SSLC / ಇಂದೆ ಪ್ರಕಟವಾಗಲಿದೆ ಎಸ್​ಎಸ್​​ಎಲ್​ಸಿ ಪರೀಕ್ಷೆ ಫಲಿತಾಂಶ ! ವಿವರ ಇಲ್ಲಿದೆ

SSLC exam result to be declared today ! Here's the details

SSLC /  ಇಂದೆ ಪ್ರಕಟವಾಗಲಿದೆ ಎಸ್​ಎಸ್​​ಎಲ್​ಸಿ ಪರೀಕ್ಷೆ ಫಲಿತಾಂಶ ! ವಿವರ ಇಲ್ಲಿದೆ

KARNATAKA NEWS/ ONLINE / Malenadu today/ May 7, 2023 GOOGLE NEWS 

SSLCREULT/  2022–23ನೇ ಸಾಲಿನ ಎಸ್‌ಎಸ್‌ಎಲ್‌ಸಿ(sslc)  ಎಕ್ಸಾಮ್​ನ ರಿಸಲ್ಟ್  ಇಂದು ಹೊರಬೀಳಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಫಲಿತಾಂಶ ವಿಳಂಭವಾಗಲಿದೆ ಎನ್ನಲಾಗಿತ್ತು. ಆದರೆ ಇದೀಗ ಇವತ್ತೆ ರಿಸಲ್ಟ್ ಹೊರಕ್ಕೆ ಬರಲಿದೆ. ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ತಮ್ಮ ಫಲಿತಾಂಶವನ್ನು ನೋಡಬಹುದು

 

ಈ ಸಾಲಿನ  ವಾರ್ಷಿಕ ಪರೀಕ್ಷೆಯ ಫಲಿತಾಂಶ ಇವತ್ತು ಅಂದರೆ ಮೇ 8ರಂದು ಬೆಳಿಗ್ಗೆ 10ರ ವೇಳೆಗೆ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ. 

 

ಎಲ್ಲಿ ನೋಡಬಹುದು ರಿಸಲ್ಟ್​ 

ಬೆಳಿಗ್ಗೆ 11ರ ಬಳಿಕ http://karresults.nic.in ಜಾಲತಾಣದಲ್ಲೂ ವಿದ್ಯಾರ್ಥಿಗಳು ಫಲಿತಾಂಶ ನೋಡಬಹುದಾಗಿದೆ..ಮಧ್ಯಾಹ್ನದ ವೇಳೆಗೆ ಎಲ್ಲಾ ಶಾಲೆಗಳಲ್ಲೂ ರಿಸಲ್ಟ್​ ಪ್ರಕಟಿಸಲಾಗುವುದು ಹಾಗೂ  ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಮೂಲಕವೂ ಫಲಿತಾಂಶದ ವಿವರ ಕಳುಹಿಸಲಾಗುವುದು ಎಂದು ಮಂಡಳಿ ತಿಳಿಸಿದೆ

ಇನ್ನಷ್ಟು ವಿವರ

ಕಳೆದ  ಮಾರ್ಚ್‌ 31 ರಿಂದ ಏಪ್ರಿಲ್‌ 15ರ ವರೆಗೆ ರಾಜ್ಯದ 3,305 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿತ್ತು. ಒಟ್ಟು. 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಜಿಲ್ಲಾ ಕೇಂದ್ರಗಳಲ್ಲೂ ಮೌಲ್ಯಮಾಪನ ಕಾರ್ಯ ನಡೆದಿದ್ದು, 63 ಸಾವಿರ ಶಿಕ್ಷಕರು ಭಾಗವಹಿಸಿದ್ದರು.


Bhadravati/ ಕ್ರಿಕೆಟ್ ಬೆಟ್ಟಿಂಗ್/ ನಾಲ್ವರ ವಿರುದ್ಧ ದಾಖಲಾಯ್ತು ಕೇಸ್​ !

ಹೊಸನಗರ ಶಿವಮೊಗ್ಗ/ ಇಲ್ಲಿನ ಗವಟೂರಿನಲ್ಲಿ ಕಾರೊಂದು ಧರೆಗೆ ಗುದ್ದಿ ಅಪಘಾತವಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವರು ಗಾಯಗೊಂಡಿದ್ದಾರೆ. 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

ಹೊಸನಗರದಿಂದ ಶಿವಮೊಗ್ಗಕ್ಕೆ ತೆರಳುತಿದ್ದ ವೇಳೆ, ಮಾರುತಿ  ಬಲೆನೋ ವಾಹನಮ, ಚಾಲಕನ ನಿಯಂತ್ರಣ ತಪ್ಪಿ, ರೈಟಿಗೆ ಪಲ್ಟಿಯಾಗಿದೆ. ಅಲ್ಲದೆ ರಸ್ತೆ ಪಕ್ಕದಲ್ಲಿದ್ದ ಧರೆಗೆ ಗುದ್ದಿ ಕಾರು ಅಲ್ಲಿಯೇ ನಿಂತಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇಂಜಿನಿಯರ್​​​​ ಒಬ್ಬರಿಗೆ ಗಾಯವಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

 


 

Bhadravati/ ಕ್ರಿಕೆಟ್ ಬೆಟ್ಟಿಂಗ್/ ನಾಲ್ವರ ವಿರುದ್ಧ ದಾಖಲಾಯ್ತು ಕೇಸ್​ !

ಭದ್ರಾವತಿ/ ಶಿವಮೊಗ್ಗ ಭದ್ರಾವತಿ ಓಲ್ಡ್​ ಟೌನ್​ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್ ನಡೆಸ್ತಿದ್ದ ನಾಲ್ವರನ್ನ ಬಂಧಿಸಿದ್ದಾರೆ.

ಮಾಜಿ ಶಾಸಕರ ತೋಟದ ಮನೆಗೆ ನುಗ್ಗಿ ಒಂದು ಕೆಜಿ ಚಿನ್ನ ದರೋಡೆ! ಬಂದೂಕು ತೋರಿಸಿ 15 ಜನರ ತಂಡದ ಕೃತ್ಯ!

ಕಳೆದ ಆರನೇ ತಾರೀಖು, ಓಲ್ಡ್​ ಟೌನ್​ ಪಿಎಸ್​ಐಗೆ  ಬೆಟ್ಟಿಂಗ್ ನಡೆಯುತ್ತಿರುವುದರ ಬಗ್ಗೆ ಮಾಹಿತಿ ಬಂದಿದೆ. ನಗರದ ಮಾಧವಾಚಾ‌ರ್​ ಸರ್ಕಲ್‌ ಭೂತನಗುಡಿ, ಟಿಕೆ ರಸ್ತೆ, ಗಾಂಧಿ ಸರ್ಕಲ್‌ ,ಗುಂಡುರಾವ್‌ ಶೆಡ್‌ ಮುಂತಾದ ಏರಿಯಾಗಳಲ್ಲಿ ಗಸ್ತು ಹೊರಟಿದ್ದಾರೆ. ಈ ವೇಳೇ  ಟಿಕೆ ರಸ್ತೆ ಫೈ ಓವರ್ ಕೆಳಗೆ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವುದು ಕಂಡು ಬಂದಿದೆ. ಸದ್ಯ ಪ್ರಕರಣ ಸಂಬಂಧ ಪೊಲೀಸರೇ ಕೋರ್ಟ್ ಪರ್ಮಿಶನ್​ ಪಡೆದು ಸಮುಟೋ ಕೇಸ್ ದಾಖಲಿಸಿದ್ದು, ಮಂಜುನಾಥ್​ ಸೇರಿದಂತೆ ನಾಲ್ವರ ವಿರುದ್ಧ  ಕಲಂ 78(1)(A) (VI) ಕೆ.ಪಿ,ಆಕ್ಟ್ ನಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ.  


bhadravati / ಭದ್ರಾವತಿ ವಿಧಾನಸಭಾ ಕ್ಷೇತ್ರ ! ಯಾರು ನಿರ್ಣಾಯಕ? ಕ್ಷೇತ್ರದಲ್ಲಿ ಹೇಗಿದೆ ಪೈಪೋಟಿ

ಭದ್ರಾವತಿ/ ಶಿವಮೊಗ್ಗಭದ್ರಾವತಿ ವಿಧಾನಸಭಾ ಕ್ಷೇತ್ರ ದಲ್ಲಿ ಈ ಸಲ ಯಾರ ಪರ ಅಲೆಯಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಹಾಗಾಗಿ ಬಿರುಸಿನ ಪೈಪೋಟಿ ಸ್ಪರ್ಧಿಗಳ ನಡುವೆ ನಡೆಯುತ್ತಿದೆ. ವ್ಯಕ್ತಿಗತ ಪ್ರತಿಷ್ಟೆ ಚುನಾವಣೆಯು ನಡೆಯುತ್ತಿದ್ದ ಕ್ಷೇತ್ರದಲ್ಲಿ ಈ ಸಲ ಶಾರದಾ ಅಪ್ಪಾಜಿಯವರ ಸ್ಪರ್ಧೆ ಮುಖ್ಯವಾಗಿ ಕಂಡು ಬರುತ್ತಿದೆ. ಇನ್ನೂ ಬಿಕೆ ಸಂಗಮೇಶ್ ತಮ್ಮೆಲ್ಲಾ ಅನುಭವವನ್ನು ಚುನಾವಣೆಗೆ ದಾರೆಯೆರಿಯುತ್ತಿದ್ದಾರೆ. 

ಭದ್ರಾವತಿ ವಿಧಾನಸಭಾ ಕ್ಷೇತ್ರ

  1. ಪುರುಷ ಮತದಾರರು 102236

  2. ಮಹಿಳಾ ಮತದಾರರು-107971

  3. ಒಟ್ಟು ಮತದಾರರು-210212

 

ಜಾತಿ ಲೆಕ್ಕಾಚಾರ

 

ಬೋವಿ(ಎಸ್ಸಿ)-1700,ಬಂಜಾರ-11000, ಕ್ರಿಶ್ವಿಯನ್ (ಕನ್ ವರ್ಟೆಡ್) 7000, ಇತರೆ ಎಸ್ಸಿ 13,000, ವಾಲ್ಮಿಕಿ ಮತ್ತು ಇತರೆ ಎಸ್ಟಿ -4000, ಒಕ್ಕಲಿಗ-36000, ಮುಸ್ಲಿಂ-33,000, ತಮೀಳ್- 30,000, ಲಿಂಗಾಯಿತ- 19,000, ಮರಾಠಿ-13,500, ಕುರುಬ-8000, ಈಡಿಗ-2200, ಇತರೆ- 15,25, ಕ್ಷೇತ್ರದಲ್ಲಿ ಒಕ್ಕಲಿಗರು ಹಾಗು ಲಿಂಗಾಯಿತರು ತಮಿಳರು ಹೆಚ್ಚುಕಮ್ಮಿ ಸಮಬಲದಲ್ಲಿದ್ದಾರೆ.ಅಂತಿಮವಾಗಿ ಮುಸ್ಲಿಂ ಮತಗಳು ನಿರ್ಣಾಯಕ.

ಮಾಜಿ ಶಾಸಕರ ತೋಟದ ಮನೆಗೆ ನುಗ್ಗಿ ಒಂದು ಕೆಜಿ ಚಿನ್ನ ದರೋಡೆ! ಬಂದೂಕು ತೋರಿಸಿ 15 ಜನರ ತಂಡದ ಕೃತ್ಯ!

ಭದ್ರಾವತಿ ವಾತವರಣ

 

ಶಿವಮೊಗ್ಗ ಜಿಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಭದ್ರಾವತಿ ಕ್ಷೇತ್ರ..ಅತ್ಯಂತ ಭಿನ್ನವಾಗಿದೆ.ಇಲ್ಲಿ ಪಕ್ಷಕ್ಕಿಂತಲೂ  ವ್ಯಕ್ತಿಗೆ ಹೆಚ್ಚಿನ ಮಾನ್ಯತೆ ನೀಡಿದ್ದಾರೆ ಕ್ಷೇತ್ರದ ಮತದಾರರು.ದಶಕಗಳಿಂದಲೂ ರಾಜಕೀಯ ಎದುರಾಳಿಗಳಾಗಿ  ಇದ್ದಾರೆ..

 

ಕಾಂಗ್ರೇಸ್ ನ ಹಾಲಿ ಶಾಸಕ ಬಿ.ಕೆ ಸಂಗಮೇಶ್ ಮತ್ತು ಜೆಡಿಎಸ್ ಮಾಜಿ ಶಾಸಕ ಎಂ.ಜೆ ಅಪ್ಪಾಜಿಗೌಡ.ಕ್ಷೇತ್ರವನ್ನು ಇವರಿಬ್ಬರೂ ದಶಕಗಳಿಂದಲೂ ರಾಜಕಾರಣವನ್ನು ತಮ್ಮ ಮೂಗಿನ ನೇರಕ್ಕೆ ನಿಯಂತ್ರಿಸುತ್ತಾ ಬಂದಿದ್ದಾರೆ.

 

ಶಿವಮೊಗ್ಗ ಜಿಲ್ಲೆ ಬಿಜೆಪಿ ಶಕ್ತಿಕೇಂದ್ರವಾಗಿದ್ದರೂ,ಭದ್ರಾವತಿ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗಿಲ್ಲ.ಇದಕ್ಕೆ ಕಾರಣ ಮತ್ತದೆ ಅಪ್ಪಾಜಿ ಮತ್ತು ಸಂಗಮೇಶ್.  

 

ಈಗ ಅಪ್ಪಾಜಿ ಗೌಡರಿಲ್ಲ. ಕೊರೊನಾ ದಿಂದ ಸಾವನ್ನಪ್ಪಿದ ಅಪ್ಪಾಜಿ ಗೌಡರ ಸ್ಥಾನವನ್ನು  ಪತ್ನಿ ಶಾರದ ಅಪ್ಪಾಜಿ ತುಂಬಿದ್ದಾರೆ. ಅಪ್ಪಾಜಿಗೌಡರಿಲ್ಲದ ಮೊದಲ ಚುನಾವಣೆ ಭದ್ರಾವತಿ ಕ್ಷೇತ್ರದಲ್ಲಿ ನಡೆಯುತ್ತಿದೆ.

ಹಾಲಿ ಕಣದಲ್ಲಿರುವ ಸ್ಪರ್ಧಿಗಳು

ಮಾಜಿ ಶಾಸಕರ ತೋಟದ ಮನೆಗೆ ನುಗ್ಗಿ ಒಂದು ಕೆಜಿ ಚಿನ್ನ ದರೋಡೆ! ಬಂದೂಕು ತೋರಿಸಿ 15 ಜನರ ತಂಡದ ಕೃತ್ಯ!

ಎಷ್ಟು ಜನ ಕಣದಲ್ಲಿದ್ದಾರೆ

ಭದ್ರಾವತಿ-112 ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಕರ್ನಾಟಕ)ದ ಪಿ.ಇ.ಬಸವರಾಜಪ್ಪ, ಎಎಪಿ ಆನಂದ್, ಐಎನ್‍ಸಿ ಬಿ.ಕೆ.ಸಂಗಮೇಶ್ವರ್, ಜನತಾದಳ(ಸಂಯುಕ್ತ)ಶಶಿಕುಮಾರ್ ಬಿ.ಕೆ, ಜನತಾದಳ(ಎಸ್) ಶಾರದಾ ಅಪ್ಪಾಜಿ, ಬಿಜೆಪಿ ರುದ್ರೇಶ್ ಎಂ.ಜಿ, ಕರ್ನಾಟಕ ರಾಷ್ಟ್ರ ಸಮಿತಿಯ ಸುಮಿತ್ರಾ ಬಾಯಿ, ಪಕ್ಷೇತರ ಜಾನ್ ಬೆನ್ನಿ, ರಾಜಶೇಖರ್ ಎಸ್, ಎಸ್.ಕೆ.ಸುಧೀಂದ್ರ, ಶಶಿಕುಮಾರ್ ವೈ, ಮೋಹನ್ ಡಿ, ಬಿ.ಎನ್.ನಾಗರಾಜ್, ಅಹಮದ್ ಅಲಿ, ಕಣದಲ್ಲಿದ್ದಾರೆ.

2018 ರ ಚುನಾವಣೆಯಲ್ಲಿ ಏನಾಗಿತ್ತು

2018 ರ ಚುನಾವಣೆಯಲ್ಲಿ ಕಾಂಗ್ರೇಸ್ ನ ಬಿ.ಕೆ ಸಂಗಮೇಶ್ವರ ಅಪ್ಪಾಜಿಗೌಡರ ಎದುರು ಗೆಲುವನ್ನು ಕಂಡಿದ್ದರು. ಸಂಗಮೇಶ್ವರ 75722 ಮತಗಳನ್ನು ಪಡೆದರೆ ಜೆಡಿಎಸ್ ನ ಅಪ್ಪಾಜಿ ಗೌಡರು 64155 ಮತಗಳನ್ನು ಪಡೆದು ಪರಾಭವಗೊಂಡಿದ್ದರು.

 

ಯಾರಿಗೆ ಪ್ಲಸ್ ಯಾರಿಗೆ ಮೈನಸ್ 

ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನೇ ಮುಂದಿಟ್ಟುಕೊಂಡು ಬಿ.ಕೆ ಸಂಗಮೇಶ್ ಮತಯಾಚನೆ ಮಾಡುತ್ತಿದ್ದಾರೆ. ತಾವು ಮಾಡಿದ ಕಾರ್ಯಗಳ ಪುಸ್ತಕವನ್ನೇ ಮತದಾರರಿಗೆ ಹಂಚುತ್ತಿದ್ದಾರೆ. ತಾವು ಗೆದ್ದರೆ ಮಂತ್ರಿಯಾಗುತ್ತೇನೆ. ಭದ್ರಾವತಿ ಎಂಪಿಎಂ ಕಾರ್ಖಾನೆಯನ್ನು ಮತ್ತೆ ಪ್ರಾರಂಭಿಸುವುದಾಗಿ ಹೇಳುತ್ತಾ ಮತಬೇಟೆಗೆ ನಿಂತಿದ್ದಾರೆ. ಇದು ವರವಾಗಬಹುದು. ಇಲ್ಲ ಇವರ ಐದು ವರ್ಷಗಳ ಅಧಿಕಾರಲ್ಲಿನ ವಿರಸಗಳು ಮುಳುವಾಗಬಹುದು. 

 

ಇನ್ನು ಅಪ್ಪಾಜಿಗೌಡರ ಸಾವಿನ ಅನುಕಂಪದಲ್ಲಿಯೇ ಸೆರುಗು ಒಡ್ಡಿ ಮತ ಕೇಳುತ್ತಿರುವ ಶಾದರ ಅಪ್ಪಾಜಿಯವರಿಗೆ ಭದ್ರಾವತಿ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರು ಒಲವು ತೋರುತ್ತಿದ್ದಾರೆ. ಇದು ಶಾರದ ಅಪ್ಪಾಜಿಯವರಿಗೆ ವರವಾಗಬಹುದು ಅಥವಾ ಜನರ ಅನುಕಂಪ ಸಿಗದೇ ಹೋದರೆ  ಸೋಲಿಗೂ ಕಾರಣವಾಗಬಹುದು.



Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

 

Malenadutoday.com Social media