ಬಂಡಾಯದ ಭಾವುಟ ಕೆಳಗಿಳಿಸಿ ಕಾಂಗ್ರೆಸ್​ಗೆ ವಾಪಸ್​ ಆಗ್ತಾರಾ ನಾಗರಾಜ್ ಗೌಡ?

Will Nagaraj Gowda, who contested from Shikaripura, return to the Congress party?ಶಿಕಾರಿಪುರದಲ್ಲಿ ಸ್ಪರ್ದಿಸಿದ್ದ ನಾಗರಾಜ್​ ಗೌಡ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗುತ್ತಾರಾ?

ಬಂಡಾಯದ  ಭಾವುಟ ಕೆಳಗಿಳಿಸಿ  ಕಾಂಗ್ರೆಸ್​ಗೆ ವಾಪಸ್​ ಆಗ್ತಾರಾ ನಾಗರಾಜ್ ಗೌಡ?

 KARNATAKA NEWS/ ONLINE / Malenadu today/ Aug 20, 2023 SHIVAMOGGA NEWS

ಅಧಿಕಾರದಲ್ಲಿರುವ ಕಾಂಗ್ರೆಸ್​ ಪಕ್ಷಕ್ಕೆ ವಾಪಸ್​ ಆಗಲು ಪಕ್ಷ ಬಿಟ್ಟವರು ಹಾಗೂ ಅನ್ಯಪಕ್ಷದವರು ಸಿದ್ದರಾಗುತ್ತಿರುವ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಚರ್ಚೆಯುಲ್ಲಿ ಶಿವಮೊಗ್ಗ ಜಿಲ್ಲೆಯು ಹೊರತಾಗಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯ ಮಾಜಿ ಎಂಎಲ್‌ಸಿ, ಹಾಲಿ ಜೆಡಿಎಸ್‌ನಲ್ಲಿರುವ ಆಯನೂರು ಮಂಜುನಾಥ್ ಹಾಗೂ ಶಿಕಾರಿಪುರದಲ್ಲಿ ಅಭ್ಯರ್ಥಿಯಾಗಿದ್ದ ನಾಗರಾಜ್‌ ಗೌಡ  ಕಾಂಗ್ರೆಸ್​ ಸೇರುವ ಸಾಧ್ಯತೆ ದಟ್ಟವಾಗಿದೆ. ಇನ್ನೊಂದು ವಾರದಲ್ಲಿ ಈ ಬಗ್ಗೆ ಸ್ಪಷ್ಟತೆ ಲಭ್ಯವಾಗಲಿದೆ ಎನ್ನಲಾಗಿದ್ದು, ನಾಗರಾಜ್​ ಗೌಡರ ಸೇರ್ಪಡೆ ಕಾಂಗ್ರೆಸ್​ಗೆ ಮತ್ತಷ್ಟು ಬಲ ನೀಡಲಿದೆ ಎನ್ನಲಾಗುತ್ತಿದೆ. ಇನ್ನೂ ಆಯನೂರು ಮಂಜುನಾಥ್ ಸೇರ್ಪಡೆಗೆ ಪಕ್ಷದಲ್ಲಿಯೇ ವಿರೋಧವೂ ಇದ್ದು, ಕೆಪಿಸಿಸಿ ಹೈಕಮಾಂಡ್ ಸನ್ನಿವೇಶವನ್ನು ಹೇಗೆ ನಿಬಾಯಿಸುತ್ತದೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.  

 

ಚಕ್ರಾ ಹಿನ್ನೀರಿಗೆ ಉರುಳಿ ಬಿದ್ದ ಕಂಟೇನರ್ ಲಾರಿ! ನಡೆದಿದ್ದೇನು?

 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ಬಳಿಯಲ್ಲಿ ಲಾರಿಯೊಂದು ಹೊಳೆಗೆ ಉರುಳಿದ ಘಟನೆ ಸಂಭವಿಸಿದೆ. ಕುಂದಾಪುರ ಕಡೆಯಿಂದ ಘಾಟಿ ಹತ್ತಿ ಬಂದಿದ್ದ ಕಂಟೇನರ್​ ಲಾರಿಯು ಹುಲಿಕಲ್​ ಸಮೀಪದ ಹೊಳೆಗೆ ಉರುಳಿದಿದೆ. ಚಕ್ರಾ ಡ್ಯಾಂನ ಹಿನ್ನೀರಿಗೆ ಲಾರಿಗೆ ಉರುಳಿದ್ದು, ಘಟನೆಯಲ್ಲಿ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ನಗರ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ. 

 


ಅಮೆರಿಕಾದಲ್ಲಿ ದಾವಣಗೆರೆ ಮೂಲದ ದಂಪತಿ ಮಗು ನಿಗೂಢ ಸಾವು!

 

ದಾವಣಗೆರೆ ಮೂಲದ ಮೂವರು ಅಮೇರಿಕಾದಲ್ಲಿ ಅನುಮಾನಾಸ್ಪದವಾಗಿ ಸಾವು ಕಂಡಿರುವ ಘಟನೆ ಶನಿವಾರ ನಡೆದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹಾಲೆಕಲ್ಲು ಗ್ರಾಮದ ಮೂಲದವರಾದ ಒಂದೇ ಕುಟುಂಬದ ಯೋಗೇಶ್ ಹೊನ್ನಾಳ(37), ಪ್ರತಿಭಾ ಹೊನ್ನಾಳ(35), ಯಶ್ ಹೊನ್ನಾಳ(6) ಅನುಮಾನಸ್ಪದವಾಗಿ ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್‌ನಲ್ಲಿ ಸಾವು ಕಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

ಕಳೆದ 9 ವರ್ಷಗಳ ಹಿಂದೆ ಮದುವೆಯಾಗಿದ್ದ ಯೋಗೇಶ್ ಮತ್ತು ಪ್ರತಿಭಾ ಮದುವೆ ನಂತರ ಅಮೇರಿಕಾದಲ್ಲಿ ಮಗುವಿನೊಂದಿಗೆ ವಾಸವಿದ್ದರು. ಮೃತ, ಪತಿ ಪತ್ನಿ ಇಬ್ಬರೂ ವೃತ್ತಿಯಲ್ಲಿ ಎಂಜಿನಿ ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಮೂವರ ಸಾವು ಹಲವು ಅನುಮಾನಗಳು ಹುಟ್ಟಿ ಹಾಕಿದ್ದು, ಸಾವಿನ ನಿಖರ ಕಾರಣ ತಿಳಿಸುವಂತೆ ಹಾಗೂ ಮೃತ ದೇಹಗಳನ್ನು ಸ್ವದೇಶಕ್ಕೆ ತರಿಸಿಕೊಡುವಂತೆ ದಾವಣಗೆರೆಯಲ್ಲಿ ವಾಸವಿರುವ ಯೋಗೇಶ್ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. 

 


ಬಿಕ್ಕೋನಹಳ್ಳಿಯಲ್ಲಿ ಸಿಕ್ಕಿದ್ದು ನರಭಕ್ಷಕ ಚಿರತೆ ಎಂದು ಗೊತ್ತಾಗಿದ್ದು ಹೇಗೆ? MAN EATER ಸಿಕ್ಕಿಬಿದ್ದಿದ್ದೇಗೆ?

ಕಳ್ಳತನ ಕೇಸ್​ ಬೆನ್ನಲ್ಲೆ ಚಂದ್ರಗುತ್ತಿಗೆ ಎಸ್​ಪಿ ಭೇಟಿ! 12 ಸೂಚನೆ ನೀಡಿದ ಮಿಥುನ್ ಕುಮಾರ್!

 

ಇನ್ನಷ್ಟು ಸುದ್ದಿಗಳು

 


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು