Handi anni Exclusive fallowup Report ಅಣ್ಣಾ ನಿನ್ನ ಕೊಂದವರನ್ನು ಬಿಡಲ್ಲ ಎಂದು ಆಣೆ ಮಾಡಿದ ಆ ರೌಡಿಯಿಂದಲೇ ನಡೆಯಿತಾ…ಕೊಲೆ?

Handi anni Exclusive fallowup Report ಅಣ್ಣಾ ನಿನ್ನ ಕೊಂದವರನ್ನು ಬಿಡಲ್ಲ ಎಂದು ಸಮಾದಿ ಮೇಲೆ ಆಣೆ ಮಾಡಿದ ಆ ರೌಡಿಯಿಂದಲೇ ನಡೆಯಿತಾ…ಕೊಲೆ? ಹಂದಿ ಅಣ್ಣಿಯ ಅಟ್ಯಾಕ್ ನಲ್ಲಿ ಲೀಡ್ ತಗೆದುಕೊಂಡ ಬಂಕ್ ಬಾಲುವಿನ ಈ ಶಿಷ್ಯ ಯಾರು ಗೊತ್ತಾ?

14-07-22 ರ ಬೆಳಗ್ಗೆ 10.50 ಕ್ಕೆ ಶಿವಮೊಗ್ಗದ ವಿನೋಬ ನಗರದ ಪೊಲೀಸ್ ಚೌಕಿಯಲ್ಲಿ ರೌಡಿ ಹಂದಿ ಅಣ್ಣಿಯನ್ನು ವಿನೋಬ ನಗರ ಪೊಲೀಸ್ ಠಾಣೆ ಸನಿಹದಲ್ಲಿಯೇ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದೆ.

Malenadu Today

ಇನ್ನೋವ್ಹಾ ಕಾರಿನಲ್ಲಿ ಬಂದ ಏಳು ಮಂದಿ ಆರೋಪಿಗಳ ತಂಡ ಕಾರನ್ನು ಹಂದಿ ಅಣ್ಣಿ ಹೊಂಡಾ ಆಕ್ಟಿವಾಗೆ ಗುದ್ದಿದೆ. ತಪ್ಪಿಸಿಕೊಳ್ಳಲು ಹಂದಿ ಅಣ್ಣಿಗೆ ಅಟ್ಟಾಡಿಸಿಕೊಂಡು ಮಚ್ಚುಗಳ್ಳಿಂದ ಹಲ್ಲೆ ಮಾಡಲಾಗಿದೆ. ಪ್ರತ್ಯಕ್ಷದರ್ಶಿಗಳು ಸಿಸಿ ಟಿವಿ ಫೂಟೇಜ್ ಗಳನ್ನು ಅವಲೋಕಿಸಿದ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿರುವುದು ಮೂಲಗಳಿಂದ ತಿಳಿದು ಬಂದಿದೆ.

ಮೂಲಗಳ ಪ್ರಕಾರ ಬಂಕ್​ ಕಾಡಾ ಕಾರ್ತಿ ಎಂಬಾತನೇ ಈ ಮರ್ಡರ್​ನ ರೂವಾರಿ ಎನ್ನಲಾಗುತ್ತಿದೆ. ಇಷ್ಟಕ್ಕೂ ಕಾಡಾ ಕಾರ್ತಿಯಾರು!? ಎಂದರೆ, ಉತ್ತರಕ್ಕೆ 2018 ರಲ್ಲಿ ನಡೆದ ಬಂಕ್ ಬಾಲು ಮರ್ಡರ್ ಕೇಸ್​ನ್ನ ನೆನಪಿಸಿಕೊಳ್ಳಬೇಕು.

Malenadu Today

2018 ರಲ್ಲಿ ಕೊಲೆಯಾದ ನಟೋರಿಯಸ್ ರೌಡಿ ಬಂಕ್ ಬಾಲು ಶಿಷ್ಯನೇ ಈ ಕಾಡಾ ಕಾರ್ತಿ. ಈತನೇ ಹಂದಿ ಅಣ್ಣಿ ಅಟ್ಯಾಕ್ ನಲ್ಲಿ ಲೀಡ್ ತಗೆದುಕೊಂಡಿರುವುದು ದೃಶ್ಯಾವಳಿಯಲ್ಲಿ ಕಂಡು ಬಂದಿದೆ. 2018 ರಲ್ಲಿ ಬಂಕ್ ಬಾಲು ನನ್ನು ಹಗಲೆಲ್ಲಾ ಕಾದು ಹೊಂಚುಹಾಕಿ ದುಷ್ಕರ್ಮಿಗಳ ತಂಡ ಸ್ಕೆಚ್ ಹಾಕಿ ಸಂಜೆಯ ನಂತರ ಬಾಲುನನ್ನು ಹಾತಿ ನಗರದ ಬಳಿ ಮಚ್ಚುಗಳಿಂದ ಹಲ್ಲೆ ನಡೆಸಿ ಕೊಲೆಗೈದಿತ್ತು,

2017 ರಲ್ಲಿ ಶಿವಮೊಗ್ಗದ ಸೀಗೆಹಟ್ಟಿಯ ರೌಡಿ ಶೀಟರ್ ಅಂಬು ಅಲಿಯಾಸ್ ಅನಿಲ್ ಎಂಬುವನ ಮನೆಗೆ ನುಗ್ಗಿ ಬಾಲು ಹಲ್ಲೆ ನಡೆಸಿದ್ದ.ಗನ್ ಪಾಯಿಂಟ್ ಇಟ್ಟು ಕೊಲೆ ಮಾಡುವುದಾಗಿ ಗುಡುಗಿದ್ದ.ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದೇ ರೀತಿ ಅನಿಲ್ ಸ್ನೇಹಿತ ದರ್ಶನ್ ಗೆ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದ.

ಇವರ ಜೊತೆ ಸ್ಪಾಟ್ ನಾಗನ ಕೊಲೆಯಲ್ಲಿ ಭಾಗಿಯಾಗಿದ್ದ ಪ್ರವೀಣ್ ಕೂಡ ಬಾಲು ವಿರುದ್ಧ ಕತ್ತಿ ಮಸಿಯುತ್ತಿದ್ದ. ಬಂಕ್ ಬಾಲುನನ್ನು ನಾವು ಮೊದಲು ಮುಗಿಸದಿದ್ದರೇ..ಆತನೇ ನಮಗೆ ಮಹೂರ್ತ ಫಿಕ್ಸ್ ಮಾಡ್ತಾನೆಂಬ ಕಾರಣಕ್ಕೆ ಇವರೆಲ್ಲಾ ಸೇರಿಕೊಂಡು ಬಾಲು ಕೊಲೆ ಮಾಡಿದ್ರು. ಇವರೆಲ್ಲರಿಗೂ ಬಾಲುನನ್ನು ಎತ್ತಲು ಸ್ಕೆಚ್ ಹಾಕಿಕೊಟ್ಟವನು ಹಂದಿ ಅಣ್ಣಿಯಾಗಿದ್ದ. ಹಂದಿ ಅಣ್ಣಿ ಅಣತಿಯಂತೆ ಅಂದು ಹಗಲ್ಲೆಲ್ಲಾ ಗ್ಯಾಂಗ್ ಹೊಂಚು ಹಾಕಿ ಬಂಕ್ ಬಾಲುನನ್ನು ಕೊಲೆ ಮಾಡಿದ್ರು. ಈ ಸಂದರ್ಭದಲ್ಲಿ ಬಾಲುಜೊತೆಗಿದ್ದವನೇ ಕಾಡಾ ಕಾರ್ತಿಕ್​

Malenadu Today

ಸಮಾದಿ ಮೇಲೆ ಪ್ರಮಾಣ ಮಾಡಿದ್ದ ಕಾರ್ತಿ

ಬಂಕ್ ಬಾಲುನ ಅಂತ್ಯ ಸಂಸ್ಕಾರದ ವೇಳೆ ಸಮಾದಿ ಮೇಲೆ ಆಣೆ ಮಾಡಿದ ಬಂಕ್ ಬಾಲು ಶಿಷ್ಯರು..ಅಣಾ ನಿನ್ನ ತೆಗೆದವರನ್ನು ನಾವು ಬಿಡೋದಿಲ್ಲ ಎಂದು ಶಪಥ ಮಾಡಿದ್ರು..ಅದರ ಮುಂದುವರೆದ ಭಾಗವಾಗಿ ರೌಡಿ ವಲಯದಲ್ಲಿ ಏನೇನಾಯ್ತೋ ಗೊತ್ತಿಲ್ಲ.

ಇತ್ತ ನಮ್ಮ ಗುರುವನ್ನು ಎತ್ತಿದ ಹಂದಿ ಅಣ್ಣಿಯ ಸಹಚರರನ್ನು ಒಬ್ಬೊಬ್ಬರಾಗಿಯೇ ಎತ್ತಬೇಕೆಂದು..ಸ್ಕೆಚ್ ಹಾಕಿದ ಕಾಡಾ ಕಾರ್ತಿ, ಸಬಾಸ್ಟಿನ್​ಗೆ..ಸಾಥ್ ಕೊಟ್ಟವನೇ ಮಾರ್ಕೆಟ್ ಲೋಕಿ ಎಂದು ಹೇಳಲಾಗುತ್ತಿದೆ. ಇಷ್ಟಕ್ಕೂ ಲೋಕಿ ಏಕೆ ಸಾಥ್​ ಕೊಟ್ಟಿದ್ದಾನೆ ಅನ್ನೋದಕ್ಕೂ ಕಾರಣ ಇದೆ. ಲೋಕಿಗೆ ಮೋಟಿ ವೆಂಕಟೇಶ್ ಹಾಗೂ ಮೆಂಟಲ್​ ಸೀನಾನನ್ನು ಕೊಲೆ ಮಾಡುವ ಸಲುವಾಗಿ ಬೆಂಗಳೂರಿಂದ ಹುಡುಗರನ್ನ ಕಳುಹಿಸಿದ್ದೇ ಬಂಕ್​ ಬಾಲು. ಆತನ ಶಿಷ್ಯನಂತಿದ್ದ ಲೋಕಿ.

Malenadu Today

ಇದರ ನಡುವೆ, ಲವಕುಶ ಅವಳಿ ಸಹೋದರನ್ನು ಕೊಂದ ಅಣ್ಣಿಗೆ ಪ್ರತಿಕಾರ ತೀರಿಸಿಕೊಳ್ಳಲು ಲವಕುಶ ಗ್ಯಾಂಗ್ ನ ತುಮಕೂರು ರಜನಿ ಕೂಡ ವರ್ಷಗಳಿಂದ ಕಾದು ಕೂತಿದ್ದ. ಕಳೆದ ಆರು ವರ್ಷದ ಹಿಂದೆ ಲವಕುಶರನ್ನು ಕೊಂದ ಪ್ರಕರಣದಲ್ಲಿದ್ದವನನ್ನು ಲಯನ್ ಸಫಾರಿ ಬಳಿ ರಜನಿ ತಂಡ ಕೊಲೆ ಮಾಡಿ ಪ್ರತಿಕಾರ ತೀರಿಸಿಕೊಂಡಿತ್ತು. ಇನ್ನು ಕೊಲೆಯಲ್ಲಿ ನೇರವಾಗಿ ಭಾಗಿಯಾದ ಹಂದಿ ಅಣ್ಣಿಗಾಗಿಯು ರಜನಿ ಗ್ಯಾಂಗ್ ಕೂಡ ಕಾದು ಕೂತಿತ್ತು ಎನ್ನಲಾಗಿದೆ.

ಕಾಡಾ ಕಾರ್ತಿಗೆ ಬೆಂಗಳೂರಿನಿಂದ ನುರಿತ ಮೂರ್ನಾಲ್ಕು ಹುಡುಗರನ್ನು ವ್ಯವಸ್ಥೆ ಅಡಿ ಪೂರೈಸಲಾಗಿದೆ. ಈ ಹಿಂದೆ ಮೆಂಟಲ್ ಸೀನಾ ಮರ್ಡರ್ ಕೇಸ್ ನಲ್ಲಿದ್ದ ಬೆಂಗಳೂರು ಬನಶಂಕರಿ ಮೂಲದ ಹುಡುಗರೇ ಹಂದಿ ಅಣ್ಣಿಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಲೋಕಿ ಮತ್ತು ರಜನಿಯ ವಿಶ್ವಾಸಕ್ಕೋಸ್ಕರ ಹಣ ಪಡೆಯದೇ. ಹಂದಿ ಅಣ್ಣಿಯನ್ನು ಕೊಲೆ ಮಾಡಿರುವುದು ಮೂಲಗಳಿಂದ ತಿಳಿದು ಬಂದಿದೆ.

ಮೊದಲು ಸ್ಕೆಚ್ ಹಾಕಿದ್ದೆ..ಅಂಬುಗೆ…

ಅಂಬು ಜೈಲಿನಿಂದ ರಿಲೀಸ್ ಆಗ್ತಿದ್ದ ಹಾಗೆ., ಮೃತ ಬಾಲುವಿನ ಪಟಾಲಂ ಮೊದಲು ಅಂಬುಗೆ ಮಹೂರ್ತ ಫಿಕ್ಸ್ ಮಾಡಿತ್ತು..ಆದ್ರೆ ಅಂಬುನ ಕ್ಯಾಚ್ ಹಾಕೋದಕ್ಕೆ ಇವರಿಗೆ ಸಾಧ್ಯವಾಗ್ಲಿಲ್ಲ. ಅಲ್ಲದೆ ಅಂಬು ಮಂಗಳೂರು ಕಡೆಗೆ ಹೋಗಿ ಶೆಲ್ಟರ್​ ತೆಗೆದುಕೊಳ್ತಾನೆ. ಈ ಮಧ್ಯೆ ಯಾವಾಗ ಕಾಡಾ ಕಾರ್ತಿ ತಂಡಕ್ಕೆ ಲೋಕಿ ಮತ್ತು ರಜನಿ ಲಿಂಕ್ ಸಿಕ್ತೋ..ಆವಾಗ ಪ್ಲಾನ್ ಬದಲಾಗಿದೆ. ಬಾಲುನನ್ನ ಕೊಲೆ ಮಾಡಿದವರನ್ನು ಎತ್ತುವುದಕ್ಕಿಂತ ಮೊದಲು ಕೊಲೆಗೆ ಸಂಚು ರೂಪಿಸಿಕೊಟ್ಟ ಮೇನ್ ವಿಕೇಟನ್ನೇ ಎತ್ತಿದ್ರೆ ಹೇಗೆ..ನಂತ್ರ ಉಳಿದವರನ್ನು ನೋಡಿಕೊಂಡ್ರೆ ಆಯ್ತು ಅಂತಾ..ಹಂದಿ ಹಣ್ಣಿಗೆ ತಂಡ ಮಹೂರ್ತ ಫಿಕ್ಸ್ ಮಾಡಿದೆ.

Malenadu Today

ಹದಿನೈದು ದಿನಗಳಿಂದ ವಾಚ್

ಬೆಂಗಳೂರಿನಿಂದ ಬಂದ ಹುಡುಗರ ತಂಡಕ್ಕೆ ಸ್ಥಳೀಯವಾಗಿ ಕಾಡು ಕಾರ್ತಿ ಅಂಡ್ ಗ್ಯಾಂಗ್ ಸಾತ್ ನೀಡಿದೆ. ಅವರಿಗೆ ಇರುವಷ್ಟು ದಿನ ಖರ್ಚಿಗೆ ಬೇಕಾಗುವಷ್ಟು ಹಣ ನೀಡಿ ಕಳಿಸಲಾಗಿತ್ತಂತೆ. ಹದಿನೈದು ದಿನಗಳಿಂದ ಅಣ್ಣಿಯನ್ನು ಎಣ್ಣೆ ಬಿಟ್ಟುಕೊಂಡು ಕಾದ ತಂಡಕ್ಕೆ ಅಣ್ಣಿಯನ್ನು ಬೇಟೆಯಾಡಲು ಸಾಧ್ಯವಾಗಲೇ ಇಲ್ಲ.

ಮೋಟಿ ವೆಂಕಟೇಶ್ ಮರ್ಡರ್ ಕೇಸ್ ಎವಿಡೆನ್ಸಿಗೆ ಅಣ್ಣಿ ಕೋರ್ಟ್ ಗೆ ಬರಬೇಕಿತ್ತು.

ನೆನ್ನೆ (14-07-22) ಹಂದಿ ಅಣ್ಣಿ ಕೊಲೆಯಾದ ದಿನ ಬೆಳಿಗ್ಗೆ ಹಂದಿ ಅಣ್ಣಿ ಮೋಟಿ ವೆಂಕಟೇಶ್ ಮರ್ಡರ್ ಕೇಸ್ ಗೆ ಸಂಬಂಧಿಸಿದಂತೆ ವಿಚಾರಣೆಗೆ ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಬಹುಶಃ ಅಣ್ಣಿಗೆ ಕೋರ್ಟ್ ಗೆ ಹೋಗುವ ಸಂದರ್ಭದಲ್ಲಿ ಆತನನ್ನು ಎತ್ತಿಬಿಡಬೇಕು ಎಂದು ಕಾರ್ತಿ ಟೀಂ ಹೊಂಚು ಹಾಕಿತ್ತೇನೋ ಗೊತ್ತಿಲ್ಲ.

ಒಟ್ಟಿನಲ್ಲಿ ಘಟನೆಯ ದಿನ ಬೆಳಗಿನ ಜಾವದಿಂದಲೇ ಆತನಿಗಾಗಿ ಟೀಂ ಹೊಂಚು ಹಾಕಿದೆ. ಬೆಳಿಗ್ಗೆ 10.30 ರ ಸುಮಾರಿನಲ್ಲಿ ಅಣ್ಣಿ ತಮ್ಮ ಪರ ವಕೀಲರಿಗೆ ಫೋನ್ ಮಾಡಿ, ನಾನು ಇಂದು ಕೋರ್ಟ್ ಗೆ ಹಾಜರಾಗೋದಿಲ್ಲ. ನೀವೇ ಅಪ್ಲಿಕೇಷನ್ ಮೂವ್ ಮಾಡಿ ಅಂತಾ ಹೇಳಿದ್ದಾನೆ. ಅಣ್ಣಿಗೆ ಸಾವು ನೆರಳಿನಂತೆ ಹಿಂಬಾಲಿಸುತ್ತಿದ್ದು ಸ್ಪಷ್ಟವಾಗಿ ಗೊತ್ತಿತ್ತು.

Malenadu Today

ಆದರೂ ಬಂಡಧೈರ್ಯದಿಂದಲೇ ಓಡಾಡುತ್ತಿದ್ದ. ಏದುರಿನಿಂದ ಎಂತಹ ಶತ್ರುಗಳು ಮೈಮೇಲೆ ಎರಗಿದರೂ..ಅವರೊಂದಿಗೆ ಸೆಣಸಾಡುವ ತಾಕತ್ತು ಅಣ್ಣಿಗಿತ್ತು. ಇದನ್ನ ಅರಿತ ಎದುರಾಳಿ ತಂಡವು ಅಣ್ಣಿಯನ್ನು ಹಿಂಬದಿಯಿಂದಲೇ ಅಟ್ಯಾಕ್ ಮಾಡಲು ಬಹಳ ದಿನ ಕಾಯ್ದಿತ್ತು.

ಅದಕ್ಕೆ ಪೂರಕವೆಂಬಂತೆ ಕೋರ್ಟ್ ಹೋಗದ ಅಣ್ಣಿ ಮನೆ ಸನಿಹವೇ ಹೊಂಡ ಆಕ್ಟಿವಾ ಬೈಕ್ ನಲ್ಲಿ ಹೊರಡುತ್ತಿದ್ದಂತೆ ಇನ್ನೋವ್ಹಾ ಕಾರಿನಲ್ಲಿ ಫಾಲೋ ಮಾಡಿದ ಕಾರ್ತಿ ತಂಡ ವಿನೋಬ ನಗರ ಪೊಲೀಸ್ ಚೌಕಿ ಬಳಿ ಬೈಕ್ ಗೆ ಗುದ್ದಿದೆ..ನಂತರ ತಪ್ಪಿಸಿಕೊಳ್ಳಲು ಹೋದ ಅಣ್ಣಿಗೆ ಓಡಿಸಿಕೊಂಡು ಹೋಗಿ ಕಾರ್ತಿ ತಂಡ ಹಲ್ಲೆ ನಡೆಸಿದೆ.
ಹಂದಿ ಅಣ್ಣಿ ಕೊಲೆ ಹಿಂದೆ ಕೇವಲ ರಜನಿ ಲೋಕಿ ಹೆಸರು ಥಳಕು ಹಾಕಿಕೊಂಡಿದೆ ಅಷ್ಟೆ..ಈ ಕೊಲೆಗೆ ಬ್ಯಾಕ್ ಬೋನ್ ಸಪೋರ್ಟ್ ಯಾರು ಎಂಬ ಆಳದ ತನಿಖೆಗೆ ಪೊಲೀಸರು ಮುಂದಾದರೆ..ಬೆಚ್ಚಿಬೀಳುವಂತ ಸತ್ಯಗಳು ಅನಾವರಣಗೊಳ್ಳುತ್ತದೆ.

Handi anni case : ರೌಡಿಸಂ ಬೇಡ ಅಂತ ಹೆಂಡ್ತಿ, ಮಗು ಜೊತೆ ಚೆಂದ ಇದ್ದವನು ಹಂತಕರ ಬೇಟೆ ಆಗಿದ್ದೇಕೆ!? ಸ್ವತಃ ಪೊಲೀಸರೇ ಕೊಟ್ಟ ವಾರ್ನಿಂಗ್​ನ್ನ ನಿರ್ಲಕ್ಷ್ಯ ಮಾಡಿದ್ದೇಕೆ!? ಹೆಬ್ಬೆಟ್ಟು ಮಂಜನಿಂದ ಬಂದಿತ್ತೆ ಒಂದುವರೆ ಕೋಟಿ!? ಲಾಸ್ಟ್​ ಸ್ಟೇಟಸ್​ ವಿಡಿಯೋದಲ್ಲಿ ಸಾವಿನ ಡೈಲಾಗ್​!!? ಕಂಪ್ಲೀಟ್ JP Exclusive

Leave a Comment