ನಾಲ್ಕನೇ ಸಲ | ಸಿಗುತ್ತಾ ಆಶೀರ್ವಾದ ?| ಬಿ.ವೈ. ರಾಘವೇಂದ್ರ ಪ್ಲಸ್‌ ಏನು? ಮೈನಸ್‌ ಏನು?

Getting blessed for the fourth time?| What is Raghavendra Plus? What is the minus?Shimoga Lok Sabha Constituency, Shimoga Lok Sabha Election, Shimoga Malenadu Today News, Shimoga Election News, Shimoga MP BY Raghavendra

ನಾಲ್ಕನೇ ಸಲ | ಸಿಗುತ್ತಾ ಆಶೀರ್ವಾದ ?|  ಬಿ.ವೈ. ರಾಘವೇಂದ್ರ ಪ್ಲಸ್‌ ಏನು? ಮೈನಸ್‌ ಏನು?
Shimoga Lok Sabha Constituency, Shimoga Lok Sabha Election, Shimoga Malenadu Today News, Shimoga Election News, Shimoga MP BY Raghavendra

SHIVAMOGGA | MALENADUTODAY NEWS | May 4, 2024  

ಶಿವಮೊಗ್ಗ ಲೋಕಸಭಾ ಚುನಾವಣೆ ಹಿಂದೂತ್ವ, ಅಭಿವೃದ್ಧಿ  ಹಾಗೂ ಗ್ಯಾರಂಟಿ ವಿಚಾರಗಳ ಚರ್ಚೆಯ ವೇದಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ರಾಹುಲ್‌ ಗಾಂಧಿಯವರಿಂದ ಶುರುವಾಗಿ ದೊಡ್ಡದೊಡ್ಡ ನಾಯಕರೆಲ್ಲಾ ಶಿವಮೊಗ್ಗ ವಿಮಾನ ನಿಲ್ದಾಣದಕ್ಕೆ ಬಂದಿಳಿದು ಪ್ರಚಾರ ನಡೆಸ್ತಿದ್ದಾರೆ. ಅವರ ಪ್ರಚಾರ ಭರಾಟೆ ಶಿವಮೊಗ್ಗ ರಾಜ್ಯ ರಾಜಕಾರಣದ ಪವರ್‌ ಸೆಂಟರ್‌ ಏಕೆ ಎನ್ನುವುದನ್ನ ಸಾರಿ ಹೇಳುತ್ತಿದೆ. 

 

ನಾಲ್ಕನೇ ಬಾರಿಗೆ?

 

ಇದರ ನಡುವೆ ಮತ್ತೊಮ್ಮೆ ವಿರಾಟ ಗೆಲುವನ್ನ ಬಯಸಿ ಕಣಕ್ಕಿಳಿದಿರುವ ಬಿವೈ ರಾಘವೇಂದ್ರರಿಗೆ ಈ ಸಲ ನಿರೀಕ್ಷೆಗಳು ಬೇರೆ ಬೇರೆ ಅಭಿಪ್ರಾಯವನ್ನು ಮೂಡಿಸುತ್ತಿದೆ. ಬಿಎಸ್‌ ಯಡಿಯೂರಪ್ಪನವರ ನೆರಳಿನಿಂದ ಹೊರಬಂದಿರುವ ಬಿವೈ ರಾಘವೇಂದ್ರ ಪಕ್ಕಾ ರಾಜಕಾರಣ ಪಟುವಾಗಿ ಕಾಣಿಸಿಕೊಂಡಿದ್ದಾರೆ. ತಂತ್ರಗಾರಿಕೆಯಲ್ಲಿ ತಮ್ಮನ ಗೆಲುವಿಗೂ ಶ್ರಮಿಸಿದ್ದ ಬಿವೈಆರ್‌ ತಮ್ಮ ಚುನಾವಣೆಯನ್ನ ಸೀರಿಯಸ್‌ ಆಗಿ ತೆಗೆದುಕೊಂಡಿದ್ದಾರೆ. ನಾಲ್ಕನೆ ಭಾರೀಗೆ ಸ್ಪರ್ಧಿಸುತ್ತಿರುವ ಬಿವೈ ರಾಘವೇಂದ್ರ ಕೇಂದ್ರ ಸಚಿವರಾಗುತ್ತಾರೆ ಎಂಬ ಮಾತುಗಳು ಬಿಜೆಪಿ ಮುಖಂಡರ ಬಾಯಲ್ಲಿ ಹೊರಬಂದಿದೆ. ಅಭಿವೃದ್ಧಿ ಪಟ್ಟಿಯನ್ನು, ಪ್ರತಿ ಪ್ರೆಸ್‌ಮೀಟ್‌ನಲ್ಲಿಯು ತೋರಿಸುವ ಹಾಲಿ ಸಂಸದರು ತಮ್ಮ ಕೆಲಸವನ್ನು ಮತದಾರನ ಮನ ಮುಟ್ಟಿಸುವ ಕೆಲಸದಲ್ಲಿಯು ಯಶಸ್ವಿಯಾಗಿದ್ದಾರೆ. 

ಆದರೂ  

ಈ ಸಲ ಸನ್ನಿವೇಶ ಕೊಂಚ ವಿಭಿನ್ನವಾಗಿದೆ.ಹೇಳಿಕೇಳಿ ಕೆಎಸ್‌ ಈಶ್ವರಪ್ಪನವರ ಆಶೀರ್ವಾದ ಈ ಸಲ ಬಿವೈ ರಾಘವೇಂದ್ರರಿಗೆ ಸಿಕ್ಕಿಲ್ಲ. ಬಿಜೆಪಿಯ ಹಿಂದೂತ್ವದ ಕೈ ಚೀಲವನ್ನೇ ಈಶ್ವರಪ್ಪನವರು ಕಿತ್ತುಕೊಳ್ಳಲು ಮುಂದಾಗಿ ಕಣದಲ್ಲಿ ತಮ್ಮ ಸ್ಪರ್ಧೆಯನ್ನ ತೀವ್ರಗೊಳಿಸಿದ್ದಾರೆ. ಇನ್ನೊಂದೆಡೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಹಾಗೂ ಅದರಲ್ಲಿನ ಸಚಿವ ಮಧು ಬಂಗಾರಪ್ಪರವರ ನೆರವಿನಡಿಯಲ್ಲಿ ಗೀತಾ ಶಿವರಾಜಕುಮಾರ್‌ ಮನೆಮಗಳು ನಾನೆಂದು ಮತ ಕೇಳುತ್ತಿದ್ದಾರೆ. 

 

ಲೆಕ್ಕಾಚಾರ ಪ್ಲಸ್‌ ಅಥವಾ ಮೈನಸ್

 

ಜಾತಿ ಮತದ ಲೆಕ್ಕಾಚಾರದಲ್ಲಿ ಕೂಡಿ ಕಳೆವ ಆಟ ಅದಾಗಲೇ ಶುರುವಾಗಿದ್ದು ಬಿವೈಆರ್‌ ಭವಿಷ್ಯ ಎಲೆಕ್ಷನ್‌ನಲ್ಲಿ ನಿಕ್ಕಿಗೊಳ್ಳಲೀದೆ. ಈ ನಿಟ್ಟಿನಲ್ಲಿ ಅವರ ಪ್ಲಸ್‌ ಹಾಗೂ ಮೈನಸ್‌ ಪಾಯಿಂಟ್‌ಗಳನ್ನು ಗಮನಿಸುವುದಾದರೆ, ಸಂಸದರಾಗಿ ಮಾಡಿರುವ ಅಭಿವೃದ್ಧಿ ಕಾರ್ಯ, ಯಡಿಯೂರಪ್ಪನವರ ಶಕ್ತಿ ರಾಘವೇಂದ್ರರವರ ವೈಯಕ್ತಿಕ ಬಲ. ಇನ್ನೂ ಬಿಜೆಪಿ ಸಂಘಟನಾತ್ಮಕ ಕಾರ್ಯ ಪಕ್ಷದ ದೊಡ್ಡ ಶಕ್ತಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಬಿವೈ ವಿಜಯೇಂದ್ರರಿಗೆ ಶಿವಮೊಗ್ಗ ಕ್ಷೇತ್ರದ ಗೆಲುವು ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಇನ್ನೂ  ಜೆಡಿಎಸ್‌ನ ಬೆಂಬಲವೂ ರಾಘವೇಂದ್ರರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಜೊತೆಗೆ ನಾಲ್ಕು  ಬಿಜೆಪಿ ಹಾಗೂ ಓರ್ವ ಜೆಡಿಎಸ್‌ ಶಾಸಕರ ಬಲ ಕೂಡ ರಾಘವೇಂದ್ರರಿಗೆ ಬೆನಿಫಿಟ್‌ ಆಗಬಹುದು. 

 

ಇನ್ನೊಂದೆಡೆ ಕೆಎಸ್‌ ಈಶ್ವರಪ್ಪನವರ ಬಂಡಾಯ ಬಿವೈಆರ್‌ ನಿರೀಕ್ಷಿಸದ ಸೆಟ್‌ಬ್ಯಾಕ್‌.  ನೇರಾನೇರ ಫೈಟ್‌ ಎಂಬತ್ತಿದ್ದ ಪಿಚ್‌ನಲ್ಲಿ ತ್ರಿಕೋನ ಸ್ಪರ್ಧೆಯ ಅಚ್ಚರಿ ಮೂಡಿಸಿದ್ದಾರೆ ಈಶ್ವರಪ್ಪ. ಇನ್ನೊಂದೆಡೆ ಕಾಂಗ್ರೆಸ್‌ಗೆ ಸಚಿವರು ಹಾಗೂ ಸರ್ಕಾರದ ಬಲವಿದೆ. ಪಕ್ಷದ ಆಂತರಿಕ ಅಸಮಾಧಾನಗಳು ಒಂದಷ್ಟು ಕೈಗೊಡುವ ಸಾಧ್ಯತೆ ಇದೆ. ಕುಟುಂಬ ರಾಜಕಾರಣದ ಆಪಾದನೆ ಸದ್ದು ಮಾಡಬಹುದು.