ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಈ ಪೆನ್​ನ ವಿಶೇಷತೆ ಗೊತ್ತಾ?

This pen is from Sagar Taluk, Shimoga District, recognized by the Indian Book of Recordsಇಂಡಿಯನ್ ಬುಕ್ ಆಫ್ ರೆಕಾರ್ಡ್​ ಗುರುತಿಸಿದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಈ ಪೆನ್

ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಈ ಪೆನ್​ನ ವಿಶೇಷತೆ ಗೊತ್ತಾ?

KARNATAKA NEWS/ ONLINE / Malenadu today/ Oct 16, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ  ಆವಿನಹಳ್ಳಿ ನಿವಾಸಿ ಗಣೇಶ್ ಹಾಡ್‌ವೇರ್ ಮತ್ತು ಜೈ ಗಣೇಶ್ ವುಡ್‌ವರ್ಕ್ ಮಾಲೀಕರು 20 ಅಡಿಯ ಪೆನ್​ವೊಂದನ್ನ ತಯಾರಿಸಿ ವಿಶೇಷತೆ ಮೂಡಿಸಿದ್ದಾರೆ. ಈ ಪೆನ್ ಎಲ್ಲರ ಕುತೂಹಲವನ್ನ ಸೆಳೆಯುತ್ತಿದೆ. 

ಇಲ್ಲಿನ  ಕೃಷ್ಣಮೂರ್ತಿ ಆಚಾರ್  20ಅಡಿ ಉದ್ದದ ವಿಶಿಷ್ಟ ರೀತಿಯ ಪೆನ್‌ ತಯಾರಿಸಿದ್ದು, ಸದ್ಯ ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದೆ. ಮೂಲಗಳ ಪ್ರಕಾರ, ಹತ್ತು ವರ್ಷಗಳ ಹಿಂದೇ ಈ ಪೆನ್​ ನ್ನ ಆಚಾರ್​ ರವರು ತಯಾರಿಸಿದ್ದರು, 

ಅಕೇಶಿಯಾ ಮರವನ್ನು ಬಳಸಿಕೊಂಡು, ಸುಮಾರು 15 ದಿನಗಳ ಶ್ರಮವಹಿಸಿ ಪೆನ್ ತಯಾರಿಸಿದ್ದರು. ಆನಂತರ ಅದನ್ನ ಇಂಡಿಯನ್ ಬುಕ್ ಆಫ್ ರೆಕಾರ್ಡ್​ಗೆ ಕಳುಹಿಸಿದ್ದರು. ಇದೀಗ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಇಂಡಿಯನ್ ಬುಕ್ ಆಫ್ ರೆಕಾರ್ಡ್​ ಆಚಾರ್​ರವರು ತಯಾರಿಸಿದ ಪೆನ್​ಗೆ ತನ್ನ ದಾಖಲೆಯಲ್ಲಿ ಸ್ಥಾನ ನೀಡಿದೆ. 


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ