ಕೋಚಿಂಗ್ ಸೆಂಟರ್​ಗೆ ಹೋಗಿ ಬರ್ತಿನಿ ಎಂದಿದ್ದ ಯುವಕ ಕಾಣೆಯಾಗಿದ್ದಾನೆ! ಸುಳಿವು ಸಿಕ್ಕರೆ ಮಾಹಿತಿ ಕೊಡಿ

A young man who had gone to a coaching centre is missing! Provide information if you have a clue

ಕೋಚಿಂಗ್ ಸೆಂಟರ್​ಗೆ ಹೋಗಿ ಬರ್ತಿನಿ ಎಂದಿದ್ದ ಯುವಕ ಕಾಣೆಯಾಗಿದ್ದಾನೆ! ಸುಳಿವು ಸಿಕ್ಕರೆ ಮಾಹಿತಿ ಕೊಡಿ

KARNATAKA NEWS/ ONLINE / Malenadu today/ Apr 26, 2023 GOOGLE NEWS


ಶಿವಮೊಗ್ಗ  ಇಲ್ಲಿನ ನಿವಾಸಿ: ಹರ್ಷ ಜಿ ಎಂಬ 18 ವರ್ಷದ ಹುಡುಗ ಕಾನೆಯಾಗಿದ್ದು, ಈತನ ಸುಳಿವು ಸಿಕ್ಕರೆ ಸಂಬಂಧಪಟ್ಟವರಿಗೆ ತಿಳಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

 ಈತ ಏಪ್ರಿಲ್ 17 ರಂದು  ಶಿವಮೊಗ್ಗದ ಸಹ್ಯಾದ್ರಿ ಕೋಚಿಂಗ್ ಸೆಂಟರ್‍ಗೆ ಎಂದು ಹೊರಹೋಗಿದ್ದು, ಈವರೆಗೂ ವಾಪಾಸ್ಸಾಗಿಲ್ಲ

ಕಾಣೆಯಾದ ಹರ್ಷ.ಜಿ  ಸುಮಾರು 4.7 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದ್ದಾನೆ. 

ಕಾಣೆಯಾದ ವೇಳೆ ಕಪ್ಪು ನೀಲಿ ಟೀ ಷರ್ಟ್ ಮತ್ತು ಕಂದು ನೀಲಿ ಬಣ್ಣದ  ಪ್ಯಾಂಟ್ ಧರಿಸಿರುತ್ತಾನೆ. 

ಈತನ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಜಯನಗರ ಪೊಲೀಸ್​ ಠಾಣೆ (jayanagara police station ) ಗೆ ಮಾಹಿತಿ ನೀಡಿದೆ. 

ಅಥವಾ  ಪೊಲೀಸ್ ಕಂಟ್ರೋಲ್​ 100, ದೂ.ಸಂ: 08182-261400/261413/261416 ನ್ನು ಸಂಪರ್ಕಿಸುವಂತೆ ಜಯನಗರ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 



ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 



ಸಾಗರದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

ಸಾಗರ :   18 ವರ್ಷ ತುಂಬಿದ ಎಲ್ಲಾ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬೆಂಬಲಿಸಬೇಕು 

ಹಾಗೂ ಸಂವಿಧಾನ ಕಲ್ಪಿಸಿಕೊಟ್ಟ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಾಗರ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ನಾಗೇಶ್ ಎನ್ ಬ್ಯಾಲಾಳ್ ತಿಳಿಸಿದರು.



ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ಕ್ಕೆ  ಸಂಬಂಧಿಸಿದಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ಸಾಗರ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಈ ಕಾರ್ಯಕ್ರಮದಲ್ಲಿ ಮಾತನಾಡಿದ   ನಾಗೇಶ್ ಎನ್ ಬ್ಯಾಲಾಳ್  ಕಡ್ಡಾಯವಾಗಿ ಎಲ್ಲ ಅರ್ಹರು ಮತದಾನ ಮಾಡುವಂತೆ ಕೋರಿದ ಅವರು ನೆರಿದ್ದ ಸಾರ್ವಜನಿಕರು, ಅಧಿಕಾರಿ, ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.



 ಜಿಲ್ಲಾ ಸ್ವೀಪ್ ಸಮಿತಿ ಉಪ ನೋಡಲ್ ಅಧಿಕಾರಿ ನವೀದ್ ಅಹ್ಮದ್ ಪರ್ವೀಜ್ ಮಾತನಾಡಿ, ಸಾರ್ವಜನಿಕರು ಸಿ-ವಿಜಿಲ್ ಆ್ಯಪ್ ಬಳಸುವ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಯುವಲ್ಲಿ ಕೈಜೋಡಿಸಬಹುದು.

 

ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್​ ಸ್ಟಂಟ್/  ಸೈಲೆಂಟ್ ಆಗಿ  ಪುಂಡರಿಗೆ ವಾರ್ನಿಂಗ್​ ಕೊಟ್ಟ ಪೊಲೀಸ್ 



ಏಪ್ರಿಲ್ 11 ರವರೆಗೆ ಪರಿಷ್ಕರಣೆ ಆಗಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಲು ವಿಹೆಚ್‍ಎ ಆ್ಯಪ್ ಬಳಸಬಹುದು. 

ಈ ಬಾರಿ ಆಯೋಗವು ವಿಶೇಷ ಚೇತನರು ಮತ್ತು 80 ವರ್ಷ ಮೇಲ್ಪಟ್ಟ ಮತದಾರರಿಗೆ ಪೋಸ್ಟಲ್ ಬ್ಯಾಲಟ್ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸಿದ್ದು  

ಚುನಾವಣೆ ಕುರಿತು ಹೆಚ್ಚಿನ ಯಾವುದೇ ಮಾಹಿತಿಗೆ ವೆಬ್‍ಸೈಟ್ https://ceo.karnataka.gov.in/en  ನಲ್ಲಿ ನೋಡಬಹುದು ಎಂದರು.

ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ರಂಗೋಲಿ ಸ್ಪರ್ಧೆ ಹಾಗೂ ಜಾಥಾ, ಮಾನವ ಸರಪಳಿ ರಚಿಸುವ ಮೂಲಕ ಮತದಾನ ಜಾಗೃತಿ ಘೋಷಣೆಗಳನ್ನು ಕೂಗುವ ಮೂಲಕ ಮತದಾರರ ಜಾಗೃತಿ ಹಬ್ಬದಂತೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಚಂದ್ರಪ್ಪ ಸಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಂತೋಷ, ಕ್ಷೇತ್ರ  ಶಿಕ್ಷಣಾಧಿಕಾರಿ ನಿಂಗಪ್ಪ, ಇತರೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಸ್ವಸಹಾಯ ಸಂಘದ ಮಹಿಳೆಯರು ಪಾಲ್ಗೊಂಡಿದ್ದರು.




Malenadutoday.com Social media