ಶಿವಮೊಗ್ಗದ ತುಂಗಾನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಮಹಿಳೆಯ ಕೊಲೆ!

Woman murdered in Shimoga's Tunganagar police station limits

ಶಿವಮೊಗ್ಗದ ತುಂಗಾನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ  ಮಹಿಳೆಯ ಕೊಲೆ!

KARNATAKA NEWS/ ONLINE / Malenadu today/ Jun 18, 2023 SHIVAMOGGA NEWS

ಶಿವಮೊಗ್ಗ ನಗರದಲ್ಲಿ ಮಹಿಳೆಯೊಬ್ಬರ ಕೊಲೆಯಾಗಿದೆ.  ವಿಜಯ ನಗರದ 2 ನೇ ತಿರುವಿನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಕಮಲಮ್ಮ(54) ಕೊಲೆಯಾದ ಮಹಿಳೆ

ಎಕ್ಸಿಕ್ಯುಟಿವ್ ಎಂಜಿನಿಯರ್ ಆಗಿರುವ ಮಲ್ಲಿಕಾರ್ಜುನರವರ ಪತ್ನಿ ಕಮಲಮ್ಮ ಹತ್ಯೆಗೀಡಾಗಿರುವ ಮಹಿಳೆ. ಮಲ್ಲಿಕಾರ್ಜುನ್​ರವರು ಗೋವಾಕ್ಕೆ ತೆರಳಿದ್ರು. ಈ ವೇಳೆ ಘಟನೆ ನಡೆದಿದೆ. ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಬಗ್ಗೆ ವರದಿಯಾಗಿದೆ. ನಿನ್ನೆ ಸಂಜೆ  ಘಟನೆ ನಡೆದಿರುವ ಸಾಧ್ಯತೆ ಇದ್ದು ಸ್ಥಳಕ್ಕೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. 

ಗೋವಾಕ್ಕೆ ತೆರಳಿದ್ದ ಮಲ್ಲಿಕಾರ್ಜುನ್​ರವರು ಮನೆಗೆ ಕರೆ ಮಾಡಿದಾಗ ಫೋನ್ ಕಾಲ್ ಯಾರು ಸ್ವೀಕರಿಸಲಿಲ್ಲ. ಹೀಗಾಗಿ ಅನುಮಾನಗೊಂಡು ಅಕ್ಕಪಕ್ಕದವರಿಗೆ ಕರೆ ಮಾಡಿದ್ದಾರೆ. ಅಲ್ಲಿದ್ದವರು ಮನೆಗೆ ಹೋಗಿ ನೋಡಿದಾಗ ಬಾಗಿಲು ತೆರದ ಸ್ಥಿತಿಯಲ್ಲಿತ್ತು. ಒಳಗಡೆ ಮಹಿಳೆಯ ಕೊಲೆಯಾಗಿರುವುದು ಕಂಡು ಬಂದಿದೆ. 

ಸದ್ಯ ದಾವಣಗೆರೆಯಿಂದ ಎಫ್​ಎಸ್​ಎಲ್​ ತಂಡ ಬರುತ್ತಿದ್ದು,ಘಟನೆ ಸಂಬಂಧ ತುಂಗಾನಗರ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. 


BREAKING NEWS / ವಿಡಿಯೋ ಸ್ಕ್ಯಾಮ್​! ಶಿವಮೊಗ್ಗ ಪೊಲೀಸರಿಂದ ಓರ್ವ ಆರೋಪಿ ಬಂಧನ !

ಶಿವಮೊಗ್ಗ/ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಅಶ್ಲೀಲ ವಿಡಿಯೋ ಹಾಗೂ ಅದಕ್ಕೆ ಸಂಬಂಧಿಸಿದ ಆರೋಪದ ಕುರಿತಾಗಿ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಮೊನ್ನೆಯಿಂದ ಶಿವಮೊಗ್ಗದಲ್ಲಿ ಅಶ್ಲೀಲ ವಿಡಿಯೋಗಳ ತುಣುಕುಗಳು ಹರಿದಾಡುತ್ತಿತ್ತು. ಆ ದೃಶ್ಯಗಳಲ್ಲಿ ಇದ್ದ ವ್ಯಕ್ತಿಯು, ಹೆಣ್ಣುಮಕ್ಕಳಿಗೆ ಆಮೀಷವೊಡ್ಡಿ ಅವರನ್ನ ಸೆಕ್ಸ್ ವಿಚಾರದಲ್ಲಿ ಬಳಸಿಕೊಳ್ಳುತ್ತಿದ್ದ ಮತ್ತು ಕೃತ್ಯವನ್ನು ವಿಡಿಯೋ ಮಾಡಿಕೊಂಡು ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಎನ್​ಎಸ್​ಯುಐ ಸಂಘಟನೆ ತೀರ್ಥಹಳ್ಳಿ ಡಿವೈಎಸ್​ಪಿಯವರಿಗೆ ಮನವಿಯನ್ನು ಸಹ ಸಲ್ಲಿಸಿತ್ತು. 

ಇದರ ಬೆನ್ನಲ್ಲೆ ಇದೀಗ ಶಿವಮೊಗ್ಗ ಪೊಲೀಸರು,  ಓರ್ವ ಯುವಕನನ್ನ ಬಂಧಿಸಿದ್ದು, ಆತನನ್ನ ಕೋರ್ಟ್​ಗೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಬಗ್ಗೆ ಎಸ್​ಪಿ ಮಿಥುನ್​ ಕುಮಾರ್ ಪೊಲೀಸ್ ವಾಟ್ಸ್ಯಾಪ್​ ಮಾಹಿತಿ ಗ್ರೂಪ್​ನಲ್ಲಿ ಸಂದೇಶ ರವಾನಿಸಿದ್ದಾರೆ. 

 


ಇವತ್ತು  ಮತ್ತು ಜೂನ್​ 20 ರಂದು ಶಿವಮೊಗ್ಗ ಜಿಲ್ಲೆ ಈ ಭಾಗಗಳಲ್ಲಿ ಪವರ್​ ಕಟ್!? ಕಾರಣ? ಎಲ್ಲೆಲ್ಲಿ ಇರೋದಿಲ್ಲ ವಿದ್ಯುತ್? ವಿವರ ಓದಿ 

ಶಿವಮೊಗ್ಗ ಮೆಸ್ಕಾಂ ನಗರ ಉಪ ವಿಭಾಗಘಟಕ-3ರ ವ್ಯಾಪ್ತಿಯಲ್ಲಿ ಮಾರ್ಗ ಬದಲಾವಣೆ ಸ್ವಯಂ ಆರ್ಥಿಕ ಯೋಜನೆಯಡಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಇವತ್ತು ಅಂದರೆ,  ಜೂನ್​ 18 ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಭದ್ರಾವತಿಯ ಕೆಳಕಂಡ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 

ಎಲ್ಲೆಲ್ಲಿ?

 ಬಿ.ಎಚ್‌.ರಸ್ತೆ, ಮೀನುಗಾರ ಬೀದಿ, ಲೋಯರ್ ಹುತ್ತಾ, ಜನ್ನಾಪುರ, ಲಿಂಗಾಯತರ ಬೀದಿ, ಕುರುಬರ ಬೀದಿ, ಫಿಲ್ಟರ್ ಶೆಡ್ ಮತ್ತಿತರ ಬಡಾವಣೆಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

ಜೂ.20 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ಎಂ.ಆರ್.ಎಸ್ 220/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ  ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೊಳೆಹೊನ್ನೂರು ವಿವಿ ಕೇಂದ್ರ ಮತ್ತು ತಾವರೆಚಟ್ನಹಳ್ಳಿ ವಿವಿ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಈ ಕೆಳಕಂಡ ಗ್ರಾಮಗಳಲ್ಲಿ ಜೂ. 20 ರ ಬೆಳಗ್ಗೆ 09-30 ರಿಂದ ಸಂಜೆ 04-30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಹರಿದಾಡ್ತಿರುವ ಅಶ್ಲೀಲ ವಿಡಿಯೋ ಮೇಲೆ ಶಿವಮೊಗ್ಗ ಸೈಬರ್ ಪೊಲೀಸರ ಕಣ್ಣು! ಸಿಕ್ಕಿಬಿದ್ರೆ 5 ವರ್ಷ ಶಿಕ್ಷೆ! WhatsApp ಗ್ರೂಪ್ Admin ಮತ್ತು ಸದಸ್ಯರೇ ಹುಷಾರ್!

ಎಲ್ಲೆಲ್ಲಿ?

ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು, ಸಕ್ರೇಬೈಲು, ಹೊಳಲೂರು, ಮಡಿಕೆ ಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬೊಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮುತ್ತೋಡು, ರತ್ನಗಿರಿ ನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜ್, ಕೃಷಿ ಕಾಲೇಜ್, ಗೋಂಧಿಚಟ್ನಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ, ಬೀರನಕೆರೆ, ಬಿಕೋನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು, ಸುತ್ತಮುತ್ತಲಿನ ಜಲ್ಲಿ ಕ್ರಷರ್‍ಗಳು ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

10 ಸಾವಿರಕ್ಕೂ ಅಧಿಕ ಮಕ್ಕಳ ಅಮೃತ ನಡಿಗೆ! ಹೇಗಿತ್ತು ಗೊತ್ತಾ ಎನ್​ಇಎಸ್​ ಹಬ್ಬದ ಜಿಸ್ಟ್​!


3 ವಿಡಿಯೋಗಳ ಬಗ್ಗೆ ಕ್ರಮ ಡಿವೈಎಸ್​ಪಿಗೆ ಕಂಪ್ಲೆಂಟ್​! ವಿದ್ಯಾರ್ಥಿ ಮುಖಂಡನೊಬ್ಬನ ವಿರುದ್ಧ ಆರೋಪ! ಏನಿದು?



ಶಿವಮೊಗ್ಗ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಅಶ್ಲೀಲ ದೃಶ್ಯಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಮುಖಂಡನೊಬ್ಬನ ವಿರುದ್ದ ಎನ್​ಎಸ್​ಯುಐ ವಿದ್ಯಾರ್ಥಿ ಸಂಘಟನೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ನೀಡಿದೆ.  ವಿಡಿಯೋದಲ್ಲಿ ಎ.ಬಿ.ವಿ.ಪಿ ವಿಧ್ಯಾರ್ಥಿ ಸಂಘಟನೆಯ ಮುಖಂಡನಿದ್ದು,  ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಎನ್ ಎಸ್ ಯು ಐ  ಡಿವೈಎಸ್ ಪಿಯವರಿಗೆ ಮನವಿ ಮಾಡಿದೆ. 

 .

ಸಂಘಟನೆಗೆ ಸದಸ್ಯತ್ವ ಆಮಿಷ ತೋರಿಸಿ, ವೀಡಿಯೋ ಮಾಡಿ ಅದನ್ನು ದುರ್ಬಳಕೆ ಮಾಡಿರುವ ಆರೋಪವನ್ನು ಎನ್​ಎಸ್​ಯುಐ ಸಂಘಟನೆ ಸದಸ್ಯರು ಮಾಡಿದ್ದಾರೆ.  ಈ ಸಂಬಂಧ ಸ್ವಯಂ ದೂರು
ದಾಖಲಿಸಿಕೊಂಡು ತನಿಖೆ ನೆಡಸಬೇಕೆಂದು  ಮನವಿ ಮಾಡಿದ್ದಾರೆ. ಎನ್ ಎಸ್ ಯು ಐ ಅಮರಾನಾಥ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಸುಜಿತ್ ಸಾಲಿಯನ್, ಅಶ್ವಲ್ ಗೌಡ ಶರತ್ ಮಾಳೂರು ಸೇರಿದಂತೆ ಸಂಘಟನೆಯ ಸದಸ್ಯರು ಈ ವೇಳೆ ಹಾಜರಿದ್ದು ಡಿವೈಎಸ್​ಪಿಯವರಿಗೆ ಮನವಿ ಸಲ್ಲಿಸಿದ್ರು.