ಹೊಸನಗರದಲ್ಲಿ ಹುಲಿ, ಶಿಕಾರಿಪುರದಲ್ಲಿ ಕರಡಿ ಪ್ರತ್ಯಕ್ಷ | ಕಾಡಿಗೆ ಅಟ್ಟಿದ ಅರಣ್ಯ ಇಲಾಖೆ

Bear spotted in Shikaripur taluk, forest department drives it back to forest

ಹೊಸನಗರದಲ್ಲಿ ಹುಲಿ, ಶಿಕಾರಿಪುರದಲ್ಲಿ ಕರಡಿ ಪ್ರತ್ಯಕ್ಷ | ಕಾಡಿಗೆ ಅಟ್ಟಿದ ಅರಣ್ಯ ಇಲಾಖೆ
Bear spotted in Shikaripur taluk,

SHIVAMOGGA | MALENADUTODAY NEWS | May 25, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಲ್ಲಿ ಹುಲಿ ಪ್ರತ್ಯಕ್ಷವಾಗಿರುವ ಬಗ್ಗೆ ನಿನ್ನೆ ಮಲೆನಾಡು ಟುಡೆಯಲ್ಲಿ ವರದಿ ಓದಿದ್ದೀರಿ. ಇವತ್ತು ನಿಮ್ಮ ಮುಂದೆ ಶಿಕಾರಿಪುರ ತಾಲ್ಲೂಕು ಈಸೂರು ಗ್ರಾಮದಲ್ಲಿ ಕರಡಿಯೊಂದು ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ 

ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಮೊನ್ನೆ ಗುರುವಾರ  ಕರಡಿಯೊಂದು ಪತ್ಯಕ್ಷವಾಗಿತ್ತು. ಇದೀಗ ಆ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಕಾಡಿಗೆ  ಅಟ್ಟಿದ್ದಾರೆ. 

ಈಸೂರಿನ ವೀರಭದ್ರೇಶ್ವರ ದೇವಸ್ಥಾನ ಹಿಂಭಾಗದ ಕೆರೆಯಲ್ಲಿ ಕರಡಿ ಕಾಣಿಸಿಕೊಂಡಿತ್ತು. ಕರಡಿಯನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಕರಡಿ ದಿನವಿಡಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಪರದಾಡುವಂತೆ ಮಾಡಿತ್ತು 

ಆ ಬಳಿಕ ನಿನ್ನೆ ಶುಕ್ರವಾರ ಸಂಜೆ ನಡೆದ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕೆರೆಯ ಸುತ್ತ  ಬಲೆ ಕಟ್ಟಿ ಕರಡಿಯನ್ನು ಕಾಡಿಗೆ ಅಟ್ಟಿಸುವಲ್ಲಿ ಯಶಸ್ವಿಯಾದರು. ಸದ್ಯ ಕರಡಿ ಗೊಬ್ಬರದ ಹೊಂಡ ಅರಣ್ಯ ಪ್ರದೇಶಕ್ಕೆ ತೆರಳಿದೆ. 

A bear appeared in Isuru village of Shikaripur taluk on Thursday. The forest department staff conducted an operation and made the bear return to the forest.