ಶಿವಮೊಗ್ಗ ಜೈಲಿನಲ್ಲಿ ಡಿಶುಂ-ಡಿಶುಂ! ಒಬ್ಬನಿಗೆ ಆರು ಜನರಿಂದ ಥಳಿತ!

Shimoga Central Jail inmate assaulted by remaining six inmates, complaint lodged at Tunganagar police station

ಶಿವಮೊಗ್ಗ ಜೈಲಿನಲ್ಲಿ ಡಿಶುಂ-ಡಿಶುಂ!  ಒಬ್ಬನಿಗೆ ಆರು ಜನರಿಂದ ಥಳಿತ!
ಶಿವಮೊಗ್ಗ ಜೈಲಿನಲ್ಲಿ ಡಿಶುಂ-ಡಿಶುಂ! ಒಬ್ಬನಿಗೆ ಆರು ಜನರಿಂದ ಥಳಿತ!

ಶಿವಮೊಗ್ಗ ತಾಲ್ಲೂಕಿನ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ, ಕೈದಿಯೊಬ್ಬನ ಮೇಲೆ ಇತರೇ ಆರು ಮಂದಿ ಕೈದಿಗಳು ಹಲ್ಲೆ ನಡೆಸಿದ್ದಾರೆ. 

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಹೊಡೆದಾಟ ನಡೆದಿರುವ ಘಟನೆ ತಡವಾಗಿ ಬೆಳಿಕಿಗೆ ಬಂದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದ ಅದೀಕ್ಷಕಿ ಡಾ.ಆರ್​.ಅನಿತಾ ದೂರು ನೀಡಿದ್ದಾರೆ.

ಹಾಸನದ ಸಕಲೇಶಪುರದ ಅರಣ್ಯದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನಲ್ಲಿ ತೀರ್ಥಹಳ್ಳಿಯ ಸುಂದರೇಶ್ ಸಾವು! ಇನ್ನೊಬ್ಬರ ಸ್ಥಿತಿ ಗಂಭೀರ

ನಡೆದಿದ್ದೇನು?  

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿನ ನಾಗರಾಜ್​ ಎಂಬ ವಿಚಾರಣಾಧೀನ ಕೈದಿ ಮೇಲೆ, ಶಿವಮೊಗ್ಗ ನಗರದ ಬಡಾವಣೆಯೊಂದರಲ್ಲಿ ದುಷ್ಕೃತ್ಯವೆಸಗಿ ಜೈಲು ಸೇರಿದ್ದ ಸ್ಯಾಡೋ ಸಚಿನ್​, ದರ್ಶನ್​, ಪರಶು, ಅನಿಲ್​ , ವಿಶ್ವ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದ್ದು, ಎಫ್ಐಆರ್​ ಆಗಿದೆ. 

ಜೈಲಿನಲ್ಲಿದ್ದ ವಿಡಿಯೋ ಕಾನ್ಫರೆನ್ಸ್​ ಕೊಠಡಿ ಮೂಲಕ ಕೋರ್ಟ್​ ಎದುರು ಹಾಜರಾಗಲು ತೆರಳುತ್ತಿದ್ದ ನಾಗರಾಜ್​ ಮೇಲೆ ಆರು ಮಂದಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ ಅಧಿಕಾರಿ ಜಗಳ ಬಿಡಿಸಿದ್ದಾರೆ. ಅಲ್ಲದೆ ಗಾಯಾಳುಗೆ ಚಿಕಿತ್ಸೆ ನೀಡಿದ್ದಾರೆ. 

ಜಿಲ್ಲಾ ಜಂಕ್ಷನ್ ನಡೆದಿದ್ದು ಆಕ್ಸಿಡೆಂಟ್! ಬಯಲಾಗಿದ್ದು ಕೊಲೆ ಹಾಗೂ ದರೋಡೆ ಕೇಸ್!? ದ್ವೇಷ ಹೀಗೂ ತೀರಿಸಿಕೊಳ್ಳುತ್ತಾರಾ? ವಿಚಿತ್ರ ಕ್ರೈಂ ಕಥೆ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com