KARNATAKA NEWS/ ONLINE / Malenadu today/ Jun 20, 2023 SHIVAMOGGA NEWS
ಹೊಳೆಹೊನ್ನೂರು: ಪೊಲೀಸ್ ಸ್ಟೇಷನ್ನ ನಾಲ್ವರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಗ೦ಡನ ಆತ್ಮಹತ್ಯೆಗೆ ಪೊಲೀಸರು ನೀಡಿದ ಮಾನಸಿಕ, ದೈಹಿಕ ಹಿಂಸೆಯೇ ಕಾರಣ ಎಂದು ಆರೋಪಿಸಿ ಪತ್ನಿ ದಾಖಲಿಸಿದ್ದ ದೂರಿನ ಹಿನ್ನೆಲೆ ಹೊಳೆಹೊನ್ನೂರು ಠಾಣೆಯ ನಾಲ್ವರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಏನಿದು ಘಟನೆ?
ಜೂನ್ 11ರ೦ದು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ 112ರ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಈ ಪೈಕಿ ಮಂಜುನಾಥ್ ಎಂಬವವನ್ನು ಸಹ ಸ್ಟೇಷನ್ನಲ್ಲಿ ವಿಚಾರಣೆ ನಡೆಸಿದ್ದರು. ಆನಂತರ ಆತನ ಸಹೋದರ ಬಂದು ಮಂಜುನಾಥ್ನನ್ನ ಬಿಡಿಸಿಕೊಂಡು ಹೋಗಿದ್ದರು.
ಮಳೆಯ ಅಭಾವದ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಶಂಕಿತ ಕಾಲರಾ ಪ್ರಕರಣಳು ಪತ್ತೆ! ಕಾದಾರಿಸಿದ ನೀರನ್ನೆ ಕುಡಿಯಿರಿ!
ಈ ಘಟನೆ ನಂತರ ಮಂಜುನಾಥ್ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದನು. ಗಂಡ ಆತ್ಮಹತ್ಯೆಗೆ ಶರಣಾಗಲು ಪೊಲೀಸರು ನೀಡಿದ ಮಾನಸಿಕ ಮತ್ತು ದೈಹಿಕ ಹಿಂಸೆ ಕಾರಣವಾಗಿದೆ.ಪೊಲೀಸರ ಟಾರ್ಚರ್ನಿಂದಲೇ ಪತಿ ಮ೦ಜುನಾಥ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಕಮಲಾಕ್ಷಿ ಠಾಣೆಗೆ ದೂರು ನೀಡಿದ್ದರು. ಸದ್ಯ ಪ್ರಕರಣ ಸಂಬಂಧ ಹೊಳೆಹೊನೂರು ಠಾಣೆಯ ಪೊಲೀಸ್ ಸಿಬ್ಬಂದಿ ಬಿಲಾಲ್, ಲಿಂಗೇಗೌಡ, ಸುದರ್ಶನ್ ಹಾಗೂ ವಿಶ್ವನಾಥ್ ವಿರುದ್ಧ ಎಫ್‌ಐಆ ದಾಖಲಾಗಿದೆ.
ಹೊಸನಗರ ತಾಲ್ಲೂಕಿನಲ್ಲಿ ರೈಲಿಗೆ ಮುತ್ತಿಗೆ ಹಾಕಲು ಯತ್ನ! ಕಾರಣವೇನು?

ಮಲ್ನಾಡಲ್ಲಿ 20 ದಿನಕ್ಕಾಗುವಷ್ಟು ನೀರು! ಮತ್ತೆ ನಡೆಯುತ್ತಾ ಮೋಡ ಬಿತ್ತನೆ! ಮಧು ಬಂಗಾರಪ್ಪ ಹೇಳಿದ್ದೇನು?
ಶಿವಮೊಗ್ಗ / ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಇಂದಿನವರೆಗೆ ವಾಡಿಕೆ ಪ್ರಮಾಣದ ಮಳೆ ಬಾರದ ಹಿನ್ನೆಲೆ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇನ್ನೂ 20 ದಿನಗಳಿಂದ 1 ತಿಂಗಳವರೆಗೆ ಮಾತ್ರ ಕುಡಿಯುವ ನೀರಿನ ಪೂರೈಕೆ ಸಾಧ್ಯವಾಗಲಿದೆ. ಈ ಅವಧಿಯಲ್ಲಿ ಮಳೆ ಬಾರದಿದ್ದರೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ. ಈಗಾಗಲೇ ಜಿಲ್ಲೆಯ 80-90 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದನ್ನು ಗುರುತಿಸಲಾಗಿದೆ. ಪ್ರಸ್ತುತ 25 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಮೋಡಬಿತ್ತನೆಗೆ ಮುಂದಾದ ಸರ್ಕಾರ
ನಿಗದಿತ ಸಮಯಕ್ಕೆ ಮಳೆಯಾಗದಿದ್ದರೆ ಮೋಡಬಿತ್ತನೆ ಮಾಡುವುದು ಅನಿವಾರ್ಯವಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಮುಖ್ಯಮಂತ್ರಿಗಳ ಜೊತೆ ದೆಹಲಿಗೆ ಹೋಗುವ ಸಂದರ್ಭದಲ್ಲಿ ಮಾತನಾಡುವುದಾಗಿ ಹೇಳಿದ ಮಧು ಬಂಗಾರಪ್ಪ, ಮೋಡಬಿತ್ತನೆ ಸದ್ಯಕ್ಕೆ ಬಹಳ ಮುಖ್ಯವಾಗಿದೆ. ಮೋಡಬಿತ್ತನೆ ಕೆಲವು ಸಂದರ್ಭದಲ್ಲಿ ಸಮರ್ಪಕವಾಗಿ ಯಶಸ್ವಿಯಾಗಿದ್ದರೂ, ಕೆಲವು ಸಂದರ್ಭದಲ್ಲಿ ಯಶಸ್ವಿಯಾಗಿಲ್ಲ ಎಂದು ಹೇಳಿದರು.
ಬಾಲಕ ಓಡಿಸ್ತಿದ್ದ ನೀರಿನ ಟ್ರ್ಯಾಕ್ಟರ್ ಪಲ್ಟಿ! ನೀರು ಗಂಟಿ ಸ್ಥಳದಲ್ಲಿಯೇ ಸಾವು!?
ಶಿವಮೊಗ್ಗದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಾಗದೆ ಹೋದರೆ, ನೀರಿನ ಸಮಸ್ಯೆಯಿರುವ ತಾಲೂಕುಗಳಲ್ಲಿ ಟ್ಯಾಂಕರ್ ಇಲ್ಲವೇ ಬೋರ್ ವೆಲ್ ಹಾಗು ಖಾಸಗಿ ಬೋರ್ ವೆಲ್ ಮೂಲಕ ನೀರು ಕಲ್ಪಿಸಲು ಸಿದ್ದತೆ ನಡೆಸಲಾಗಿದೆ ಎಂದರು.
