ಹಾಫ್ ಹೆಲ್ಮೆಟ್ ವಿರುದ್ಧದ ಅಭಿಯಾನದ ನಡುವೆ ಸಿಸಿ ಕ್ಯಾಮರಾದಲ್ಲಿ ದಾಖಲಾಯ್ತು ಹೆಲ್ಮೆಟ್ ಕಳ್ಳತನದ ದೃಶ್ಯ! ಶಿವಮೊಗ್ಗದಲ್ಲಿ ಇದೇನಿದು?

Helmet theft video captured on CCTV camera amid half helmet campaign! What is this in Shimoga?ಹಾಫ್ ಹೆಲ್ಮೆಟ್ ಅಭಿಯಾನದ ನಡುವೆ ಸಿಸಿ ಕ್ಯಾಮರಾದಲ್ಲಿ ದಾಖಲಾಯ್ತು ಹೆಲ್ಮೆಟ್ ಕಳ್ಳತನದ ದೃಶ್ಯ! ಶಿವಮೊಗ್ಗದಲ್ಲಿ ಇದೇನಿದು?

ಹಾಫ್ ಹೆಲ್ಮೆಟ್ ವಿರುದ್ಧದ ಅಭಿಯಾನದ ನಡುವೆ ಸಿಸಿ ಕ್ಯಾಮರಾದಲ್ಲಿ ದಾಖಲಾಯ್ತು ಹೆಲ್ಮೆಟ್ ಕಳ್ಳತನದ ದೃಶ್ಯ! ಶಿವಮೊಗ್ಗದಲ್ಲಿ ಇದೇನಿದು?

KARNATAKA NEWS/ ONLINE / Malenadu today/ Jul 30, 2023 SHIVAMOGGA NEWS

ಶಿವಮೊಗ್ಗ ಪೊಲೀಸರು ಹಾಫ್ ಹೆಲ್ಮೆಟ್​ ನ ವಿರುದ್ಧ ಕಾರ್ಯಾಚರಣೆ ನಡೆಸುತ್ತಲೇ ಕಾಕತಾಳೀಯ ಎಂಬಂತೆ ಶಿವಮೊಗ್ಗ ಸಿಟಿಯಲ್ಲಿ ಹೆಲ್ಮೆಟ್ ಕಳ್ಳತನದ ಬಗ್ಗೆಯು ವರದಿಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಿಸಿ ಕ್ಯಾಮರಾವೊಂದರಲ್ಲಿ ಹೆಲ್ಮೆಟ್ ಕಳ್ಳತನದ ಘಟನೆ ಸೆರೆಯಾಗಿದೆ. 

 

ಶಿವಮೊಗ್ಗದ ದುರ್ಗಿಗುಡಿಯ 2 ನೇ ಪ್ಯಾರಲಲ್​ ರಸ್ತೆಯಲ್ಲಿ ಸಿಗುವ ಆಸ್ಪತ್ರೆಯೊಂದರ ಮುಂಭಾಗದಲ್ಲಿ ನಡೆದ ಘಟನೆ ಇದಾಗಿದ್ದು, ಇಲ್ಲಿ ಪಾರ್ಕ್​ ಮಾಡಿದ್ದ ಬೈಕ್​ ಸವಾರರೊಬ್ಬರ ಹೆಲ್ಮೆಟ್​ನ್ನ ಇನ್ನೊಬ್ಬ ಬೈಕ್ ಸವಾರ ಕದ್ದೊಯ್ದಿದ್ದಾನೆ. ಹೆಲ್ಮೆಟ್​ಗೆ ಕೈ ಹಾಕಿ ಹಿಡಿದ ಬೈಕ್​ ಸವಾರ , ಮಿರರ್​​ನಲ್ಲಿ ಮುಖ ನೋಡಿದಂತೆ ಮಾಡಿ, ತನ್ನ ಬೈಕ್​ ಹತ್ತಿಕೊಂಡು ಹೋಗಿ ಪರಾರಿಯಾಗಿದ್ಧಾನೆ.  


ಅರಶಿನಗುಂಡಿ ಜಲಪಾತದಲ್ಲಿ ಬಿದ್ದಿದ್ದ ಭದ್ರಾವತಿ ಶರತ್​ರ ಮೃತದೇಹ ಪತ್ತೆ!

ಕಳೆದ ಆರು ದಿನಗಳಿಂದ ಮಳೆಯ ನಡುವೆ ಕೊಲ್ಲೂರಿನ ಅರಶಿನ ಗುಂಡಿ ಫಾಲ್ಸ್ ನಲ್ಲಿ ಭದ್ರಾವತಿ ನಿವಾಸಿ ಶರತ್​ ಗಾಗಿ ನಡೆಯುತ್ತಿದ್ದ ಹುಡುಕಾಟ ತಾರ್ಕಿಕ ಅಂತ್ಯ ಕಂಡಿದೆ. ಇವತ್ತು ಮಳೆ ಕಡಿಮೆಯಾಗಿದ್ದರ ಹಿನ್ನೆಲೆಯಲ್ಲಿ ಜಲಪಾತದಲ್ಲಿ ನೀರಿನ ಹರಿವು, ರಭಸ ಎರಡು ಸಹ ಕಡಿಮೆಯಾಗಿತ್ತು. ಈ ಮಧ್ಯೆ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡಕ್ಕೆ ಇವತ್ತು ಫಾಲ್ಸ್​ನಿಂದ 200 ಮೀಟರ್ ದೂರದಲ್ಲಿ  ಶರತ್​ ರವರ ಮೃತದೇಹ ಪತ್ತೆಯಾಗಿದೆ. 

ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತ ವೀಕ್ಷಣೆಗೆ ಬಂದಾಗ ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು, ಕೊಚ್ಚಿ ಹೋಗಿದ್ದರು ಅವರಿಗಾಗಿ ನಿರಂತರ ಹುಡುಕಾಟ ನಡೆದಿತ್ತು.  ಧಾರಾಕಾರ ಮಳೆ, ಧುಮ್ಮುಕ್ಕಿ ಹರಿಯುತ್ತಿದ್ದ ಜಲಪಾತದಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು, ಈಶ್ವರ್ ಮಲ್ಪೆ ಹಾಗೂ ಜ್ಯೋತಿರಾಜ್​ ತಂಡ ಸ್ಥಳದಲ್ಲಿ ಹುಡುಕಾಟ ನಡೆಸಿತ್ತು. ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಇಲಾಖೆ ರಕ್ಷಣಾ ಕಾರ್ಯಾಚರಣೆಯನ್ನ ಕೈಗೊಂಡಿತ್ತು. ಇವತ್ತು ಶರತ್​ರವರ ಮೃತದೇಹ ಪತ್ತೆಯಾಗಿದ್ದು, ಬಂಡೆಯ ಕೊರಕಲಿನ ನಡುವೆ ಮೃತದೇಹ ಸಿಕ್ಕಿಹಾಕಿಕೊಂಡಿರುವುದು ಕಾಣಿಸಿದೆ. 


ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಿಟ್​ ಆ್ಯಂಡ್​ ರನ್​ ಯುವಕ ಬಲಿ! ಏನಿದು ಘಟನೆ?

SHIVAMOGGA AIRPORT ಗೆ ಸಿಗಲಿದೆ ವಿಶೇಷ ಭದ್ರತೆ! ಗೋವಾ, ತಿರುಪತಿ, ಹೈದ್ರಾಬಾದ್​ಗೂ ಹಾರುತ್ತೆ ವಿಮಾನ! ಟಿಕೆಟ್ ದರದ ಬಗ್ಗೆ ಸಂಸದರು ಹೇಳಿದ್ದೇನು?

 

ಶಿವಮೊಗ್ಗ ಟಿವಿ ಟವರ್ ಗೆ ಎಫ್​ಎಂ ಟ್ರಾನ್ಸ್​ಮೀಟರ್ ಜೋಡಣೆ! ನಗರದಲ್ಲಿಯೇ ಕೇಳಲಿದೆ ಎಫ್​ಎಂ!? ಏನಂದ್ರು ಸಂಸದರು?

ಆರು ಚಿನ್ನದ ಪದಕದ ಜೊತೆಗೆ ರಾಜ್ಯದಲ್ಲಿಯೇ ಫಸ್ಟ್ RANK ಪಡೆದ ಶಿವಮೊಗ್ಗ ಯುವತಿ!

VIRAL TODAY / ಶಾಸಕರ ಬಾಯಿ ರುಚಿ ಮತ್ತು ಬೃಂದಾವನ್​ ಕ್ಯಾಂಟಿನ್​ ಮೆಣಸಿನ ಕಾಯಿ ಬೋಂಡಾ! ವೈರಲ್​ ಆಯ್ತು ಬೇಳೂರು ಹೇಳಿದ ಬಜ್ಜಿ ರೆಸಿಪಿ!

 

SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!

 ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ






 ​