60 ಅಡಿ ಆಳದ ಬಾವಿಗೆ ಬಿದ್ದ ಕಾಡುಕೋಣ! ರೋಚಕ ಕಾರ್ಯಾಚರಣೆ ! ನಡೆದಿದ್ದೆಲ್ಲಿ?

A bison that fell into a 60-feet-deep well in Sagar taluka was lifted up using a crane.ಸಾಗರ ತಾಲ್ಲೂಕಿನಲ್ಲಿ ಆರವತ್ತು ಅಡಿ ಆಳದ ಬಾವಿಗೆ ಬಿದ್ದ ಕಾಡುಕೋಣವನ್ನು ಕ್ರೇನ್​ ಬಳಸಿ ಮೇಲಕ್ಕೆ ಎತ್ತಲಾಗಿದೆ.

60 ಅಡಿ ಆಳದ ಬಾವಿಗೆ ಬಿದ್ದ ಕಾಡುಕೋಣ! ರೋಚಕ ಕಾರ್ಯಾಚರಣೆ ! ನಡೆದಿದ್ದೆಲ್ಲಿ?

KARNATAKA NEWS/ ONLINE / Malenadu today/ Aug 10, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ  ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಪ್ಪಳಿ ಲಿಂಗದಹಳ್ಳಿ ಗ್ರಾಮದಲ್ಲಿ ತೆರೆದ ಬಾವಿಯೊಂದಕ್ಕೆ ಕಾಡೆಮ್ಮೆಯ ಮರಿ ಬಿದ್ದಿತ್ತು.ವಿಚಾರ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾಡೆಮ್ಮೆಯನ್ನು ಮೇಲಕ್ಕೆ ಎತ್ತಿದ್ದಾರೆ. 

ಅರವಳಿಕೆ ನೀಡಿ ಕಾರ್ಯಾಚರಣೆ

ಸುಮಾರು ಅರವತ್ತು ಅಡಿ ಆಳದ ತೆರೆದ ಬಾವಿಗೆ ಕಾಡೆಮ್ಮೆ ಕರುವೊಂದು ಬಿದ್ದಿತ್ತು. ಅಂದಾಜು ಎರಡು ವರ್ಷದ ಕೋಣವ ಇದಾಗಿದ್ದು, ಆಳಕ್ಕೆ ಬಿದ್ದಿದ್ದರಿಂದ ನಿತ್ರಾಣಗೊಂಡಿತ್ತು. ಇನ್ನೂ ವಿಚಾರ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಕಾಡುಕೋಣಕ್ಕೆ ಅರವಳಿಕೆ ನೀಡಿದರು.ಆನಂತರ ಅಗ್ನಿಶಾಮಕ ಸಿಬ್ಬಂದಿ ಬಾವಿಗಿಳಿದು ಕಾಡುಕೋಣವನ್ನು ಹಗ್ಗದಿಂದ ಬಿಗಿದು, ಕ್ರೇನ್​ ಬಳಸಿ ಮೇಲಕ್ಕೆ ಎತ್ತಲಾಯ್ತು. 

ಇನ್ನಷ್ಟು ಸುದ್ದಿಗಳು!

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು