ಎಕ್ಸಿಕ್ಯೂಟಿವ್ ಇಂಜಿನಿಯರ್ ಪತ್ನಿಯ ಕೊಲೆ! ಅನುಮಾನಗಳೇನು? ನಡೆದಿದ್ದೇನು?

Executive engineer's wife murdered What are the doubts? What happened?

ಎಕ್ಸಿಕ್ಯೂಟಿವ್ ಇಂಜಿನಿಯರ್ ಪತ್ನಿಯ ಕೊಲೆ!  ಅನುಮಾನಗಳೇನು? ನಡೆದಿದ್ದೇನು?

ಶಿವಮೊಗ್ಗ / ನಗರದ ವಿಜಯನಗರದಲ್ಲಿ ಮಹಿಳೆಯ ಕೊಲೆ ಪ್ರಕರಣ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಕಾರು ಚಾಲಕನ ನಡೆ ಬಗ್ಗೆ ತುಂಗಾನಗರ ಪೊಲೀಸರು ಅನುಮಾನ ಮೂಡಿಸಿದೆಯಷ್ಟೆ ಅಲ್ಲದೆ , ಮನೆ ಸಮೀಪ ಕೆಲ ವ್ಯಕ್ತಿಗಳು ಓಡಾಡಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. 

ನಡೆದಿದ್ದೇನು

ತುಂಗಾನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ವಿಜಯ ನಗರದ 2 ನೇ ತಿರುವಿನಲ್ಲಿರುವ ಮನೆಯಲ್ಲಿ   ಕಮಲಮ್ಮ 54 ವರ್ಷದ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕೊಲೆಯಾದವರು,  ಎಕ್ಸಿಕ್ಯುಟಿವ್ ಎಂಜಿನಿಯರ್ ಆಗಿರುವ ಮಲ್ಲಿಕಾರ್ಜುನರವರ ಪತ್ನಿ ಯಾಗಿದ್ದಾರೆ. 

ಮನೆಯಲ್ಲಿ ಒಂಟಿಯಾಗಿದ್ದ ಕಮಲಮ್ಮ

ಮಲ್ಲಿಕಾರ್ಜುನ್​ರವರು ಕೆಲದಿನಗಳಲ್ಲಿ ನಿವೃತ್ತಿಯಾಗುವವರಿದ್ದು. ಈ ಹಿನ್ನೆಲೆಯಲ್ಲಿ  ಸ್ನೇಹಿತರೊಂದಿಗೆ  ಗೋವಾಕ್ಕೆ ತೆರಳಿದ್ರು. ಇನ್ನೂ ಕಮಲಮ್ಮರವರ   ಮಗ ಬೆಂಗಳೂರಿನಲ್ಲಿ MBBS ಮುಗಿಸಿ MD ಮಾಡುತ್ತಿದ್ದರು. ಮಗಳು ಇಂಜಿನಿಯರಿಂಗ್ ಮುಗಿಸಿ ಹೊರ ಊರಿನಲ್ಲಿದ್ದರು.  ಹಾಗಾಗಿ ಮನೆಯಲ್ಲಿ ಕಮಲಮ್ಮ ಒಬ್ಬರೆ ಇದ್ದರು. ನಿನ್ನೆ ಸಂಜೆ ಅವರ ಹತ್ಯೆಯಾಗಿದೆ.  

ಗೊತ್ತಾಗಿದ್ದು ಹೇಗೆ? ₹

ನಿನ್ನೆ ಶನಿವಾರ ಸಂಜೆ ಮಲ್ಲಿಕಾರ್ಜುನಯ್ಯ ಅವರು ಮಡದಿ ಕಮಲಮ್ಮ ನವರಿಗೆ  5:30ರ ಸಮಯದಲ್ಲಿ ಫೋನ್ ಮಾಡಿದ್ದಾರೆ. ಆದರೆ ಕಮಲಮ್ಮ ಫೋನ್​ ರಿಸೀವ್ ಆಗಿ್ಲ.  ಹಲವು ಸಾರಿ ಟ್ರೈ ಮಾಡಿದ್ದಾರೆ.  ಇದರಿಂದ ಆತಂಕಗೊಂಡ ಅವರು, ತಮ್ಮ  ಸ್ನೇಹಿತನಿಗೆ ಕರೆ ಮಾಡಿ ವಿಚಾರಿಸುವಂತೆ ತಿಳಿಸಿದ್ದಾರೆ. ಮಲ್ಲಿಕಾರ್ಜುನ್​ರವರ ಸ್ನೇಹಿತರು ಮನೆಗೆ ಹೋಗಿ ನೋಡಿದಾಗ, ಅಲ್ಲಿ ಬಾಗಿಲು ತೆರಳಿದ ಸ್ಥಿತಿಯಲ್ಲಿತ್ತು. ಅಲ್ಲದೆ ಲೈಟ್ ಆನ್ ಆಗಿರಲಿಲ್ಲ. ಮೊಬೈಲ್ ಟಾರ್ಚ್​ ಬಳಸಿ ಒಳಕ್ಕೆ ಹೋಗಿ ನೋಡಿದಾಗ ಕಮಲಮ್ಮರವರ ಮೃತದೇಹ ಕಂಡಿದೆ. ತಕ್ಷಣವೇ ಅವರು, ಮಲ್ಲಿಕಾರ್ಜುನ್​ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಅನುಮಾನವೇನು

ಇನ್ನೂ ಘಟನೆಯ ಬಗ್ಗೆ ಸ್ಥಳಿಯರು ಪೊಲೀಸರ ಬಳಿಯಲ್ಲಿ  ಅನುಮಾನ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಕಾರು ಚಾಲಕ ಘಟನೆಯ ಹಿಂದಿನ ದಿನ ಕಮಲಮ್ಮರ ಬಳಿ ಬಂದು ಹಣ ಕೇಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆ ವೇಳೆ ನಡೆದಿದ್ದೇನು ಎಂಬುದು ಸ್ಪಷ್ಟವಾಗಿಲ್ಲ. ಇನ್ನೂ ಕಾರು ಚಾಲಕನ ಮೊಬೈಲ್ ಸಹ ಸ್ವಿಚ್ ಆಫ್ ಆಗಿರುವುದು ಪೊಲೀಸರು ಪ್ರಕರಣದಲ್ಲಿ ಒನ್ ಆಫ್​ ದಿ ಸಸ್ಪೆಕ್ಟ್ ಎನ್ನುತ್ತಿದ್ದಾರೆ. 

ಇನ್ನೂ ಘಟನೆ ನಡೆದ ದಿನ ಕಮಲಮ್ಮರ  ಮನೆಯ ಬಳಿಯಲ್ಲಿ ನಾಲ್ಕೈದು ಮಂದಿ ಅನುಮಾನಸ್ಪದವಾಗಿ ಓಡಾಡುತ್ತಿರುವುದನ್ನ ಕೆಲವರು ಕಂಡಿದ್ದಾರೆ. ಈ ಬಗ್ಗೆಯು ಪೊಲೀಸರು ತನಿಖೆ ನಡೆಸ್ತಿದ್ದಾರೆ. 

ಇನ್ನೊಂದೆಡೆ ಒಬ್ಬರೇ ಈ ಕೃತ್ಯವೆಸಗಿಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬರುತ್ತಿದ್ದು, ಕಮಲಮ್ಮರವರು ಸಾಕಷ್ಟು ಗಟ್ಟಿಮುಟ್ಟಾದ ಆಳಾಗಿದ್ದರು. ಅವರನ್ನ ನಾಲ್ಕೈದು ಜನರು ಸೇರಿಕೊಂಡು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ದಾವಣಗೆರೆಯಿಂದ ಎಫ್​ಎಸ್​ಎಲ್​ ತಂಡ ಬರುತ್ತಿದ್ದು,ಘಟನೆ ಸಂಬಂಧ ತುಂಗಾನಗರ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಒಟ್ಟಾರೆ, ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡುತ್ತಿದ್ದು, ಮಹಿಳೆಯ ಕೊಲೆ ನಗರದಲ್ಲಿ ಒಂದು ರೀತಿಯ ಆತಂಕ ಮೂಡಿಸಿದೆ.