ಇಸ್ಪೀಟು ನಿತ್ಯ ಕೋಟಿ ವಹಿವಾಟು! ಭದ್ರಾವತಿಯಲ್ಲಿ ಎಲ್ಲಾ ಮೂಮೂಲು! ಉಕ್ಕಿನ ನಗರಕ್ಕೆ ಏನಾಗಿದೆ?

Here is a report on the illegal activity going on in Bhadravathi

ಇಸ್ಪೀಟು ನಿತ್ಯ ಕೋಟಿ ವಹಿವಾಟು! ಭದ್ರಾವತಿಯಲ್ಲಿ ಎಲ್ಲಾ  ಮೂಮೂಲು!  ಉಕ್ಕಿನ ನಗರಕ್ಕೆ ಏನಾಗಿದೆ?

SHIVAMOGGA  |  Dec 12, 2023  |  ರಾಜಾಶ್ರಯದಲ್ಲಿರುವ ಭದ್ರಾವತಿಯ ಅಪರಾಧ ಕೃತ್ಯಗಳಿಗೆ ಮದ್ದು ಅರೆಯದೆ ಹೋದರೆ, ಊರಿನ ಪರಿಸ್ಥಿತಿ ಊಹಿಸಿಕೊಳ್ಳುವುದು ಕಷ್ಟ ಓಸಿ ಇಸ್ಪೀಟು,ಕಳ್ಳತನ ಪ್ರಕರಣಗಳು ರಾಜಕೀಯ ಕರಿ ನೆರಳಿನಲ್ಲಿ ಸಾಗುತ್ತಿರುವುದು ಆತಂಕದ ವಿಚಾರ..

ಭದ್ರಾವತಿ ಒಸಿ ಇಸ್ಪೀಟು ದಂಧೆ ಸೆಂಟರ್​

ಭದ್ರಾವತಿಯಲ್ಲಿ ಓಸಿ ಇಸ್ಪೀಟು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ರಾಜಕೀಯ ಆಶ್ರಯ ಇರುವುದು ಗುಟ್ಟಾಗಿ ಉಳಿದಿಲ್ಲ.  ಮೊನ್ನೆಯಷ್ಟೆ ಇಲ್ಲಿ ಸೋಶಿಯಲ್ ಮಿಡಿಯಾದ ಬರಹದ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಪೊಲೀಸ್ ಅಧಿಕಾರಿಯನ್ನೇ ಕೊಂದ ಘಟನೆಗೆ ಭದ್ರಾವತಿ ಸಾಕ್ಷಿಯಾಗಿರುವಾಗ, ಇನ್ನು ಪ್ರಶ್ನಿಸುವ ಮನೋಭಾವ ಇರುವ ಸಾಮಾನ್ಯ ಜನರನ್ನು ಬಿಟ್ಟಾರೆಯೇ ಎಂಬ ಅನುಮಾನ ಆತಂಕ ಕಾಡತೊಡಗಿದೆ.

READ : ಆತಂಕವಿಲ್ಲದೇ ಆನೆಗಳ ವಿಹಾರ! ಕೆರೆಯಲ್ಲಿ ಕಾಣಸಿಕ್ಕ ಕಾಡಾನೆಗಳ ವಿಡಿಯೋ ವೈರಲ್​!

ಕಳ್ಳತನಕ್ಕೂ ಭದ್ರಾವತಿಗೂ ಒಂಥರಾ ಲಿಂಕ್

ರಾಜ್ಯದಲ್ಲಿನ  ನಡೆಯುವ ಕಳ್ಳತನ ಪ್ರಕರಣಗಳ ನಂಟಿನ ಕಮಟು ವಾಸನೆ ಆ ನಗರವನ್ನು ತಟ್ಟಿರುತ್ತೆ.ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ನಡೆವ ಕಳ್ಳತನ ಪ್ರಕರಣದಲ್ಲಿ ಪೊಲೀಸರ ಒಂದು ಕಣ್ಣು ಭದ್ರಾವತಿ ಆಯ್ದ ಏರಿಯಾಗಳ ಮೇಲೆ ಬಿದ್ದಿರುತ್ತೆ. ರಾಬರಿ,ಹೌಸ್ ಥೆಪ್ಟ್,ಪಿಕ್ ಪಾಕೆಂಟಿಂಗ್,ಮೊಬೈಲ್ ಅಫೆಂಡರ್ಸ್,ಸೂಟ್ ಕೇಸ್ ಲಿಪ್ಟಿಂಗ್,ಅಟೆನ್ಷನ್ ಡೈವರ್ಷನ್ ,ಚೈನ್ ಸ್ನ್ಯಾಚಿಂಗ್ ಪ್ರಕರಣಗಳ ಬಗ್ಗೆ ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ 

ಎಸ್​ಐ ರನ್ನೆ ಕೊಲೆ ಮಾಡಿದ್ದ ಕಳ್ಳ

ಭದ್ರಾವತಿಯ  ಹುಡುಗ ಮಧುರ (ಹೆಸರು ಬದಲಾಯಿಸಲಾಗಿದೆ) ಎಂಬಾತ ಈ ಹಿಂದೆ  ನೆಲಮಂಗಲದಲ್ಲಿ ಎಸ್ಸೈ ಜಗದೀಶ್ ರನ್ನು  ಕೊಲೆ ಮಾಡಿದ್ದ. ವೃತ್ತಿಪರ ಕಳ್ಳನೊಬ್ಬ ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡುವ ಮಟ್ಟಿಗೆ ಅಲ್ಲಿನ ಪಾತಕ ಲೋಕ ಬೆಳೆದಿದೆ  

ಮೊಬೈಲ್​ ಕಳ್ಳತನ

ಮನೆಗಳ್ಳತನ,ಸರಗಳ್ಳತನ,ಮೊಬೈಲ್ ಕಳ್ಳತನ ಪಿಕ್ ಪಾಕೇಟ್ ಗಳಾದ್ರೆ ಪೊಲೀಸ್ರು ನೇರವಾಗಿ ಭದ್ರಾವತಿಯ ಆಯ್ದ ಏರಿಯಾಕ್ಕೆ  ಜೀಪುತಂದು ನಿಲ್ಲಿಸಿ ಬಿಡ್ತಾರೆ. ಕಳ್ಳರಾಗಿ ಗುರುತಿಸಿಕೊಂಡವರೆಲ್ಲಾ  ಅಲ್ಲಿ ಸಿಗುತ್ತಾರೆ ಎಂಬುದು ಪೊಲೀಸರಿಗೆ ಗೊತ್ತಿರುವ ಸತ್ಯ. ಇನ್ನೂ  ಮೊಬೈಲ್ ಕಳ್ಳತನದ ದೊಡ್ಡ ವಹಿವಾಟು ಭದ್ರಾವತಿ ಹೊರವಲಯಗಳಲ್ಲಿ ನಡೆಯುತ್ತದೆ. ಮೊಬೈಲ್ ಕಳವು ಕೇಸ್​ನಿಂದ ಹಿಡಿದು ಅದನ್ನು ವಿಲೇವಾರಿ ಮಾಡುವವರೆಗೂ ಇಲ್ಲಿ ಸೈಲೆಂಟ್​ ಆಗಿ ಕೆಲಸವಾಗುತ್ತದೆ. 

ರಾಜಕಾರಣ ಮತ್ತು ಕ್ರೈಂ ಲೋಕ

ಚೈನ್ ಸ್ನಾಚಿಂಗ್,ಸೂಟ್ ಕೇಸ್ ಸ್ನಾಚಿಂಗ್,ಪರ್ಸ್ ಸ್ನಾಚಿಂಗ್ ಮಾಡುತ್ತಿದ್ದ ಕೆಲ ಕಳ್ಳರು ಈಗ ಭದ್ರಾವತಿಯಲ್ಲಿ ದೊಡ್ಡಬಂಗಲೇ ಕಟ್ಟಿಸಿಕೊಂಡು ದೋ ನಂಬರ್​ ದಂಧೆಯಲ್ಲಿ ಬ್ಯುಸಿಯಾಗಿದ್ದಾರೆ.  ಭದ್ರಾವತಿ ನಗರದಲ್ಲಿ ನಡೆಯುತ್ತಿರುವ ಈ ಅಕ್ರಮ ದಂಧೆಗಳ ವಿಚಾರದಲ್ಲಿ  ನಾಗರಿಕ ವರ್ಗ ತತ್ತರಿಸಿದೆ. ಈ ನಿಟ್ಟಿನಲ್ಲಿ ಒಂದೋ ಪೊಲೀಸರು ದಿಟ್ಟ ಕ್ರಮ ಕೈಗೊಳ್ಳಬೇಕು.ಇಲ್ಲವೇ ಮೌನವಾಗಿರಬೇಕು. ಹಾಗೊಂದು ವೇಳೆ ಖಾಕಿ ಷೇರ್ ಆಗಲು ಹೋದರೆ ಪೊಲೀಸರನ್ನೆ ಇಲ್ಲಿ ವಿಲನ್ ಮಾಡುತ್ತಾರೆ. 

READ : ಹೊಸಮನೆ ನೋಡಿ ಬರುವಷ್ಟರಲ್ಲಿ ದಂಪತಿಗೆ ಎದುರಾಗಿತ್ತು ಶಾಕ್ | ರಾಯಲ್ ಎನ್​ಫೀಲ್ಡ್​ ಗಾಗಿ ಬೈಕ್ ಸವಾರನ ಹುಡುಕಾಟ

ಪಿಎಸ್​ಐ ಕುಮಾರ್ 

ಕಳ್ಳರ ಹೆಡೆಮುರಿ ಕಟ್ತಿನಿ ಅಂದ್ರೆ ಅದು ಪೊಲೀಸ್ರಿಗೆ ಸಾಧ್ಯವಾಗದ ವಿಷಯ.ಯಾಕೆಂದ್ರೆ ಕಳ್ಳರೊಂದಿಗೆ ಶಾಮೀಲಾಗೋ ರಾಜಕೀಯ ವ್ಯವಸ್ಥೆ ಪೊಲೀಸ್ರಿಗೆ ಖೆಡ್ಡಾ ತೋಡುತ್ತೆ ಇಲ್ಲಿನ ಹೊಸಮನೆ ಠಾಣೆಯಲ್ಲಿ ಈ ಹಿಂದೆ ಎಸ್ಸೈ ಆಗಿ ಕರ್ತವ್ಯ ನಿರ್ವಹಿಸಿದ ಕುಮಾರ್ ,,ಮೊಬೈಲ್ ಕಳ್ಳರಿಗೆ ಸಿಂಹಸ್ವಪ್ನವಾಗಿದ್ರು..,ಆದ್ರೆ ಅದೇ ಕಳ್ಳರು ಲೋಕಾಯುಕ್ತ ಟ್ರಾಪ್ ಮಾಡಿಸಿ,ಪೊಲೀಸ್ ಅಧಿಕಾರಿಯನ್ನೇ ಅಮಾನತ್ತುಗೊಳಿಸಿ,ವಿಕೃತತೆ ಮೆರೆದ್ರು.

ಇನ್​ಸ್ಪೆಕ್ಟರ್ ತಿರುಮಲೇಶ್ 

ಇದಾದ ನಂತ್ರ ಚಿನ್ನದ ಕಳ್ಳರಿಗೆ ಹೆಡೆಮುರಿ ಕಟ್ಟಿದ ಇನ್ಸ್ ಪೆಕ್ಟರ್ ತಿರುಮಲೇಶ್ ವಿರುದ್ಧ ಕಳ್ಳನೊಬ್ಬ ಕೋರ್ಟ್ ನಲ್ಲಿ ದೂರು ನೀಡಿದ.ನನ್ನಿಂದ 100 ಗ್ರಾಂ ಪಡೆದಿದ್ದು ಇನ್ಸ್ ಪೆಕ್ಟರ್ ತಿರುಮಲೇಶ್ 37 ಗ್ರಾಂ ಚಿನ್ನವನ್ನಷ್ಟೆ ರಿಕವರಿ ತೋರಿಸಿದ್ದಾರೆಂದು ಸುಳ್ಳು ದೂರು ನೀಡಿ ಅಧಿಕಾರಿಯನ್ನು ಎತ್ತಂಗಡಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದ..ಇಲ್ಲಿ ಕಳ್ಳರನ್ನು ಎದುರಾಕೊಂಡ್ರೆ..,ಪೊಲೀಸ್ರಿಗೆ ಉಳಿಗಾಲವಿಲ್ಲ ಅನ್ನೋ ವಾತಾವರಣ ಇಲ್ಲಿದೆ

ಇಸ್ಪೀಟು ಕೋಟಿ ಕೋಟಿ ವಹಿವಾಟು

ಸದ್ಯ ಭದ್ರಾವತಿಯಲ್ಲಿ ಓಸಿ ಇಸ್ಪೀಟು ದಂದೆ ಎಗ್ಗಿಲ್ಲದೆ ನಡೆಯುತ್ತದೆ. ಅದರ ಸಾಕ್ಷಿಯೇ ಮೊನ್ನೆ ನಡೆದ ಗೋಕುಲ್ ಕೃಷ್ಣ ಮೇಲಿನ ಹಲ್ಲೆ. ಆತನ ಮೇಲಿನ ಹಲ್ಲೆ ವೈಯಕ್ತಿಕವಾಗಿ ದ್ವೇಷದ ಹಿನ್ನೆಲೆಯಲ್ಲಿ ನಡೆದಿರಬಹುದಾದರೂ, ಅದರ ಕಾರಣ ಫೇಸ್​ಬುಕ್​ನ ಫೋಸ್ಟ್ ಆಗಿತ್ತು. ಇನ್ನೂ ಭದ್ರಾವತಿಯಲ್ಲಿ ಇಸ್ಪೀಟು ಕೋಟಿ ವಹಿವಾಟಿನ ದಂಧೆಯಾಗಿದೆ. 

ಒಂದು ಜೂಜಿನ ಅಡ್ಡೆಯಲ್ಲಿನ  ವಹಿವಾಟು ಏನಿಲ್ಲವೆಂದರೂ ಒಂದು ಕೋಟಿ ದಾಟುತ್ತೆ. ಇದು ರಾಜಕೀಯ ಪೊಲೀಸ್ ವ್ಯವಸ್ಥೆಯ ರಾಜಾಶ್ರಯದಲ್ಲಿ ನಡೆಯುತ್ತಿದೆ. ಭದ್ರಾವತಿಯಲ್ಲಿ ಪ್ರಸ್ತುತ ಓಸಿ ಆಡಿಸುವವರ ಮೂರು ಬ್ಯಾಚ್ ಗಳಿವೆ. ಇವರು ಒಂದು ಸೆಟ್ ಅಪ್ ವ್ಯವಸ್ಥೆಯಲ್ಲಿಯೇ ದಂಧೆಯನ್ನು ನಡೆಸುತ್ತಾರೆ. 

ಭದ್ರಾವತಿಯ ರಾಜಕಾರಣದ ಪುತ್ರವರ್ಗ ದಂಧೆಗೆ ರಾಜಾಶ್ರಯ ನೀಡ್ತಿದೆ ಎಂಬುದು ಭದ್ರಾವತಿಯಲ್ಲಿ ಚರ್ಚಿತ ವಿಚಾರ. ರಾಜಾಶ್ರಯಗಳು ಇದ್ದಮೇಲೆ ಪೊಲೀಸ್ ಸ್ಟೇಷನ್​ಗಳು ಇಲ್ಲಿ ಮೌನ..ಮೌನ. ಈ ನಡುವೆ  ಗೋಕುಲ್ ಮೇಲಿನ ಹಲ್ಲೆ ಪ್ರಕರಣದಿಂದ ಮೂರು ದಿನ ದಂದೆ ಬಂದ್ ಆಗಿದೆ. ದಂಧೆಯಲ್ಲಿ ಗುರುತಿಸಿಕೊಂಡವರ ಹಿಂದೆ ಪೊಲೀಸರು ಬಿದ್ದಿದ್ದಾರೆ, ಇವರಲ್ಲಿ ಮುಖ್ಯ ಕುಳಗಳೆಲ್ಲಾ ಊರು ಬಿಟ್ಟಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಭದ್ರಾವತಿ ಬದಲಾಗುತ್ತಿಲ್ಲ. ಎರಡು ದೊಡ್ಡ ಕಾರ್ಖಾನೆಗಳು ಬದುಕು ಕಟ್ಟಿಕೊಟ್ಟಿದ್ದವು. ಅವುಗಳ ಅವಸಾನದ ನಡಿಗೆ ಜನರಲ್ಲಿ ಭವಿಷ್ಯದ ಆತಂಕ ಮೂಡಿಸಿತ್ತು. ಅನಿವಾರ್ಯವಾಗಿ ಕೆಲವರು ಅಡ್ಡದಾರಿ ಹಿಡಿಯವಂತೆ ಮಾಡಿತ್ತು. ಇದೀಗ ಅದರ ಅತಿರೇಕತನ ಹೊಡೆದಾಟಗಳಲ್ಲಿ ಇಂಟರ್​ವೆಲ್ ಪಡೆದುಕೊಳ್ತಿವೆ…

ಈ ನಿಟ್ಟಿನಲ್ಲಿ ಮೇಲ್ಮಟದ ಶಿಸ್ತಿನ ಪೊಲೀಸ್ ಆಡಳಿತ ಜಾರಿಯ ಅಗತ್ಯವಿದೆ. ಹಿಂದೆ ಶಿವಮೊಗ್ಗದ ಕೋಮು ಸೂಕ್ಷ್ಮತೆಯ ಸಂಬಂಧ ಸರ್ಕಾರದ ಜೊತೆಗೆ ಮುಕ್ತವಾಗಿ ಮಾತುಕತೆ ನಡೆಸಿದ್ದ ಶಿವಮೊಗ್ಗ ಪೊಲೀಸ್ ಇಲಾಖೆ ಅಂತಿಮವಾಗಿ ಖಡಕ್​ ವ್ಯವಸ್ಥೆಯನ್ನು ಜಾರಿ ಮಾಡಿಕೊಂಡಿತ್ತು. ಇದೀಗ ಅಂತಹುದ್ದೆ ಚರ್ಚೆಯೊಂದನ್ನ ಭದ್ರಾವತಿ ವಿಚಾರದಲ್ಲಿ ಮಾಡಬೇಕಿದೆ. ಸರ್ಕಾರದ ಮಟ್ಟದಲ್ಲಿ ಹೆಚ್ಚುವರಿ ಶಕ್ತಿ ಪಡೆದು, ಅಕ್ರಮಕ್ಕೆ ಕಡಿವಾಣ ಹಾಕಬೇಕಿದೆ ಇಲಾಖೆ.. ಇಲ್ಲದಿದ್ದರೇ ಭದ್ರಾವತಿಯಲ್ಲಿ ಎಲ್ಲವೂ ಮೂಮೂಲು ವಿಚಾರವಾಗಿಯೇ ಇರುತ್ತದೆ.