ಪ್ರಮುಖ ಗಣಪತಿ ವಿಸರ್ಜನಾ ಮೆರವಣಿಗೆ ! ಹೇಗಿದೆ ಪೊಲೀಸ್ ಬಂದೋಬಸ್ತ್! ಇಬ್ಬರು ಎಸ್​ಪಿ ಶಿವಮೊಗ್ಗಕ್ಕೆ: ADGP ಹಿತೇಂದ್ರ STATEMENT

ADGP R Hitendra has spoken about the arrest related to Ganapathi discharge in Shimogaಶಿವಮೊಗ್ಗದಲ್ಲಿ ಗಣಪತಿ ವಿಸರ್ಜನೆ ಸಂಬಂಧ ಬಂದೋಬಸ್ತ್​ ಬಗ್ಗೆ ಎಡಿಜಿಪಿ ಆರ್ ಹಿತೇಂದ್ರರವರು ಮಾತನಾಡಿದ್ದಾರೆ

ಪ್ರಮುಖ ಗಣಪತಿ ವಿಸರ್ಜನಾ ಮೆರವಣಿಗೆ ! ಹೇಗಿದೆ ಪೊಲೀಸ್ ಬಂದೋಬಸ್ತ್! ಇಬ್ಬರು ಎಸ್​ಪಿ ಶಿವಮೊಗ್ಗಕ್ಕೆ:  ADGP ಹಿತೇಂದ್ರ STATEMENT

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’

ಶಿವಮೊಗ್ಗದಲ್ಲಿ ಪ್ರಮುಖ ಗಣಪತಿಗಳ ವಿಸರ್ಜನಾ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ  ಪೊಲೀಸ್ ಇಲಾಖೆ ಬಂದೋಬಸ್ತ್​ನ್ನು ಪರಿಶೀಲಿಸಲು ಆಗಮಿಸಿದ್ದ ಎಡಿಜಿಪಿ ಆರ್​ ಹಿತೇಂದ್ರ ಇಂದು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶಿವಮೊಗ್ಗ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆಯನ್ನ ನಡೆಸಲಾಗಿದೆ, ಈ ವೇಳೆ  ಸೂಕ್ತ ಸೂಚನೆಯನ್ನು ನೀಡಿದ್ದೇನೆ. 

ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಿಗೆ ನಾನು ಭೇಟಿಯನ್ನು ನೀಡಿದ್ದೇನೆ,  ಈ ಬಾರಿಯ ಗಣಪತಿ ಹಾಗೂ ಈದ್ ಮಿಲಾದ್ ಗಾಗಿ ಹೆಚ್ಚುವರಿ ಸಿಬ್ಬಂದಿಗಳನ್ನ ಒದಗಿಸಲಾಗುತ್ತಿದೆ. ಪರಿಸ್ತಿತಿಯನ್ನು ನೋಡಿಕೊಂಡು ಇನ್ನಷ್ಟು ಬಂದೋಬಸ್ತ್ ಮಾಡಲಾಗುವುದು ಎಂದು ತಿಳಿಸಿದರು.   

ಶಿವಮೊಗ್ಗ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಹೆಚ್ಚಿನ ನಿಗಾವಹಿಸಲಾಗುತ್ತಿದೆ. ನಿನ್ನೆ ಟ್ಯಾಂಕ್ ಮೊಹಲ್ಲಾದಲ್ಲಿ ನಡೆದ ಘಟನೆಯು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮೈಯೆಲ್ಲಾ ಕಣ್ಣಾಗಿರಿಸಿ ಕರ್ತವ್ಯ ಮಾಡುವ ಪರಿಸ್ಥಿತಿಯಿದೆ ಎಂದ ಅವರು,  ಹೊರಗಡೆಯಿಂದ ಡಿವೈಎಸ್ಪಿ ಹಾಗೂ ಇತರ ಅಧಿಕಾರಿಗಳು ಈಗಾಗಲೇ ಬಂದಿದ್ದಾರೆ. 15 ಕೆಎಸ್ ಆರ್ ಪಿ, ಒಂದು ಆರ್ ಎ ಎಫ್ ತುಕಡಿ, ಎರಡು ಎಸ್ ಪಿ, 15 ಡಿವೈಎಸ್ಪಿ , 35 ಇನ್ಸ್ಪೆಕ್ಟರ್ ಸಿಬ್ಬಂದಿ ಯೋಜನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.  


ಇನ್ನಷ್ಟು ಸುದ್ದಿಗಳು