ತೀರ್ಥಹಳ್ಳಿಯಲ್ಲಿ ವಾರದಲ್ಲಿ ಮೂವರ ಆತ್ಮಹತ್ಯೆ! ಮದುವೆ ನಿಶ್ಚಯವಾಗಿದ್ದ ಯುವತಿ ನೇಣಿಗೆ ಶರಣು

Three suicides in Theerthahalli in a week Girl engaged to marry commits suicide | kannada news channel| breaking news in kannada live

ತೀರ್ಥಹಳ್ಳಿಯಲ್ಲಿ ವಾರದಲ್ಲಿ ಮೂವರ ಆತ್ಮಹತ್ಯೆ! ಮದುವೆ ನಿಶ್ಚಯವಾಗಿದ್ದ ಯುವತಿ ನೇಣಿಗೆ ಶರಣು
Three suicides in Theerthahalli in a week Girl engaged to marry commits suicide

SHIVAMOGGA  |  Jan 21, 2024  | Three suicides in Theerthahalli in a week  . ತೀರ್ಥಹಳ್ಳಿಯಲ್ಲಿ ವಾರದಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಮತ್ತೊಬ್ಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಕಳೆದ ಒಂದುವಾರದಲ್ಲಿ  ನಡೆಯುತ್ತಿರುವ ಮೂರನೇ ಘಟನೆ ಇದಾಗಿದೆ. ಇತ್ತೀಚೆಗೆ ಆಗುಂಬೆ ಸಮೀಪ ರಾತ್ರಿ ಕೋಣೆಗೆ ಹೋಗಿ ಮಲಗಿದ್ದ ಯುವತಿ ಶವ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. 

ಈ ಘಟನೆ ಬೆನ್ನಲ್ಲೆ Thirthahalli Incident ಫೈನಲ್ ಇಯರ್ ಡಿಗ್ರಿ ವಿದ್ಯಾರ್ಥಿನಿ ನೇಣಿಗೆ ಶರಣು? ತೀರ್ಥಹಳ್ಳಿಯಲ್ಲಿ ಘಟನೆ ನಡೆದಿತ್ತು. 

ಎರಡು ಘಟನೆಗಳು ಮಾಸುವ ಮೊದಲೇ ಮತ್ತೊಬ್ಬ ತಂದೆ ತಾಯಿಯಲ್ಲಿ ನೊವಿನ ಕಣ್ಣೀರು ಕೊಟ್ಟು ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಮದುವೆಗಿನ್ನೂ 13 ದಿನ ಇರುವಾಗಲೇ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಇನ್ನಷ್ಟು ದುಃಖ ತಂದಿದೆ. 

ತೀರ್ಥಹಳ್ಳಿಯಲ್ಲಿ  ಘಟನೆ

ತೀರ್ಥಹಳ್ಳಿ ತಾಲ್ಲೂಕು ಕಟ್ಟೆಹಕ್ಲುವಿನಲ್ಲಿ ಈ ಘಟನೆ ಸಂಭವಿಸಿದೆ. ಯುವತಿ ಸ್ನಾನದ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಇವತ್ತು ಬೆಳಗ್ಗೆ ಘಟನೆ ಗೊತ್ತಾಗಿದೆ. ಸಾವನ್ನಪ್ಪಿದ ಯುವತಿ ಹೆಸರು ಚೈತ್ರ, 26 ವರ್ಷ. ಈಕೆ ಅನಾರೋಗ್ಯದಿಂದ ಬಳಲುತ್ತಿದ್ದಳು ಎಂದು ಹೇಳಲಾಗುತ್ತಿದೆ. ಅಲ್ಲದೆ ತನಗೆ ಮದುವೆ ಬೇಡ ಎಂಧು ಹೇಳಿದ್ದಳಂತೆ. 

ಈ ನಡುವೆ ಮದುವೆ ನಿಕ್ಕಿಯಾಗಿತ್ತು. ಆದರೆ ಯುವತಿ ಶನಿವಾರ ರಾತ್ರಿ ಹೀಗೆ ಮಾಡಿಕೊಂಡಿದ್ದಾಳೆ. ಸದ್ಯ ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.