ಶಿವಮೊಗ್ಗ DCC BANK ಅಧ್ಯಕ್ಷರಾಗುತ್ತಾರಾ ಆರ್​ಎಂ ಮಂಜುನಾಥ್ ಗೌಡ ! ಕುತೂಹಲ ಮೂಡಿಸಿದ ನಡೆ!

The election for the chairmanship of Shimoga DCC Bank will be held on September 29ಶಿವಮೊಗ್ಗ ಡಿಸಿಸಿ ಬ್ಯಾಂಕ್​ನ ಅಧ್ಯಕ್ಷಗಾದಿ ಇದೇ ಸೆಪ್ಟೆಂಬರ್ ೨೯ ರಂದು ಚುನಾವಣೆ ನಡೆಯಲಿದೆ

ಶಿವಮೊಗ್ಗ DCC BANK  ಅಧ್ಯಕ್ಷರಾಗುತ್ತಾರಾ ಆರ್​ಎಂ ಮಂಜುನಾಥ್ ಗೌಡ ! ಕುತೂಹಲ ಮೂಡಿಸಿದ ನಡೆ!

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್  (Shimoga District Co-Operative Central Bank Ltd.)  ಅಧ್ಯಕ್ಷ ಸ್ಥಾನಕ್ಕೆ ಇದೇ ಸೆಪ್ಟೆಂಬರ್​ 29 ರಂದು ಚುನಾವಣೆ ನಡೆಯುವುದು ನಿಕ್ಕಿಯಾಗಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಎಂ.ಬಿ ಚನ್ನವೀರಪ್ಪರವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿತ್ತು. ಹಾಗಾಗಿ ಅವರು ಪದ್ಯುಚ್ಯುತಗೊಂಡು, ಹಂಗಾಮಿ ಅಧ್ಯಕ್ಷರು ಅಧಿಕಾರವಹಿಸಿಕೊಂಡಿದ್ದರು. 

ಇದೀಗ ಸೆಪ್ಟೆಂಬರ್​ 29 ರಂದು ಚುನಾವಣೆ ನಡೆಯಲಿದ್ದು, ಬಹುತೇಕ  ಡಾ.ಆರ್.ಎಂ.ಮಂಜುನಾಥ್​ ಗೌಡರು ಡಿಸಿಸಿ ಬ್ಯಾಂಕ್​ನ ಅಧ್ಯಕ್ಷಗಿರಿ ವಹಿಸುವ ಸಾಧ್ಯತೆ ಇದೆ.  

ಈ ನಡುವೆ ಕಾನೂನು ಪ್ರಕ್ರಿಯೆಯಲ್ಲಿ ಲೋಪದೋಷಗಳು ಆಗದಂತೆ ಕೆಲವೊಂದು ಚಟುವಟಿಕೆಗಳು ಡಿಸಿಸಿ ಬ್ಯಾಂಕ್​ನಲ್ಲಿ ನಡೆದಿದ್ದವು. ನಿರ್ದೇಶಕರ ಸ್ಥಾನಕ್ಕೆ ಕೆಪಿ ದುಗ್ಗಪ್ಪಗೌಡರು ರಾಜೀನಾಮೆ ನೀಡಿದ್ದರಿಂದ ಅವರ ಸ್ಥಾನದಲ್ಲಿ ನಿರ್ದೇಶಕರಾಗಿ ಆರ್ ಎಂ ಮಂಜುನಾಥ್ ಗೌಡರನ್ನ ನೇಮಕ ಮಾಡಲಾಗಿತ್ತು. ಇದರಿಂದ ಅಧ್ಯಕ್ಷ ಗಾದಿಗೆ ಏರುವ ಹಾದಿಯು ಆರ್​ಎಂಎಂ ಗೆ ಸಲೀಸಾಗಿತ್ತು. 

ಡಿಸಿಸಿ ಬ್ಯಾಂಕ್​ನ ಹಾಲಿ ಆಡಳಿತ ಮಂಡಳಿಯ ಅವಧಿಯು ಇನ್ನೇನು ಕೆಲವು ತಿಂಗಳಷ್ಟೆ. ಇದರ ನಡುವೆ ಆರ್ ಎಂ ಎಂ ಮಂಜುನಾಥ್​ ಗೌಡರು ಅಧ್ಯಕ್ಷರಾಗುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.   


ಇನ್ನಷ್ಟು ಸುದ್ದಿಗಳು