ಆತಂಕವಿಲ್ಲದೇ ಆನೆಗಳ ವಿಹಾರ! ಕೆರೆಯಲ್ಲಿ ಕಾಣಸಿಕ್ಕ ಕಾಡಾನೆಗಳ ವಿಡಿಯೋ ವೈರಲ್​!

Visuals of wild elephants spotted in lake in Chikkamagaluru district

ಆತಂಕವಿಲ್ಲದೇ ಆನೆಗಳ ವಿಹಾರ! ಕೆರೆಯಲ್ಲಿ ಕಾಣಸಿಕ್ಕ ಕಾಡಾನೆಗಳ ವಿಡಿಯೋ ವೈರಲ್​!
phants spotted in lake in Chikkamagaluru district

CHIKKAMAGALURU  |  Dec 12, 2023  |   ಚಿಕ್ಕಮಗಳೂರು ಜಿಲ್ಲೆಯಲ್ಲಿ  ಕಾಡಾನೆಗಳ ಆತಂಕ ಜೋರಾಗಿದೆ. ಇದರ ನಡುವೆ ನೀರು ಕಂಡ ಸ್ಥಳದಲ್ಲಿ ಆನೆಗಳು ವಿಹಾರಕ್ಕೆ ಇಳಿಯುತ್ತಿವೆ. ಇದಕ್ಕೆ ಪೂರಕ ಸಾಕ್ಷಿ ಎಂಬಂತೆ ಎನ್ ಅರ್  ಪುರ ತಾಲೂಕಿನ ಕುಸುಬೂರು ಗ್ರಾಮದಲ್ಲಿ ಬೀಡುಬಿಟ್ಟಿರುವ 12 ಕಾಡಾನೆಗಳ ಹಿಂಡು ಕುಸುಬೂರು ಕೆರೆಯಲ್ಲಿ ವಿಹರಿಸುತ್ತಿವೆ. 

READ : ಶಿವಮೊಗ್ಗದಲ್ಲಿ ಜಾಗ್ರತೆ | ಸಿಗ್ನಲ್​ ಜಂಪ್ ಮಾಡ್ಬೇಡಿ ! 3 ತಿಂಗಳಲ್ಲಿ 60 ಸಾವಿರ ಕೇಸ್ ! 4 ಕೋಟಿಗೂ ಅಧಿಕ ದಂಡ

ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜನರು ದೃಶ್ಯವನ್ನು ನೋಡಿ ಖುಷಿ ಪಡುತ್ತಿದ್ದಾರೆ. ಇನ್ನೊಂದೆಡೆ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದ್ದು, ಆನೆಗಳನ್ನ ಓಡಿಸಿ ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ. 

ಕುಸುಬೂರು ಗ್ರಾಮದ ಕೆರೆಯಲ್ಲಿ ಬೀಡುಬಿಟ್ಟಿರುವ ಕಾಡಾನೆ ಹಿಂಡು, ಕೆರೆಯ ನೀರಿನಲ್ಲಿ ಈಜುತ್ತಾ, ಸ್ನಾನ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಇನ್ನೂ ಹಿಂಡಿನ ನಡುವೆ ಮರಿಯಾನೆಯೊಂದು ಇದ್ದು ಅದರ ತುಂಟಾಟ ವಿಡಿಯೋದಲ್ಲಿದೆ.  ಕೊಪ್ಪ ಅರಣ್ಯ ವಲಯ ವ್ಯಾಪ್ತಿಯಲ್ಲಿ ಇರುವ ಈ ಹಿಂಡಿನಿಂದ ಕುಸುಬೂರು, ಮುತ್ತಿನಕೊಪ್ಪ, ಸಾತ್ಕೋಳ ಸುತ್ತಮುತ್ತ ಆತಂಕ ಎದುರಾಗಿದೆ.