ಮಲ್ನಾಡಲ್ಲಿ 20 ದಿನಕ್ಕಾಗುವಷ್ಟು ನೀರು! ಮತ್ತೆ ನಡೆಯುತ್ತಾ ಮೋಡ ಬಿತ್ತನೆ! ಮಧು ಬಂಗಾರಪ್ಪ ಹೇಳಿದ್ದೇನು?

There is enough water in Malnad for 20 days! Cloud seeding for rain! What did Madhu Bangarappa say?

ಮಲ್ನಾಡಲ್ಲಿ 20 ದಿನಕ್ಕಾಗುವಷ್ಟು  ನೀರು!  ಮತ್ತೆ ನಡೆಯುತ್ತಾ ಮೋಡ ಬಿತ್ತನೆ! ಮಧು ಬಂಗಾರಪ್ಪ ಹೇಳಿದ್ದೇನು?

KARNATAKA NEWS/ ONLINE / Malenadu today/ Jun 20, 2023 SHIVAMOGGA NEWS

ಶಿವಮೊಗ್ಗ / ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಇಂದಿನವರೆಗೆ ವಾಡಿಕೆ ಪ್ರಮಾಣದ ಮಳೆ ಬಾರದ ಹಿನ್ನೆಲೆ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇನ್ನೂ 20 ದಿನಗಳಿಂದ 1 ತಿಂಗಳವರೆಗೆ ಮಾತ್ರ ಕುಡಿಯುವ ನೀರಿನ ಪೂರೈಕೆ ಸಾಧ್ಯವಾಗಲಿದೆ. ಈ ಅವಧಿಯಲ್ಲಿ ಮಳೆ ಬಾರದಿದ್ದರೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ. ಈಗಾಗಲೇ ಜಿಲ್ಲೆಯ 80-90 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದನ್ನು ಗುರುತಿಸಲಾಗಿದೆ. ಪ್ರಸ್ತುತ 25 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 

ಮೋಡಬಿತ್ತನೆಗೆ ಮುಂದಾದ ಸರ್ಕಾರ?

ನಿಗದಿತ ಸಮಯಕ್ಕೆ ಮಳೆಯಾಗದಿದ್ದರೆ ಮೋಡಬಿತ್ತನೆ ಮಾಡುವುದು ಅನಿವಾರ್ಯವಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.  ಮುಖ್ಯಮಂತ್ರಿಗಳ ಜೊತೆ ದೆಹಲಿಗೆ ಹೋಗುವ ಸಂದರ್ಭದಲ್ಲಿ ಮಾತನಾಡುವುದಾಗಿ ಹೇಳಿದ ಮಧು ಬಂಗಾರಪ್ಪ, ಮೋಡಬಿತ್ತನೆ ಸದ್ಯಕ್ಕೆ ಬಹಳ ಮುಖ್ಯವಾಗಿದೆ. ಮೋಡಬಿತ್ತನೆ ಕೆಲವು ಸಂದರ್ಭದಲ್ಲಿ ಸಮರ್ಪಕವಾಗಿ ಯಶಸ್ವಿಯಾಗಿದ್ದರೂ, ಕೆಲವು ಸಂದರ್ಭದಲ್ಲಿ ಯಶಸ್ವಿಯಾಗಿಲ್ಲ ಎಂದು ಹೇಳಿದರು. ಶಿವಮೊಗ್ಗದಲ್ಲಿ ನಡೆದ  ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಾಗದೆ ಹೋದರೆ, ನೀರಿನ ಸಮಸ್ಯೆಯಿರುವ ತಾಲೂಕುಗಳಲ್ಲಿ ಟ್ಯಾಂಕರ್ ಇಲ್ಲವೇ ಬೋರ್ ವೆಲ್ ಹಾಗು ಖಾಸಗಿ ಬೋರ್ ವೆಲ್ ಮೂಲಕ ನೀರು ಕಲ್ಪಿಸಲು ಸಿದ್ದತೆ ನಡೆಸಲಾಗಿದೆ ಎಂದರು.


ಮಳೆಯ ಅಭಾವದ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಶಂಕಿತ ಕಾಲರಾ ಪ್ರಕರಣಳು ಪತ್ತೆ! ಕಾದಾರಿಸಿದ ನೀರನ್ನೆ ಕುಡಿಯಿರಿ!

 

ಶಿವಮೊಗ್ಗ ಜಿಲ್ಲೆಯಲ್ಲಿ  ಮಳೆಯ ಅಭಾವದ ನಡುವೆ ಕಾಲರಾ ಶಂಕೆ ಮೂಡಿದೆ. ಇದಕ್ಕೆ ಪೂರಕವಾಗಿ ಭದ್ರಾವತಿ ನಗರದ ಕೆಲವೆಡೆ ಕಳೆದು ಒಂದು ವಾರದಿಂದ ಹಲವರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಪತ್ರಿಕೆಯೊಂದಕ್ಕೆ ಮಾತನಾಡಿರುವ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂವಿ ಅಶೋಕ್​,  ಹಲವರು ವಾಂತಿಬೇಧಿ ಸಂಬಂಧ ಆಸ್ಪತ್ರೆಗೆ ದಾಖಲಾಗಿದ್ದರು, 50 ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದಿದ್ದು, ಈ ಪೈಕಿ 14 ಮಂದಿ ಒಳರೋಗಿಯಾಗಿ ದಾಖಲಾಗಿದ್ದರು. ಸದ್ಯ ನಿನ್ನೆ ಶಂಕಿತ ಪ್ರಕರಣ ಮೂರು ಮಾತ್ರ ದಾಖಲಾಗಿದೆ. ಈ ಸಂಬಂಧ ಕಾದಾರಿಸಿದ ನೀರನ್ನೆ ಕುಡಿಯುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಸರಬರಾಜಾಗುವ ನೀರಿನ ಶುದ್ಧತೆಗಳನ್ನ ಪರಿಶೀಲಿಸಲಾಗುತ್ತಿದೆ 

 


ಹೊಸನಗರ ತಾಲ್ಲೂಕಿನಲ್ಲಿ ರೈಲಿಗೆ ಮುತ್ತಿಗೆ ಹಾಕಲು ಯತ್ನ! ಕಾರಣವೇನು?

ರಿಪ್ಪನ್‌ಪೇಟೆ : ಅನ್ನಭಾಗ್ಯ ಯೋಜನೆ ಜಾರಿಗೆ ಅಕ್ಕಿ ವಿತರಿಸದ ಕೇಂದ್ರ ಸರ್ಕಾರದ ವಿರುದ್ಧ ಪಟ್ಟಣದ ಸಮೀಪದ ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಹೊಸನಗರ ತಾಲೂಕ್ ಯುವ ಕಾಂಗ್ರೆಸ್  ಕಾರ್ಯಕರ್ತರು ರೈಲು ತಡೆದು ಪ್ರತಿಭಟಿಸಲು ಮುಂದಾಗಿದ್ದರು. ಈ ಸಂಬಂಧ ಅವರನ್ನ ಸ್ಟೇಷನ್​ ಗೇಟ್​ನಲ್ಲಿಯೇ ತಡೆದ ಪೊಲೀಸರು, ಕಾರ್ಯಕರ್ತರನ್ನು ವಶಕ್ಕೆ ಪಡೆದರು. 

ಇಂಜಿನಿಯರ್ ಪತ್ನಿಯ ಕೊಲೆ! ಮಿಸ್ಸಿಂಗ್​​ ಆದ 32 ಲಕ್ಷ ರೂಪಾಯಿ ಎಲ್ಲಿ? ಆತ ಗೋವಾಕ್ಕೆ ಹೋಗದೇ ಮನೇಗೇಕೆ ಬಂದಿದ್ದ! ನಿಗೂಢ ಹತ್ಯೆಯ ಇನ್​ಸೈಡ್ ಸ್ಟೋರಿ JP ಬರೆಯುತ್ತಾರೆ

 

ಇನ್ನೂ ಪ್ರತಿಭಟನೆಯಲ್ಲಿ ಮಾತನಾಡಿದ  ಮಾತನಾಡಿದ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಆಹಾರ ಪ್ರಾಧಿಕಾರವು ಅಕ್ಕಿ ಖರೀದಿಗೆ ಅವಕಾಶ ನಿರಾಕರಿಸಿರುವುದು ಖಂಡನೀಯ. ಬಿಜೆಪಿ ದ್ವೇಷ ರಾಜಕಾರಣ ಸಾಧಿಸುತ್ತಾ, ಬಡವರ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತೀರ್ಥಹಳ್ಳಿ ವಿಭಾಗದ ಡಿವೈಎಸ್ ಪಿ ಗಜಾನನ ವಾಮನ ಮಾರ್ಗದರ್ಶನದಲ್ಲಿ ಹೊಸನಗರ ಸಿಪಿಐ ಗಿರೀಶ್ ಬಿ ಸಿ, ರಿಪ್ಪನ್‌ಪೇಟೆ ಪಿಎಸ್ ಐ ಪ್ರವೀಣ್ ಎಸ್ ಪಿ,ಹೊಸನಗರ ಪಿಎಸ್ ಐ ಶಿವಾನಂದ ಕೆ ರವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.

 


ಬಾಲಕ ಓಡಿಸ್ತಿದ್ದ ನೀರಿನ ಟ್ರ್ಯಾಕ್ಟರ್ ಪಲ್ಟಿ! ನೀರು ಗಂಟಿ ಸ್ಥಳದಲ್ಲಿಯೇ ಸಾವು!?

 

ಹೊಸನಗರ ತಾಲೂಕಿನ ಬಿದನೂರಿನಲ್ಲಿ ಕುಡಿಯುವ ನೀರಿನ ಟ್ರ್ಯಾಕ್ಟರ್​ ಪಲ್ಟಿಯಾಗಿ, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತರು ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಬಿದನೂರು ನಗರದ ಚಿಕ್ಕಪೇಟೆ ನಿವಾಸಿ ತುಕಾರಾಮರವರು. ಅವರಿಗೆ 46 ವರ್ಷವಾಗಿತ್ತು. 

ರೇಷನ್​ ಅಕ್ಕಿ , ಬೇಳೆ , ಗೋದಿಗೆ ಕಾಯುತ್ತಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ ! ಜೂನ್​ 28 ರೊಳಗೆ ತೆಗೆದುಕೊಳ್ಳಬೇಕು ಪಡಿತರ? ಕಾರಣವೇನು?

 

ನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ ತುಕಾರಾಮ್​ರವರು ಬಿದನೂರು ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್​ನಲ್ಲಿ ನೀರು ಪೂರೈಕೆ ಮಾಡಲು ತೆರಳಿದ್ದರು. ಟ್ರ್ಯಾಕ್ಟರ್​ನ್ನ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಎಂಬ ಮಾಹಿತಿಯಿದೆ. ದಾರಿಮಧ್ಯೆ ಟ್ರ್ಯಾಕ್ಟರ್​ ಪಲ್ಟಿಯಾಗಿದೆ. ಇನ್ನೂ ಟ್ರ್ಯಾಕ್ಟರ್​ನ ಅಡಿಯಲ್ಲಿ ತುಕಾರಾಮ್​ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗುತ್ತಿಗೆದಾರ ಬಾಲಕನ ಕೈಯಲ್ಲಿ ಟ್ರ್ಯಾಕ್ಟರ್​ ಓಡಿಸಲು ಅವಕಾಶ ನೀಡಿದ್ದಕ್ಕೆ ಸ್ಥಳೀಯವಾಗಿ ಆಕ್ರೋಶ ಎದುರಾಗಿದೆ. 

 


ಭದ್ರಾವತಿ ಪೊಲೀಸರ ಕಾರ್ಯಾಚರಣೆ! ಗಾಂಜಾ ಜೊತೆಗೆ ಸಿಕ್ಕಿಬಿದ್ದ ಇಬ್ಬರು ಪೆಡ್ಲರ್ಸ್​

 

ಭದ್ರಾವತಿ  ಪೊಲೀಸರು ದಿಢೀರ್​ ಕಾರ್ಯಾಚರಣೆ ಕೈಗೊಂಡು  1 ಕೆ.ಜಿ 490 ಗ್ರಾಂ. ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧಾರದ ಮೇರೆಗೆ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ವೀರಶೈವ ರುದ್ರಭೂಮಿ ಬಳಿ ದಾಳಿ ನಡೆಸಿ ನಸ್ರುಲ್ಲಾ ಅಲಿಯಾಸ್ ನಸ್ರು(19) ಮತ್ತು ಸೈಫ್ ಆಲಿ ಖಾನ್(25) ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳಾಗುವಷ್ಟರಲ್ಲಿಯೇ ಪ್ರತಿಭಟನೆಯ ಬಿಸಿ! ವಿದ್ಯುತ್ ದರ ಕಡಿಮೆ ಮಾಡದಿದ್ದರೇ ಹೋರಾಟ ಶುರು

 

ಬಂಧಿತರಿಂದ ಒಟ್ಟು ಸುಮಾರು 34,400 ರು. ಮೌಲ್ಯದ   1 ಕೆ.ಜಿ 490 ಗ್ರಾಂ ಒಣ ಗಾಂಜಾ ಹಾಗು700 ರು. ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಠಾಣಾಧಿಕಾರಿ ಶರಣಪ್ಪ ನೇತೃತ್ವದ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಹಾಗು ಪೊಲೀಸ್ ಉಪಾಧೀಕ್ಷಕರು ಅಭಿನಂದಿಸಿದ್ದಾರೆ.