ಪ್ರತಿ ನೂರು ವರ್ಷಕ್ಕೆ ಸಂಕ್ರಾತಿಯ ದಿನಾಂಕ ಬದಲಾಗುತ್ತದೆ ಏಕೆ?

After a 100 years, Makar Sankranti gets a new date.is it true?

ಪ್ರತಿ ನೂರು ವರ್ಷಕ್ಕೆ ಸಂಕ್ರಾತಿಯ ದಿನಾಂಕ ಬದಲಾಗುತ್ತದೆ ಏಕೆ?
ಪ್ರತಿ ನೂರು ವರ್ಷಕ್ಕೆ ಸಂಕ್ರಾತಿಯ ದಿನಾಂಕ ಬದಲಾಗುತ್ತದೆ ಏಕೆ?

ನಾಡಿನ ಸಮಸ್ತ ಜನರಿಗೆ ಮಕರ ಸಂಕ್ರಾಂತಿಯ ಹಬ್ಬದ ಶುಭಾಶಯಗಳು.. ಉತ್ತರಾಯಣದ ಪುಣ್ಯಕಾಲದಲ್ಲಿ ತನುಮನಧನದ ಅಭಿಲಾಷೆಗಳು ಸಿದ್ದಿಸಲಿ ಎಂದು ಹಾರೈಸುತ್ತೇವೆ. 

ಪ್ರತಿವರ್ಷ ಜನವರಿ 14ಕ್ಕೆ ಸಂಕ್ರಮಣ ಏಕೆ ಬರುತ್ತದೆ. ಈ ಹಿಂದೇ ಜನವರಿ 14 ಕ್ಕೆ ಬರುತ್ತಿದ್ದ ಸಂಕ್ರಮಣ ಕೆಲವರ್ಷಗಳಿಂದ 15 ಕ್ಕೆ ಏಕೆ ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಉಳಿದ ಹಬ್ಬಗಳ ದಿನಾಂಕಗಳಲ್ಲಿ ವತ್ಯಾಸವಾದರೂ ಸಂಕ್ರಮಣದ ಮಹೂರ್ತಗಳು  ಅದೇ ದಿನಾಂಕದಂದು ಹೇಗೆ ಬರುತ್ತದೆ. ಆಚರಣೆಯ ಈ ವಿಚಾರಗಳು ಈಗಾಗಲೇ ವಾಟ್ಸ್ಯಾಪ್​ಗಳಲ್ಲಿ  ಹರಿದಾಡುತ್ತಿದೆ. ಇದಕ್ಕೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ. 

ಇದನ್ನು ಸಹ ಓದಿ : ಸಾಗರ ಟೌನ್​ನಲ್ಲಿ ನಡೆದ ಹಲ್ಲೆ ಯತ್ನ ಕೇಸ್​ ಬಗ್ಗೆ ಸಮೀರ್ ಸಹೋದರಿ ಹೇಳಿದ್ದೇನು? ವಿಡಿಯೋ ವರದಿ

ರಾಷ್ಟ್ರೀಯ ಪ್ರಖ್ಯಾತ ಪತ್ರಿಕೆಯೊಂದು ವರದಿ ಮಾಡಿದ್ದರ ಪ್ರಕಾರ, ಪ್ರತಿ 100 ವರ್ಷಗಳಿಗೊಮ್ಮೆ ಸಂಕ್ರಮಣದ ದಿನಾಂಕ ಬದಲಾಗುತ್ತದೆಯಂತೆ. ಕಳೆದ 2019 ರವರೆಗೂ ಜನವರಿ 14 ಕ್ಕೆ ಬರುತ್ತಿದ್ದ ಸಂಕ್ರಾಂತಿ ಆನಂತರ 15 ಕ್ಕೆ ಆಚರಿಸಲಾಗುತ್ತದೆ. ಇನ್ನೂ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಕಾಲವೂ ಮಕರ ಸಂಕ್ರಮಣವಾಗಿದೆ. ಸಂಕ್ರಮಣದ ಈ ಸಮಯವನ್ನು ಸೂರ್ಯನ ಚಲನೆಯ ಆಧಾರದ ಮೇಲೆಯೇ ನಿಕ್ಕಿಗೊಳಿಸಲಾಗಿದೆ. ಹೀಗಾಗಿ,  ರವಿಯ ಸಂಚಾರದ ಸಮಯಕ್ಕೆ ಅನುಗುಣವಾಗಿ ಹಬ್ಬವೂ ಸಹ ಸಮಯಕ್ಕೆ ಸರಿಯಾಗಿ ಜನವರಿ 14 ರಂದೇ ಬರುತ್ತಿತ್ತು. 

ಇನ್ನೂ ಧಾರ್ಮಿಕ ವರದಿಗಳ ವಿವಿಧ ಡಿಜಿಟಲ್ ಮಿಡಿಯಾಗಳಲ್ಲಿ ಈ ಬಗ್ಗೆ ಇನ್ನೊಂದು ವಿಷಯವನ್ನು ಹೇಳಲಾಗಿದೆ. ಸೂರ್ಯನು ಪ್ರತಿವರ್ಷ ತನ್ನ ವಾರ್ಷಿಕ ಸಂಚಾರದಲ್ಲಿ 20 ನಿಮಿಷ ಹೆಚ್ಚುವರಿಯಾಗಿ ಪಡೆಯುತ್ತಾನೆ. ಇದು ಪ್ರತಿ 72 ವರ್ಷಗಳಿಗೆ ಒಂದು ದಿನವಾಗಿ ಬದಲಾಗುತ್ತದೆ. ಆ ಕಾರಣವಾಗಿ ಸಂಕ್ರಾಂತಿಯ ದಿನವೂ ಪ್ರತಿ 72 ಅಥವಾ 100 ವರ್ಷಗಳಿಗೆ ಬದಲಾಗುತ್ತದೆ. ಈ ನಿಟ್ಟಿನಲ್ಲಿ 2080 ರ ಹೊತ್ತಿಗೆ ಸಂಕ್ರಮಣದ ದಿನ ಜನವರಿ 16 ರಂದು ಬರುವುದಂತೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

ಪುರಾಣದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎನ್ನಲಾಗುತ್ತದೆ. ದೇವತಾ ಶಕ್ತಿಗಳು ವಿಶೇಷವಾಗಿದ್ದು, ಋಣಾತ್ಮಕ ಶಕ್ತಿಗಳು ದೂರವಾಗುವ ಸಮಯ ಇದೆಂದು ಭಾವಿಸಲಾಗಿದೆ. ಮಹಾಭಾರತದಲ್ಲಿ  ಭೀಷ್ಮನು ಬಾಣಗಳ ಮೇಲೆ ಮಲಗಿ ಯಾತನೆ ಅನುಭವಿಸಿದರೂ ದಕ್ಷಿಣಾಯನದಲ್ಲಿ ದೇಹತ್ಯಾಗ ಮಾಡದೆ, ಉತ್ತರಾಯಣದ ಅಷ್ಟಮಿ ದಿನಕ್ಕಾಗಿ ಕಾಯುತ್ತಾನೆ. ಆದ್ದರಿಂದ ಉತ್ತರಾಯಣ ಬಹಳ ಪುಣ್ಯಕಾಲ ಎಂಬ ನಂಬಿಕೆ ಇದೆ. 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com