KARNATAKA NEWS/ ONLINE / Malenadu today/ Jun 24, 2023 SHIVAMOGGA NEWS
ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಫೆಬ್ರವರಿ ನಡೆದಿದ್ದ ಕಳ್ಳತನದ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಅಶೊಕ ನಗರದ ವಾಸಿ 57 ವರ್ಷದ ಮಹಿಳೆಯೊಬ್ಬರ ವಾಸದ ಮನೆಯೊಂದರ ಬಾಗಿಲನ್ನು ಮುರಿದು ಯಾರೋ ಕಳ್ಳರು ಗಾಡ್ರೇಜ್ ಬೀರುವಿನಲ್ಲಿದ್ದ ನಗದು ಹಣ, ಬಂಗಾರದ ಆಭರಣಗಳು ಮತ್ತು ಮೊಬೈಲ್ ಫೋನ್ ಅನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಐಪಿಸಿ 454, 457, 380 ಅಡಿಯಲ್ಲಿ ಕೇಸ್ ದಾಖಲಾಗಿತ್ತು.
ಇದೀಗ ತನಿಖಾ ತಂಡ 23-06-2023 ರಂದು ಆರೋಪಿ ತೌಸೀಫ್ @ ತೌಸೀಫ್ ವುಲ್ಲಾ @ ಟೈಗರ್ @ ಗೀರ್ಪಡೆ ಎಂಬ ಹೆಸರಿನ ಸೂಳೇಬೈಲು ನಿವಾಸಿಯನ್ನು ಬಂಧಿಸಿದ್ದಾರೆ. ಅಲ್ಲದೆ ಈತನಿಂದ 1,48,000/- ರೂ ಗಳ ಒಟ್ಟು 33 ಗ್ರಾಂ 850 ಮಿಲಿ ತೂಕದ ಬಂಗಾರದ ಆಭರಣಗಳು ಮತ್ತು ಒಂದು ಮೊಬೈಲ್ ಫೋನ್ ಅನ್ನು ಜಪ್ತು ಮಾಡಲಾಗಿದೆ.