೆಗೆ ಹೋಗಿ ಬರುವಷ್ಟರಲ್ಲಿ ಇದ್ದ ಜಾಗದಲ್ಲಿ ಇರಲಿಲ್ಲ ಬೈಕ್!

Shimoga Malenaduoday Short News

ಭದ್ರಾವತಿಯಲ್ಲಿ ಅನುಮಾನಸ್ಪದ ವ್ಯಕ್ತಿ ಅರೆಸ್ಟ್   ಚಿನ್ನದ ಅಂಗಡಿ ಮಾಲೀಕನಿಗೆ ಶಾಕ್ | ದಾವಣಗೆರೆಗೆ ಹೋಗಿ ಬರುವಷ್ಟರಲ್ಲಿ ಇದ್ದ ಜಾಗದಲ್ಲಿ ಇರಲಿಲ್ಲ ಬೈಕ್!
Shimoga Malenaduoday Short News

Shivamogga Mar 5, 2024   ಶಿವಮೊಗ್ಗದ ವಿವಿಧ ಪೊಲೀಸ್ ಸ್ಟೇಷನ್​​ಗಳಲ್ಲಿ ದಾಖಲಾದ ಪ್ರಕರಣಗಳ ವಿವರ ಇಲ್ಲಿದೆ 

1) Bhadravathi Old Town PS Cr NO:0029/2024 NARCOTIC DRUGS AND PSYCHOTROPIC SUBSTANCES ACT, 1985 (U/s-27(b))

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಕಣ್ಣಪ್ಪ ಆಲೇಮನೆ ರಸ್ತೆ ಪಕ್ಕದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ..  ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾ ಇದ್ದುದ್ದರಿಂದ ಆತನನ್ನ ವಶಕ್ಕೆ ಪಡೆದು  ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೇ , ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ  ವೈಧ್ಯಾಧಿಕಾರಿಗಳು ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿರುವುದಾಗಿ ವರದಿ ನೀಡಿದ್ದಾರೆ. ಈ ಸಂಬಂಧ ಕೇಸ್ ದಾಖಲಿಸಲಾಗಿದೆ. 

 

2) Vinobanagara PS Cr NO:0030/2024 U/s-379 IPC

ಶಿವಮೊಗ್ಗದ ಸೋಮಿನಕೊಪ್ಪ ರಸ್ತೆಯಲ್ಲಿ ಬೈಕ್​ವೊಂದು ಕಳುವಾದ ಬಗ್ಗೆ ವಿನೋಬನಗರ ಪೊಲೀಸ್ ಸ್ಟೇಷನ್​​ನಲ್ಲಿ ಕಂಪ್ಲೆಂಟ್ ಆಗಿದೆ. :29/02/2024 ರಂದು ರಾತ್ರಿ 10-00 ಗಂಟೆಯ ಸಮಯದಲ್ಲಿ ಕೆಎ 15 ಈಡಿ 5428 ಸುಜುಕಿ ಆಕ್ಸಸ್ 125 ಸ್ಕೂಟಿಯನ್ನು ಮನೆಯ ಮುಂದೆ ನಿಲ್ಲಿಸಿದ್ದು, ನಂತರ ಮಾರನೇ ದಿನ ಬೆಳಗ್ಗೆ 08-00 ಗಂಟೆಗೆ ನೋಡಿದಾಗ ಸ್ಕೂಟಿ ಕಾಣಿಸಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು  ಗೊತ್ತಾಗಿದೆ. ಹೀಗಾಗಿ 38,640 ಮೌಲ್ಯ ಸ್ಕೂಟಿಯನ್ನು ಹುಡುಕಿಕೊಡಬೇಕಾಗಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿದೆ.

 

3) Anavatti PS Cr NO:0032/2024 U/s-454,457,380 IPC

ಸೊರಬ ತಾಲ್ಲೂಕು ಕೆರೆಹಳ್ಳಿ ಗ್ರಾಮದ ಶ್ರೀ ಸಿದ್ದಿ ವಿನಾಯಕ ಜುವೆಲರಿ ವರ್ಕ್ ಅಂಗಡಿಯ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡಿದ ಘಟನೆ  ದಿನಾಂಕ:02-03-2024 ರಂದು ರಾತ್ರಿ 08:45 ಗಂಟೆ ಸಮಯಕ್ಕೆ ನಡೆದಿದೆ. ಘಟನೆಯಲ್ಲಿ ಒಟ್ಟು 1,35,000 ರೂ  ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ಆನವಟ್ಟಿ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೆಂಟ್ ದಾಖಲಾಗಿದೆ.  

 

4) Shivamogga Rural PS Cr NO:0057/2024 U/s-379 IPC

ಭದ್ರಾವತಿ ತಾಲ್ಲೂಕು ಆನವೇರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತಮ್ಮ  KA-14-EF 2069 ನಂಬರಿನ ಹೀರೊ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕನ್ನು ದಿನಾಂಕ:25/02/2024 ರಂದು ಮಧ್ಯಾಹ್ನ 12:30 ಕ್ಕೆ ಹೊಳಲೂರಿನ  ಬಸ್ ಸ್ಟ್ಯಾಂಡ್ ಹಿಂಭಾಗದ ಕಾಲೇಜಿಗೆ ಹೋಗುವ ರಸ್ತೆಯ ಬಲಬದಿಯಲ್ಲಿ ನಿಲ್ಲಿಸಿದ್ರು. ಅಲ್ಲಿಂದ  ದಾವಣಗೆರೆಗೆ ಹೋಗಿ ಹೊಳಲೂರಿಗೆ ಬಂದು ನೋಡಿದಾಗ ಬೈಕ್ ಕಳುವಾಗಿದೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೆಂಟ್ ನೀಡಲಾಗಿದೆ