KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’
ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್ ಹಿತೇಂದ್ರ (ADGP R Hitendra) ರವರು ಹಲವು ವಿಚಾರಗಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಶಿವಮೊಗ್ಗದಲ್ಲಿನ ಕಾನೂನು ಸುವ್ಯವಸ್ಥೆಯು ತೃಪ್ತಿಕರವಾಗಿದೆ. ಸವಾಲಿನ ಜಿಲ್ಲೆಯಾದ್ದರಿಂದ, ಯಾವುದೇ ಸಂದರ್ಭದಲ್ಲಿ ಏನೂ ಕೂಡ ಆಗಬಹುದು ಹಾಗಾಗಿ ಹೆಚ್ಚಿನ ನಿಗಾವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್ 26 ರೊಳಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಶಿವಮೊಗ್ಗಕ್ಕೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸಂಪೂರ್ಣವಾಗಿ ಗಾಂಜಾ ಪೂರೈಕೆ ನಿಂತಿಲ್ಲ. ಇದನ್ನ ನಾನು ಒಪ್ಪಿಕೊಳ್ಳುತ್ತಿದ್ದು, ಈ ಸಂಬಂಧ ತಳಮಟ್ಟದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ ಎಡಿಜಿಪಿ ಆಂಧ್ರಾ ಮತ್ತು ಒಡಿಶಾ ಮೂಲದಿಂದ ಈ ಗಾಂಜಾ ಪೂರೈಕೆಯಾಗುತ್ತಿದ್ದು, ಈ ಸಂಬಂಧ ಮೂಲದಲ್ಲಿಯೇ ಗಾಂಜಾ ಪೂರೈಕೆಯ ವಿರುದ್ಧ ಕ್ರಮಕೈಗೊಳ್ಳಬೇಕಾಗಿದ್ದು, ಈ ಸಂಬಂಧ ಮೇಲ್ಮಟ್ಟದ ಸಭೆಯನ್ನು ನಡೆಸಲಾಗಿದೆ. ಈ ವರ್ಷ 5 ಸಾವಿರಕ್ಕೂ ಹೆಚ್ಚು ಕೇಸ್ಗಳನ್ನು ದಾಖಲಿಸಿ 10 ಟನ್ಗೂ ಹೆಚ್ಚು ಗಾಂಜಾವನ್ನು ಸೀಜ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬೈ ಕೊರಿಯರ್ ಗಳ ಮೂಲಕ ಗಾಂಜಾ ಪೂರೈಕೆಯಾಗುತ್ತಿದ್ದು, ಅದರ ಬಗ್ಗೆ ಹೆಚ್ಚಿನ ನಿಗಾವಹಿಸುತ್ತಿದ್ದು, ಪೊಲೀಸ್ ಇಲಾಖೆ ಗಾಂಜಾ ಪೂರೈಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಗಾಂಜಾ ಸೇವನೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕಿದೆ ಎಂದಿದ್ದಾರೆ.
ಇನ್ನಷ್ಟು ಸುದ್ದಿಗಳು
ಹಬ್ಬದ ದಿನ ತವರು ಮನೆಯಿಂದ ಗಂಡನ ಮನೆಗೆ ಹೋದ ಬೆನ್ನಲ್ಲೆ ಯುವತಿ ಸಾವು! ಮದುವೆಯಾಗಿ ಏಳು ತಿಂಗಳಿನಲ್ಲಿ ನಡೆದಿದ್ದೇನು?
ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?
