ಆಯನೂರು ಸೇರ್ಪಡೆಗೆ ಆಕ್ರೋಶ! ಠೇವಣಿ ಕಳೆದುಕೊಂಡವರಿಗೆ ಧಮ್ಮು ತೋರಿಸುವಂತೆ ಸವಾಲ್!

Hc Yogesh slams Ayanur Manjunath for joining Congressಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಗೆ ಹೆಚ್​ಸಿ ಯೋಗೇಶ್ ಆಕ್ರೋಶ

ಆಯನೂರು ಸೇರ್ಪಡೆಗೆ ಆಕ್ರೋಶ!  ಠೇವಣಿ ಕಳೆದುಕೊಂಡವರಿಗೆ  ಧಮ್ಮು ತೋರಿಸುವಂತೆ ಸವಾಲ್!

KARNATAKA NEWS/ ONLINE / Malenadu today/ Aug 20, 2023 SHIVAMOGGA NEWS

ಕಾಂಗ್ರೆಸ್​ಗೆ ಜೆಡಿಎಸ್ ಮುಖಂಡ ಆಯನೂರು ಮಂಜುನಾಥ್​ ಬರುತ್ತಾರೆ ಎಂಬ ಸುದ್ದಿ ಕಾಂಗ್ರೆಸ್​ನಲ್ಲಿಯೇ ಕೋಲಾಹಲ ಸೃಷ್ಟಿಸ್ತಿದೆ. ಇದಕ್ಕೆ ಪೂರಕ ಎಂಬಂತೆ ಇವತ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ  ಹೆಚ್.ಸಿ ಯೋಗೇಶ್  ಚಳಿಗಾಲದಲ್ಲಿ ಬಿಜೆಪಿಯಲ್ಲಿದ್ದು, ಬೇಸಿಗೆಗಾಲದಲ್ಲಿ ಕಾಂಗ್ರೆಸ್ ಬಾಗಿಲು ತಟ್ಟಿ ,ಕಾಂಗ್ರೆಸ್ ಮುಚ್ಚಿದೆ ಅಂತ ಗೊತ್ತಾದ ಮೇಲೆ ಜೆಡಿಎಸ್ ಸೇರ್ಪಡೆಗೊಂಡವರು ಆಯನೂರು ಮಂಜುನಾಥ್​ರವರು, ಇದೀಗ ಮಳೆಗಾಲದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ಆಯನೂರು ಮಂಜುನಾಥ್ ಅವರು ಕಾಂಗ್ರೆಸ್ ಬಾಗಿಲು ತಟ್ಟಿರುವುದಕ್ಕೆ ನಮ್ಮ ಧಿಕ್ಕಾರ ಇದೆ ಎಂದಿದ್ಧಾರೆ. 

ಕಾಂಗ್ರೆಸ್ ಮುಖಂಡ ಬಳಿ ಹೋಗಿ ನಾನು ಕಾಂಗ್ರೆಸ್ ಗೆ ಸೇರುತ್ತೇನೆ ಎನ್ನುತ್ತಿದ್ದಾರೆ.  ಆಯನೂರು ಮಂಜುನಾಥ್​  2023ರ ವಿಧಾನ ಸಭಾ ಚುನಾವಣೆಯಲ್ಲಿ ಕೇವಲ 5% ಮತ ಮಾತ್ರ ಅವರು ತೆಗೆದುಕೊಂಡಿದ್ದರು.  ಕೇವಲ 8863 ಮತ ತೆಗೆದುಕೊಂಡು ಠೇವಣಿನೂ ಪಡೆದುಕೊಳ್ಳದ ವ್ಯಕ್ತಿ ಕಾಂಗ್ರೆಸ್ ಗೆ ಬರುತ್ತೇನೆ ಅಂದಿದ್ದಾರೆ.  ನಾನೇ ಕಾಂಗ್ರೆಸ್ ನ ಎಲ್ಲಾ ಮುಖಂಡರಿಗೆ ಪತ್ರ ಬರೆದಿದ್ದೇನೆ.  ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದ್ಧೇನೆ, 

ನಮ್ಮ ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡಿರುವ ವ್ಯಕ್ತಿ ಈಗ ಕಾಂಗ್ರೆಸ್ ಗೆ ಸೇರುತ್ತೇನೆ ಎನ್ನುತ್ತಿದ್ದಾರೆ.  ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿ ಅವರ ಮನೆ ಬಾಗಿಲು ತಟ್ಟುತ್ತಿದ್ದಿರಾ ನಿಮಗೆ ಧಮ್ ಇದ್ರೆ ನೀವಿರುವ ಪಕ್ಷದಲ್ಲೇ ನಿಮ್ಮ ಧಮ್ ತೋರ್ಸಿ ಎಂದು ಸವಾಲು ಹಾಕಿದ್ದಾರೆ.  ಅಧಿಕಾರದ ಆಸೆಗೆ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ.  ಯುವಕರಿಗೆ ನಿಮ್ಮ ಸಂದೇಶ ಏನು? ಪಕ್ಷದಿಂದ ಪಕ್ಷಕ್ಕೆ ಹಾರುವುದಾ ಎಂದು ಪ್ರಶ್ನಿಸಿದ್ದಾರೆ. 

ನೀವು ಗೆದ್ದಿರುವುದು ಪಧವೀಧರ ಕ್ಷೇತ್ರದಿಂದ ಆ ಯುವಕರಿಗೆ ನಿಮ್ಮ ಸಂದೇಶ ಏನು ಮರದಿಂದ ಮರಕ್ಕೆ ಹಾರುವುದು ಹೇಗೆ ಏನ್ನುವುದಾ ಎಂದು ಪ್ರಶ್ನಿಸಿದ ಯೋಗೇಶ್,  ಜೆಡಿಎಸ್ ಸೇರ್ಪಡೆ ವೇಳೆ ಅವರ ಜೊತೆಗೆ ಹೋದವರನ್ನ ಬಿಟ್ಟು ಈಗ ಒಬ್ಬರೇ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು. 

ಆಯನೂರು  ಮಂಜುನಾಥ್  ಹಾಗೂ ಈಶ್ವರಪ್ಪನವರ ನಡುವೆ ಗಲಾಟೆ ಯಾಕೇ ಅಂದ್ರೆ ಗುದ್ದಲಿ ಪೂಜೆಗೆ ಕರೆಯುತ್ತಿಲ್ಲ ಅಂತ ಅಷ್ಟೇ ಹೊರತು ಅಭಿವೃದ್ಧಿ ವಿಚಾರವಾಗಿ ಅಲ್ಲ. ಬಿಜೆಪಿ ಅವರನ್ನು ಹೊರತು ಪಡಿಸಿ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಗೆಲ್ಲಲ್ಲ ಎಂದಿದ್ದರು. ಈಗ ಕಾಂಗ್ರೆಸ್ ಬಂದ ತಕ್ಷಣ ನೀವು ಗೇಲ್ತೀರಾ ಎಂದು ಪ್ರಶ್ನಿಸಿದ ಯೋಗೇಶ್​ ಈಗಾಗಲೇ ನಮ್ಮ ಪಕ್ಷದ ಅಭ್ಯರ್ಥಿಗಳು ಕೆಪಿಸಿಸಿಗೆ ಪಧವೀದರರ ಕ್ಷೇತ್ರಕ್ಕೆ ಅಭ್ಯರ್ಥಿ ಬಯಸಿ ಅರ್ಜಿ ಹಾಕಿದ್ದಾರೆ. ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಗೆ ನಮ್ಮೆಲ್ಲರ ವಿರೋಧ ಇದೆ ಎಂದಿದ್ಧಾರೆ. 

ನಮ್ಮ ನಾಯಕರುಗಳು ಆಯನೂರು ಮಂಜುನಾಥ್ ಸೇರಿಸಿಕೊಳ್ಳುವ ಮುನ್ನ ಯೋಚನೆ ಮಾಡಲಿ. ಇವರ ಸೇರ್ಪಡೆಯಿಂದ ಲೋಕಸಭಾ ಚುನಾವಣೆಯಲ್ಲಿ ನಮಗೇನು ಪ್ರಯೋಜನ ಆಗಲ್ಲ.  ನಮ್ಮ ನಾಯಕರ ಬಗ್ಗೆ ಏಕವಚನದಲ್ಲೇ ಮಾತನಾಡಿರುವ ವಿಡಿಯೋ ಕ್ಲಿಪ್ ಗಳನ್ನು ನಮ್ಮ ಹೈಕಮಾಂಡ್ ಗೆ ಕಳಿಸಿಕೊಡಲಾಗಿದೆ. ಪಕ್ಷದಲ್ಲಿ ದುಡಿದವರಿಗೆ ಪಕ್ಷ ಅವಕಾಶ ನೀಡಬೇಕು . ಇರೋ ಪಕ್ಷದಲ್ಲೇ ಇದ್ದು ಆಯನೂರು ಮಂಜುನಾಥ್ ಆ ಪಕ್ಷ ಉದ್ದಾರ ಮಾಡಬೇಕು. ನಾವೇ ಪಕ್ಷವನ್ನು ಕಟ್ಟುತ್ತೇವೆ ನಮ್ಮ ಮೇಲೆ ಹೈಕಮಾಂಡ್ ನಂಬಿಕೆ ಇಡಬೇಕು. ನೀವು ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ನಾಯಕರನ್ನ ಮನವಿ ಮಾಡಿದ್ದಾರೆ.  

ಬಿಕ್ಕೋನಹಳ್ಳಿಯಲ್ಲಿ ಸಿಕ್ಕಿದ್ದು ನರಭಕ್ಷಕ ಚಿರತೆ ಎಂದು ಗೊತ್ತಾಗಿದ್ದು ಹೇಗೆ? MAN EATER ಸಿಕ್ಕಿಬಿದ್ದಿದ್ದೇಗೆ?

ಕಳ್ಳತನ ಕೇಸ್​ ಬೆನ್ನಲ್ಲೆ ಚಂದ್ರಗುತ್ತಿಗೆ ಎಸ್​ಪಿ ಭೇಟಿ! 12 ಸೂಚನೆ ನೀಡಿದ ಮಿಥುನ್ ಕುಮಾರ್!

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು