ಮುಂದುವರಿಯಲಿದೆ ಮಳೆ ? ಶಿವಮೊಗ್ಗ ಸೇರಿ ಐದು ಜಿಲ್ಲೆಗಳಿಗೆ ವಿಶೇಷ ಅಲರ್ಟ್! ವರುಣನ ಅಬ್ಬರಕ್ಕೆ ಕಾರಣವೇನು ಗೊತ್ತಾ?

Will the rain continue? Special alert issued for five districts including Shimoga

ಮುಂದುವರಿಯಲಿದೆ ಮಳೆ ? ಶಿವಮೊಗ್ಗ ಸೇರಿ ಐದು ಜಿಲ್ಲೆಗಳಿಗೆ ವಿಶೇಷ ಅಲರ್ಟ್! ವರುಣನ ಅಬ್ಬರಕ್ಕೆ ಕಾರಣವೇನು ಗೊತ್ತಾ?

KARNATAKA NEWS/ ONLINE / Malenadu today/ May 7, 2023 GOOGLE NEWS 

ಶಿವಮೊಗ್ಗ/ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಅಬ್ಬರ ಮಳೆಯು ತಂಪರೆದಿದೆ. ಇವತ್ತು ಬೆಳಗ್ಗೆಯೇ ಬಿಸಿಲು ಕಾಯಿಸುತ್ತಿದೆ. ಇದರ ನಡುವೆ ಶಿವಮೊಗ್ಗ ಸೇರಿದಂತೆ ರಾಜ್ಯದ ಹಲೆವೆಡೆ ಇನ್ನೊಂದು ವಾರ ವರುಣ ಅಬ್ಬರಿಸಲಿದ್ಧಾನೆ ಎಂದು ಹವಾಮಾನ ಇಲಾಖೆ ತಿಳಿಸಿದೆ

liquor ban/ ಎಲ್ಲಿ ಹುಡುಕಿದರೂ ಸಿಗೋದಿಲ್ಲ ಮದ್ಯ! ಮೂರುವರೆ ದಿನ ರಾಜ್ಯದೆಲ್ಲೆಡೆ ಲಿಕ್ಕರ್ ಬ್ಯಾನ್

ಮೋಚಾ ಸ್ಕೈಕ್ಲೋನ್​ (mocha cyclone)ನಿಂದಾಗಿ ರಾಜ್ಯದ ಐದು ಜಿಲ್ಲೆಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗ , ಚಿಕ್ಕಮಗಳೂರು, ಮೈಸೂರು, ಕೊಡಗು ಹಾಗೂ ಚಾಮರಾಜನಗರದಲ್ಲಿ ಸ್ಲೈಕ್ಲೋನ್​ ಎಫೆಕ್ಟ್​ನಿಂದ ಮಳೆಯಾಗಲಿದೆಯಂತೆ. 

ಕ್ಷಿಪ್ರ ಕಾರ್ಯಾಚರಣೆ/  ಶಿವಮೊಗ್ಗದ ಇಬ್ಬರು ಸೇರಿದಂತೆ ರಾಜ್ಯ ನಾಲ್ವರು ವಿದ್ಯಾರ್ಥಿಗಳು ಮಣಿಪುರದಲ್ಲಿ ಸೇಫ್​ 

ಈ ಐದು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಎಲ್ಲೋ ಅಲರ್ಟ್ ನೀಡಿರುವ ಹವಾಮಾನ ಇಲಾಖೆ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿಯು ಮಳೆಯಾಗಲಿದೆ ಎಂದು ತಿಳಿಸಿದೆ. 

ನೀತಿ ಸಂಹಿತೆ ಅವಧಿಯಲ್ಲಿ ಹೊಸನಗರ ಅಬಕಾರಿ ಇಲಾಖೆ ಹಿಡಿದ ಮದ್ಯವೆಷ್ಟು!?

ಹೊಸನಗರ/ ಶಿವಮೊಗ್ಗ ಇಲ್ಲಿನ ತಾಲ್ಲೂಕು ಅಬಕಾರಿ ಇಲಾಖೆ ಅಧಿಕಾರಿಗಳು ನೀತಿಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೂ ಬರೋಬ್ಬರಿ 448 ಲೀಟರ್ ಮದ್ಯವನ್ನು ಹಾಗೂ 36.230 ಬಿಯರ್​ಗಳನ್ನು ವಶಪಡಿಸಿಕೊಂಡಿದ್ಧಾರೆ. 

MISSING /  ಇವರಿಬ್ಬರನ್ನ ಎಲ್ಲಾದರೂ ಕಂಡೀದ್ದೀರಾ? ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ 

ಈ ಸಂಬಂಧ ಇಲಾಖೆ ಮಾಹಿತಿ ನೀಡಿದೆ. ಅಂದಾಜು  6 ಲಕ್ಷದ 95 ಸಾವಿರದ 253 ರೂಪಾಯಿಯಷ್ಟು ಮೌಲ್ಯದ ಅಕ್ರಮ ಮದ್ಯವನ್ನು ಪತ್ತೆಮಾಡಲಾಗಿದೆ.  

ನೀತಿ ಸಂಹಿತೆ ಜಾರಿಯಾದ ಮೇಲೆ ಅಕ್ರಮ ಮದ್ಯ ಮಾರಾಟ ಮತ್ತು ಸಾಗಣಿಕೆ ನಡೆಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ 181 ಪ್ರಕರಣಗಳಲ್ಲಿ 15 ಘೋರ ಪ್ರಕರಣಗಳು ಕಲಂ 15(ಎ) ಕೇಸು ದಾಖಲಿಸಲಾಗಿದೆ.

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ/ ಇಬ್ಬರ ದುರ್ಮರಣ

ಇನ್ನೂ  ಕಲಂ(ಎ) ಅಡಿಯಲ್ಲಿ 157ಪ್ರಕರಣಗಳನ್ನು ಹಾಗೂ ಎನ್‌ಡಿಆರ್‌ಎಸ್ ಕಾಯ್ದೆ ಅಡಿ 2 ಪ್ರಕರಣಗಳು ಒಟ್ಟು 181ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ.

 ಪ್ರವಾಸ ಫಿಕ್ಸ್​ ಮಾಡಂಗಿಲ್ಲ!  ಶಿವಮೊಗ್ಗದಲ್ಲಿ ಮತದಾನದ ದಿನ  ಯಾವೆಲ್ಲಾ ಟೂರಿಸ್ಟ್​ ಪ್ಲೇಸ್ ಬಂದ್ ಆಗುತ್ತೆ ಗೊತ್ತಾ?

ಶಿವಮೊಗ್ಗ/  ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತಿಹೆಚ್ಚು ಮತದಾನವಾಗಿಸುವ ನಿಟ್ಟಿನಲ್ಲಿ ಅಧಿಕಾರಿ ವರ್ಗ ವಿಶೇಷವಾಗಿ ಕೆಲಸ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಪ್ರವಾಸಿ ಸ್ಥಳಗಳಲ್ಲಿಯು ಮತದಾನಕ್ಕೆ ಗಮನಾರ್ಹ ಸಹಕಾರ ಸಿಗುತ್ತಿದೆ. ಪೂರಕವಾಗಿ ಹೇಳುವುದಾದರೆ, ಶಿವಮೊಗ್ಗ ಜಿಲ್ಲೆ ವಿವಿಧ ಪ್ರವಾಸಿ ತಾಣಗಳು ಮತದಾನದ ದಿನದಂದು ಬಂದ್ ಇರಲಿದೆ. 

SSLC  ಶಿವಮೊಗ್ಗದಲ್ಲಿ 624 ಅಂಕ ತೆಗೆದವರು ಯಾರು ಗೊತ್ತಾ? ಜಿಲ್ಲೆಯ Rank  ಕುಸಿಯಲು  ಕಾರಣ ಏನು? ಯಾವ ತಾಲ್ಲೂಕಿನಲ್ಲಿದೆ ಕಡಿಮೆ ಫಲಿತಾಂಶ?

ಪ್ರವಾಸಿ ತಾಣಗಳು ಬಂದ್ 

ಮತದಾನದ ದಿನ ರಜೆ ಇರುವ ಹಿನ್ನೆಲೆಯಲ್ಲಿ ಜನರು ವೋಟು ಹಾಕುವುದನ್ನ ಬಿಟ್ಟು ಕುಟುಂಬ ಸಮೇತ ಪ್ರವಾಸಕ್ಕೆ ಹೊರಡುವ ಸಾಧ್ಯತೆಗಳಿರುತ್ತದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಬಹುತೇಕ ಪ್ರವಾಸಿ ಕೇಂದ್ರಗಳು ಅಂದು ಪ್ರವಾಸಿಗರಿಗೆ ನಿರ್ಬಂಧ ಹೇರುತ್ತಿದೆ. 

KIng cobra / ಮಾರುತಿ ವ್ಯಾನ್​ನಲ್ಲಿದ್ದ ಕಾಳಿಂಗ ಸರ್ಪ!/ ಆಗುಂಬೆಯ ಈ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ಆಗ್ತಿದೆ ವೈರಲ್ 

ಸಿಗಂದೂರು ಚೌಡೇಶ್ವರಿ ದರ್ಶನ ಇರಲ್ಲ

ಮುಖ್ಯವಾಗಿ ಶಿವಮೊಗ್ಗದ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಮತದಾನದ ದಿನದಂದು ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಸಂಬಂಧ  ದೇವಿಯ ಭಕ್ತಾಧಿಗಳು, ಸಾರ್ವಜನಿಕರು ಶ್ರೀಕ್ಷೇತ್ರಕ್ಕೆ ಆಗಮಿಸುವ ಅಭಿಲಾಷೆಯನ್ನು ಹೊಂದಿದ್ದರೆ ಯಾತ್ರಾದಿನವನ್ನು ಮುಂದೂಡಿ ಎಂದು ಈಗಾಗಲೇ  ಸಿಗಂದೂರು ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ. ಎಸ್. ರಾಮಪ್ಪ ಮನವಿ ಮಾಡಿದ್ದಾರೆ. 

ಕವಿಶೈಲಕ್ಕಿಲ್ಲ ಪ್ರವೇಶ 

ಇನ್ನೂ ಇತ್ತ  ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮೇ. 10ರಂದು ಕುವೆಂಪು ಅವರ ಕವಿಶೈಲ ಸ್ಮಾರಕವು ಮುಚ್ಚಿರಲಿದೆ. ಈ ಸಂಬಂಧ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಕುಪ್ಪಳಿಯ ಕವಿಮನೆ, ಕವಿಶೈಲದ ಸ್ಮಾರಕ ಮತ್ತು ಹಿರೇಕೂಡಿಗೆ ಕವಿ ಜನ್ಮಸ್ಥಳ ಸ್ಮಾರಕವು ಬುಧವಾರ ಮುಚ್ಚಿರುತ್ತದೆ. ಆ ದಿನ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. 

ಜೋಗ ಜಲಪಾತ ಕಾಣಲು ಆಗಲ್ಲ

ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಮತದಾನದ ದಿನದಂದು ನಿರ್ಬಂಧ ವಿಧಿಸಲಾಗಿದೆ. ಇದಕ್ಕಾಗಿ ಸಾರ್ವಜನಿಕರ ಗಮನ ಸೆಳೆಯುಲು ಜೋಗದಲ್ಲಿ ಪ್ಲೆಕ್ಸ್ ಕೂಡ ಹಾಕಲಾಗಿದೆ.  ಜೋಗ ನೋಡಲು ಬರುವ ಪ್ರವಾಸಿಗರಿಂದಾಗಿ  ವ್ಯಾಪಾರಸ್ಥರು, ಛಾಯಾಚಿತ್ರಗಾರರು, ಸಣ್ಣ ಪುಟ್ಟ ಬೀದಿ ಬದಿ ವ್ಯಾಪಾರಿಗಳು, ಗೈಡ್‌ಗಳು, ಆಟೊ ಚಾಲಕರು, ಟ್ಯಾಕ್ಸಿ ಚಾಲಕರು, ಭದ್ರತಾ ಸಿಬ್ಬಂದಿ ಹೀಗೇ ಹಲವರು ಮತದಾನದಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದ್ದು, ಅಂದು ನಿರ್ಬಂಧ ಹೇರುವ ಮೂಲಕ ಮತದಾನಕ್ಕೆ ಪ್ರೇರಣೆ ನೀಡಲಾಗುತ್ತಿದೆ. 

ಲಯನ್​ ಸಫಾರಿ ಬಂದದ್, ಆನೆ ಬಿಡಾರವೂ ಡೌಟ್

ಇತ್ತ ತ್ಯಾವರೆ ಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮದಲ್ಲಿಯು ಮತದಾನದದಿನದಂದು ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಬಹುತೇಕ ಸಕ್ರೆಬೈಲ್ ಆನೆ ಬಿಡಾರವೂ ಸಹ ಪ್ರವಾಸಿಗರಿಗೆ ಪ್ರವೇಶ ನೀಡುವುದು ಅನುಮಾನ. ಇಷ್ಟೆ ಅಲ್ಲದೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳು ಅಂದು ಬಂದ್ ಆಗಿರುವ ಸಾದ್ಯತೆ ಇದೆ.  

 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media