ಹಾಸನದ ಸಕಲೇಶಪುರದ ಅರಣ್ಯದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನಲ್ಲಿ ತೀರ್ಥಹಳ್ಳಿಯ ಸುಂದರೇಶ್ ಸಾವು! ಇನ್ನೊಬ್ಬರ ಸ್ಥಿತಿ ಗಂಭೀರ

Forest guard Sundaresh, a resident of Thirthahalli, was killed in a forest fire that broke out in sakleshpur forest in Hassan. The condition of another is critical

ಹಾಸನದ ಸಕಲೇಶಪುರದ ಅರಣ್ಯದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನಲ್ಲಿ ತೀರ್ಥಹಳ್ಳಿಯ ಸುಂದರೇಶ್ ಸಾವು! ಇನ್ನೊಬ್ಬರ ಸ್ಥಿತಿ ಗಂಭೀರ
ಹಾಸನದ ಸಕಲೇಶಪುರದ ಅರಣ್ಯದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನಲ್ಲಿ ತೀರ್ಥಹಳ್ಳಿಯ ಸುಂದರೇಶ್ ಸಾವು! ಇನ್ನೊಬ್ಬರ ಸ್ಥಿತಿ ಗಂಭೀರ

MALENADUTODAY.COM | SHIVAMOGGA | HASSAN NEWS

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಘಟ್ಟದಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚಿನಲ್ಲಿ ಸಿಲುಕಿ ಸುಟ್ಟಗಾಯಗಳಿಂದ ಬಳಲುತ್ತಿದ್ದ ಫಾರೆಸ್ಟ್ ಗಾರ್ಡ್​ ಸಾವನ್ನಪ್ಪಿದ್ದಾರೆ. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.  ಫೆಬ್ರವರಿ 16 ರ ಗುರುವಾರ ಮಧ್ಯಾಹ್ನ  ಕಾಡುಮನೆ ಎಸ್ಟೇಟ್ ಸಮೀಪದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಈ ವೇಳೆ ಬೆಂಕಿ ನಂದಿಸಲು ಡಿಆರ್ ಎಫ್ ಓ ಮಂಜುನಾಥ್ ನೇತೃತ್ವದಲ್ಲಿ ಆರು ಜನ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿದ್ದರು. ಆದರೆ ಈ ನಡುವೆ ಕಾಡ್ಗಿಚ್ಚು ಅರಣ್ಯ ಸಿಬ್ಣಂದಿ ನಿಂತಿದ್ದ ಜಾಗವನ್ನೇ ಆವರಿಸಿ, ಜ್ವಾಲೆ ಹೆಚ್ಚಿಸಿತ್ತು. ಈ ವೇಳೇ  ಡಿಆರ್ ಎಫ್ ಓ ಮಂಜುನಾಥ್​, ಫಾರೆಸ್ಟ್ ಗಾರ್ಡ್ ಸುಂದರೇಶ್ ವಾಚರ್ ಗಳಾದ ತುಂಗೇಶ್ ಮತ್ತು ಮಹೇಶ್ ಗೆ ಗಾಯಗಳಾಗಿದ್ದವು. 

ಬಹುತೇಕ ಹುಲ್ಲುಗಾವಲಿನಂತಿದ್ದ ಪ್ರದೇಶದಲ್ಲಿ ಹುಲ್ಲುಸಹ ಒಣಗಿದ್ದರಿಂದ ಗಾಳಿ ಬೀಸಿದ ದಿಕ್ಕಿ ಬೆಂಕಿ ಹರಡುತ್ತಿತ್ತು. ಕೌಂಟರ್​ ಫೈರ್​ ಕೂಡಲು ಸಾಧ್ಯವಾಗದಂತಹ ಸ್ಥಳದಲ್ಲಿ ಅರಣ್ಯ ಸಿಬ್ಬಂದಿ ಕೈಗೆ ಸಿಕ್ಕ ಸೊಪ್ಪಿನ ಮೂಲಕ ಬೆಂಕಿ ನಂದಿಸುತ್ತಿದ್ದರು. ಆದರೆ ಗಾಳಿಯ ಆರ್ಭಟಕ್ಕೆ ಬೆಂಕಿಯು ಇವರುಗಳ ನಿಂತಿದ್ದ ಪ್ರದೇಶವನ್ನು ವೇಗವಾಗಿ ಸುತ್ತುವರಿದಿದೆ. ಅಂದಾಜಿಗೆ ಸಿಗುವ ಮುನ್ನವೇ  ಅನಾಹುತ ಸಂಭವಿಸಿತ್ತು. 

ಇನ್ನೂ ಘಟನೆಯಲ್ಲಿ ಸುಂದರೇಶ್ ಮತ್ತು ಮಂಜುನಾಥ್​ರವರಿಗೆ ಹೆಚ್ಚು ಸುಟ್ಟುಗಾಯಗಳಾಗಿದ್ದವು. ಸಮರ್ಪಕ ರಸ್ತೆಯು ಇಲ್ಲದ ಹಿನ್ನೆಲೆಯಲ್ಲಿ ಗಾಯಾಳುಗಳನ್ನು ಸ್ಥಳೀಯರು ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದರು. ಹಾಸನದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿಗೆ ಇಬ್ಬರನ್ನು ಶಿಫ್ಟ್ ಮಾಡಲಾಗಿತ್ತು. ಇನ್ನೂ ನಿನ್ನೆ ರಾತ್ರಿ ಸುಂದರೇಶ್ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಬಿಎಸ್​ವೈ ಹುಟ್ಟುಹಬ್ಬಕ್ಕೆ, ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದಿಳಿಯಲಿದ್ಧಾರೆ ಪ್ರಧಾನಿ ಮೋದಿ ! ಅದ್ದೂರಿ ಜನ್ಮದಿನ ಸಂಭ್ರಮಕ್ಕೆ ಬಿಜೆಪಿ ಸಿದ್ಧತೆ

 ಸುಂದರೇಶ್​ರವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾಗಿದ್ದು,  ಹಾಸನದಲ್ಲಿ ಅರಣ್ಯ ಇಲಾಖೆ ವತಿಯಿಂದ ಗೌರವಾರ್ಪಣೆ ಬಳಿಕ ಹುಟ್ಟೂರಿಗೆ ಮೃತದೇಹ ಸ್ಥಳಾಂತರವಾಗಲಿದೆ. ಫೋಸ್ಟ್​ ಮಾರ್ಟಮ್​ ನಡೆದು, ಸರ್ಕಾರಿ ಪ್ರಕ್ರಿಯೆಗಳು ಮುಗಿದು ತೀರ್ಥಹಳ್ಳಿಗೆ ಮೃತದೇಹ ಬರುವುದು ರಾತ್ರಿಯಾಗುವ ಸಾಧ್ಯತೆ ಇದೆ.  ಇನ್ನೂ ಈ ಘಟನೆ ಅರಣ್ಯ ಇಲಾಖೆಯಲ್ಲಿ ನೀರವ ಮೌನ ಮನೆ ಮಾಡುವಂತೆ ಮಾಡಿದೆ. 

ಜಿಲ್ಲಾ ಜಂಕ್ಷನ್ ನಡೆದಿದ್ದು ಆಕ್ಸಿಡೆಂಟ್! ಬಯಲಾಗಿದ್ದು ಕೊಲೆ ಹಾಗೂ ದರೋಡೆ ಕೇಸ್!? ದ್ವೇಷ ಹೀಗೂ ತೀರಿಸಿಕೊಳ್ಳುತ್ತಾರಾ? ವಿಚಿತ್ರ ಕ್ರೈಂ ಕಥೆ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com