Public Nuisance ಮಾಡುತ್ತಿರುವವರ ವಿರುದ್ದ ದಾಖಲಾಯ್ತು 49 ಕೇಸ್‌

49 cases were registered against those doing Public Nuisance

Public Nuisance  ಮಾಡುತ್ತಿರುವವರ ವಿರುದ್ದ ದಾಖಲಾಯ್ತು  49 ಕೇಸ್‌
Public Nuisance

SHIVAMOGGA | MALENADUTODAY NEWS | May 24, 2024  ಮಲೆನಾಡು ಟುಡೆ

ಶಿವಮೊಗ್ಗ‌ ಪೊಲೀಸರು ಫೂಟ್‌ ಪೆಟ್ರೋಲಿಂಗ್‌ ಮುಂದುವರಿಸಿದ್ದಾರೆ. ನಿನ್ನೆ ರಾತ್ರಿ ಒಟ್ಟಾರೆ 49 ಪಿಟ್ಟಿ ಕೇಸ್‌ ದಾಖಲಿಸಿದ್ದಾರೆ. ಅದರ ವಿವರ ಹೀಗಿದೆ.  ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ  ಎ ಎ ವೃತ್ತ, ಎಸ್ ಎನ್ ವೃತ್ತ, ನೆಹರು ರಸ್ತೆ, ದುರ್ಗಿಗುಡಿ, ಎಸ್ ಪಿ ಎಂ ರಸ್ತೆ, ಓಲ್ಡ್ ಬಾರ್ ಲೈನ್ ರೋಡ್, ಸೂಳೆ ಬೈಲು, ಈದ್ಗ ನಗರ, ಜಟ್ ಪಟ್ ನಗರ, 

ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಡಿ ಸಿ ಕಚೇರಿ ಹತ್ತಿರ, ರೈಲ್ವೆ ನಿಲ್ದಾಣ, ನಾವುಲೇ, ನಾಗೇಂದ್ರ ಕಾಲೋನಿ, ಬೊಮ್ಮನಕಟ್ಟೆ, ಹರಿಗೆ, ಕುಂಸಿ, ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ನ ಇಂಡಸ್ಟ್ರಿಯಲ್ ಏರಿಯಾ, ಅಣಲೇಕೊಪ್ಪ, ಮಂಕಳಲೆ, ಅಶೋಕ ನಗರ ಆನಂದಪುರ, 

ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಜಾನ್ನಾಪುರ, ಕನಕ ನಗರ, ಭೋವಿ ಕಾಲೋನಿ, ಬಸವನ ಗುಡಿ, ಹೊಸಳ್ಳಿ, ಚರ್ಚ್ ಏರಿಯಾ, ಉಜಾನಿಪುರ, ನವಿಲೇ ಬಸವಪುರ, ಸಿದ್ದಾಪುರ, ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ ಶಿಕಾರಿಪುರ ಟೌನ್ ನ ಬಸ್ ನಿಲ್ದಾಣ,

ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ರಿಪ್ಪನ್ ಪೇಟೆ ಟೌನ್ ನಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  (Foot Patrolling) ಮತ್ತು ಠಾಣಾ ವ್ಯಾಪ್ತಿಗಳ ಹೊರ ವಲಯಗಳಲ್ಲಿ Area Domination ವಿಶೇಷ ಗಸ್ತು ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 49 ಲಘು ಪ್ರಕರಣಗಳನ್ನು ದಾಖಲಿಸಿರುತ್ತಾರೆ.