ಬೀಟಮ್ಮ ಗ್ಯಾಂಗ್​ನ ಎಫೆಕ್ಟ್! ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಎಲಿಪೆಂಟ್ ಲಾಕ್​ಡೌನ್​ ಜಾರಿ! ಏನಿದು ವಿವರ ಓದಿ

effect of Beatamma gang! Elephant lockdown has been implemented around Chikkamagaluru and Mudigere!

ಬೀಟಮ್ಮ ಗ್ಯಾಂಗ್​ನ ಎಫೆಕ್ಟ್! ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಎಲಿಪೆಂಟ್ ಲಾಕ್​ಡೌನ್​ ಜಾರಿ!  ಏನಿದು ವಿವರ ಓದಿ
effect of Beatamma gang! Elephant lockdown has been implemented around Chikkamagaluru and Mudigere!

Shivamogga | Feb 3, 2024 |  ಚಿಕ್ಕಮಗಳೂರು ಜಿಲ್ಲೆ ಜನರನ್ನ ಹೈರಾಣ ಆಗಿಸಿರುವ ಬೀಟಮ್ಮ ಗ್ಯಾಂಗ್ ಇದೀಗ ಮೂಡಿಗೆರೆ ಜನರಿಗೂ ಕಾಡಲು ಆರಂಭಿಸಿದೆ. 20 ಕ್ಕೂ ಹೆಚ್ಚು ಆನೆಗಳಿರುವ ಹಿಂಡು ಚಿಕ್ಕಮಗಳೂರಿನಲ್ಲಿ ಅಕ್ಷರಶಃ ಭೀತಿಯನ್ನೆ ಸೃಷ್ಟಿಸಿದೆ. ಈ ಕಾಡಾನೆಗಳ ಹಿಂಡಿಗೆ ಬೀಟಮ್ಮ ಗ್ಯಾಂಗ್ ಎಂದು ಹೆಸರಿಡಲಾಗಿದೆ. ಅಷ್ಟೆಅಲ್ಲದೆ ಈ ಗ್ಯಾಂಗ್​ನ ಸಲುವಾಗಿ ಚಿಕ್ಕಮಗಳೂರುನಲ್ಲಿ ಆಯ್ದ ಪ್ರದೇಶಗಳಲ್ಲಿ ಲಾಕ್​ಡೌನ್​ ರೀತಿಯ ವಾತಾವರಣ ನಿರ್ಮಾಣವಾಗುತ್ತಿದೆ. ಇದಕ್ಕೆ ಪೂರಕವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಖುದ್ದು ಮೈಕ್ ಹಿಡಿದು ವಾಹನಗಳಲ್ಲಿ ಅನಾವಶ್ಯಕವಾಗಿ ಮನೆಯಿಂದ ಹೊರಕ್ಕೆ ಬರಬೇಡಿ ಎಂದು ಅನೌನ್ಸ್​ ಮಾಡುತ್ತಿದ್ದಾರೆ.  

ತೋರಣ ಮಾವು, ಕೋಡುವಳ್ಳಿ, ಗೌತಮೇಶ್ವರ, ಅಣೂರು, ದಿಣ್ಣೆಕೆರೆ ಗ್ರಾಮಗಳಲ್ಲಿ ಕಾಡಾನೆಗಳ ಆತಂಕ ಮೂಡಿದ್ದು ಅರಣ್ಯ ಇಲಾಖೆ ಕಾಡಾನೆಗಳ ಗುಂಪು ಈ ಗ್ರಾಮಗಳಿಗೆ ಬರುವ ಸಾದ್ಯತೆ ಇದೆ. ಕಾಫಿತೋಟಗಳಲ್ಲಿ ಓಡಾಡುವ ಸಾಧ್ಯತೆ ಇದೆ ಎಂದು ಪ್ರಕಟಣೆ ನೀಡುತ್ತಿದೆ. 

ಗ್ರಾಮಸ್ಥರಲ್ಲಿ ವಿನಂತಿ ಸುತ್ತಮುತ್ತಲಿನ ಗ್ರಾಮಸ್ಥರು ರಸ್ತೆಯಲ್ಲಿ ಅನಾವಶ್ಯಕ ಓಡಾಡಬಾರದು. ಕಾಫಿತೋಟದ ಕೆಲಸಕ್ಕೆ ಬೇಗನೇ ಹೋಗಬಾರದು. ಯಾವುದೇ ಸಮಯದಲ್ಲಿ ಆನೆಗಳು ರೋಡಿಗಿಳಿಯಬಹುದು, ಅಥವಾ ಕಾಫಿತೋಟಕ್ಕೆ ನುಗ್ಗಬಹುದು ಹೀಗಾಗಿ ಸಾರ್ವಜನಿಕರು ವಾಹನ ಸವಾರರು ಎಚ್ಚರಿಕೆಯನ್ನ ವಹಿಸಬೇಕು ಇದು ಎಲಿಫೆಂಟ್ ಟಾಸ್ಕ್​ ಫೋರ್ಸ್ ಮೂಡಿಗೆರೆ ಹಾಗೂ ಆಲ್ದೂರು ಅರಣ್ಯ ಇಲಾಖೆ ಪ್ರಕಟಣೆ ಎಂದು ವಾಹನಗಳಲ್ಲಿ ಅನೌನ್ಸ್ ಮಾಡಲಾಗುತ್ತಿದೆ.    

ಅರಣ್ಯ ಇಲಾಖೆಯ ಅನೌನ್ಸ್​ ಮೆಂಟ್ ವಿಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ