ಕೊಲ್ಲೂರಲ್ಲಿ ಹರಕೆ ಸಲ್ಲಿಸಿದರೂ ಕೆಎಸ್​ ಈಶ್ವರಪ್ಪರ ಪುತ್ರ ಕೆಇ ಕಾಂತೇಶ್​ಗೆ ಟಿಕೆಟ್ ಮಿಸ್​ ! ರಾಜ್ಯದ 20 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಅನೌನ್ಸ್​ ! ಅಭ್ಯರ್ಥಿಗಳ ಆಯ್ಕೆಯಲ್ಲಿಯೇ ಇದೆ ಅಚ್ಚರಿ

KS Eshwarappa's son KE Kanthesh denied ticket BJP announces candidates for 20 assembly seats in Karnataka

ಕೊಲ್ಲೂರಲ್ಲಿ ಹರಕೆ ಸಲ್ಲಿಸಿದರೂ  ಕೆಎಸ್​ ಈಶ್ವರಪ್ಪರ ಪುತ್ರ ಕೆಇ ಕಾಂತೇಶ್​ಗೆ ಟಿಕೆಟ್ ಮಿಸ್​ ! ರಾಜ್ಯದ 20 ಕ್ಷೇತ್ರಗಳಿಗೆ  ಬಿಜೆಪಿ ಅಭ್ಯರ್ಥಿಗಳ ಅನೌನ್ಸ್​ ! ಅಭ್ಯರ್ಥಿಗಳ ಆಯ್ಕೆಯಲ್ಲಿಯೇ ಇದೆ ಅಚ್ಚರಿ
KS Eshwarappa son KE Kanthesh

shivamogga Mar 13, 2024 ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪ ರವರ ಪುತ್ರ ಕೆಇ ಕಾಂತೇಶ್​ಗೆ ಮಿಸ್  ಆಗಿದೆ . ಕೆಲವೇ ಕ್ಷಣಗಳ ಹಿಂದೆ ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು ಅಚ್ಚರಿ ಮೂಡಿಸಿದ್ದ ಕ್ಷೇತ್ರ ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಟಿಕೆಟ್ ಲಭ್ಯವಾಗಿದೆ. ಶಿವಮೊಗ್ಗದಲ್ಲಿ ನಿರೀಕ್ಷೆಯಂತೆ ಸಂಸದ ಬಿ.ವೈ.ರಾಘವೇಂದ್ರರವರು ಟಿಕೆಟ್ ಪಡೆದುಕೊಂಡಿದ್ದಾರೆ.ಟಿಕೆಟ್ ಪಟ್ಟಿಯಲ್ಲಿ ಕರ್ನಾಟಕದ ವಿವಿಧ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೋಡುವುದಾದರೆ, 

ಬೀದ‌ರ್: ಭಗವಂತ ಖೂಬಾ ,ಕೊಪ್ಪಳ: ಬಸವರಾಜ ಕ್ಯಾವತ್ತೂರ ,ಬಳ್ಳಾರಿ: ಶ್ರೀರಾಮುಲುಚಿಕ್ಕೋಡಿ: ಅಣ್ಣಾ ಸಾಹೇಬ್ ಶಂಕರ್ ಜೊಲ್ಲೆ,  ಬಾಗಲಕೋಟೆ: ಪಿ.ಸಿ ಗದ್ದಿಗೌಡರ , ಬಿಜಾಪುರ: ರಮೇಶ ಜಿಗಜಿಣಗಿ, ಕಲಬುರಗಿ: ಡಾ. ಉಮೇಶ್ ಜಾಧವ್,  ಹಾವೇರಿ: ಬಸವರಾಜ ಬೊಮ್ಮಾಯಿ , ಧಾರವಾಡ: ಪ್ರಹ್ಲಾದ್ ಜೋಶಿ, ದಾವಣಗೆರೆ: ಗಾಯತ್ರಿ ಸಿದ್ದೇಶ್ವರ, ಶಿವಮೊಗ್ಗ: ಬಿ.ವೈ ರಾಘವೇಂದ್ರ, ಉಡುಪಿ-ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ ,ದಕ್ಷಿಣ ಕನ್ನಡ: ಕ್ಯಾ. ಬ್ರಿಜೇಶ್ ಚೌಟ , ತುಮಕೂರು: ವಿ. ಸೋಮಣ್ಣ ,ಮೈಸೂರು: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್,  ಚಾಮರಾಜನಗರ: ಎಸ್. ಬಾಲರಾಜ್ ,ಬೆಂಗಳೂರು ಗ್ರಾಮಾಂತರ: ಡಾ. ಸಿ.ಎನ್ ಮಂಜುನಾಥ್, ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರ: ಪಿ.ಸಿ ಮೋಹನ್, ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯರಿಗೆ ಟಿಕೆಟ್ ಲಭ್ಯವಾಗಿದೆ. 

ಈ ಮೊದಲು 195 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದ ಬಿಜೆಪಿ ಎರಡನೇ ಪಟ್ಟಿಯಲ್ಲಿ 72 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದೆ. ಈ ಪೈಕಿ ಕರ್ನಾಟಕ 20 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದ್ದು, ಒಟ್ಟಾರೆ 276 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯನ್ನು ಬಿಜೆಪಿ ಬಾಕಿ ಉಳಿಸಿಕೊಂಡಿದೆ.