ಹರಿದಾಡ್ತಿರುವ ಅಶ್ಲೀಲ ವಿಡಿಯೋ ಮೇಲೆ ಶಿವಮೊಗ್ಗ ಸೈಬರ್ ಪೊಲೀಸರ ಕಣ್ಣು! ಸಿಕ್ಕಿಬಿದ್ರೆ 5 ವರ್ಷ ಶಿಕ್ಷೆ! WhatsApp ಗ್ರೂಪ್ Admin ಮತ್ತು ಸದಸ್ಯರೇ ಹುಷಾರ್!

Shimoga cyber police keeps an eye on pornographic video circulating in Shimoga Beware of WhatsApp Group Admin and members!

ಹರಿದಾಡ್ತಿರುವ ಅಶ್ಲೀಲ ವಿಡಿಯೋ ಮೇಲೆ ಶಿವಮೊಗ್ಗ ಸೈಬರ್ ಪೊಲೀಸರ ಕಣ್ಣು! ಸಿಕ್ಕಿಬಿದ್ರೆ  5 ವರ್ಷ ಶಿಕ್ಷೆ!  WhatsApp ಗ್ರೂಪ್ Admin ಮತ್ತು ಸದಸ್ಯರೇ ಹುಷಾರ್!

KARNATAKA NEWS/ ONLINE / Malenadu today/ Jun 18, 2023 SHIVAMOGGA NEWS

ಶಿವಮೊಗ್ಗ / ಜಿಲ್ಲೆಯಲ್ಲಿ ಮೊನ್ನೆಯಿಂದ ಹರಿದಾಡುತ್ತಿರುವ ಅಶ್ಲೀಲ ವಿಡಿಯೋಗಳ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಖಡಕ್ ವಾರ್ನಿಂಗ್ ನೀಡಿದೆ. ವಿದ್ಯಾರ್ಥಿ ಮುಖಂಡನೊಬ್ಬನಿಗೆ ಸಂಬಂಧಿಸಿದ ವಿಡಿಯೋಗಳು ಸಂತ್ರಸ್ತ ಹೆಣ್ಣುಮಕ್ಕಳ ಘನತೆ ದಕ್ಕೆ ತರುತ್ತಿದೆಯಲ್ಲದೆ, ಅಂತಹ ದೃಶ್ಯಗಳನ್ನು ಇನ್ನೊಬ್ಬರಿಗೆ ಷೇರ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಫಾರವರ್ಡ್ ಮಾಡುವುದು ಸೈಬರ್​ ಕ್ರೈಂ ಅಪರಾಧವಾಗಿದೆ.

ಸದ್ಯ ಹರಿಬಿಟ್ಟಿರುವ ದೃಶ್ಯಗಳು ತೀರಾ ಅತಿರೇಕ ಎನ್ನುವಷ್ಟರ ಮಟ್ಟಿಗೆ ಮೊಬೈಲ್​ಗಳಲ್ಲಿ ಹರಿದಾಡುತ್ತಿದೆ. ದೃಶ್ಯಗಳನ್ನು ಬ್ಲರ್ ಮಾಡದೇ, ಎಡಿಟ್ ಮಾಡದೇ , ಅಶ್ಲೀಲ ದೃಷ್ಟಿಯಿಂದಲೇ ವಿಡಿಯೋಗಳನ್ನು ಷೇರ್ ಮಾಡಲಾಗುತ್ತಿದೆ. ಅದರಲ್ಲಿಯು ವಾಟ್ಸ್ಯಾಪ್ ಗ್ರೂಪ್​ಗಳಲ್ಲಿ ಈ ಅಶ್ಲೀಲ ದೃಶ್ಯಗಳನ್ನು ಅಡ್ಮಿನ್​ಗಳಿಗೆ ಸಂಕಟ ತರುತ್ತಿದ್ದಾರೆ. ಹಾಗಾಗಿ ವಾಟ್ಸ್ಯಾಪ್​ ಗ್ರೂಪ್​ಗಳ ಅಡ್ಮಿನ್​ಗಳು ಈ ಬಗ್ಗೆ ಇನ್ನಿಲ್ಲದ ಎಚ್ಚರಿಕೆ ವಹಿಸುವುದು ಸೂಕ್ತ. ಇಲ್ಲವಾದರೆ, ಯಾರದ್ದೋ ತಪ್ಪಿಗೆ ಜೈಲಿಗೆ ಹೋಗಬೇಕಾದ ಸನ್ನಿವೇಶ ಎದುರಾಗುತ್ತದೆ. 

ಮಲ್ನಾಡ್​ ಶಿವಮೊಗ್ಗದಲ್ಲಿ ಮತ್ತೆ ತಲೆ ಎತ್ತಿತಾ ಸೆಕ್ಸ್​ ಸ್ಕ್ಯಾಂಡಲ್ ಕ್ರೈಂ​ ? ಆನ್​ಲೈನ್​ನಲ್ಲಿ ಯುವತಿಯರೇ ಎಚ್ಚರ? ಇದು ನಿಜನಾ?

ಪೊಲೀಸ್ ಇಲಾಖೆ ವಾರ್ನಿಂಗ್

ಇನ್ನೂ ಅಶ್ಲೀಲ ದೃಶ್ಯಗಳು ಶಿವಮೊಗ್ಗದಲ್ಲಿ ಹರಿದಾಡುತ್ತಿರುವುದು ಪೊಲೀಸ್ ಇಲಾಖೆಯ ಗಮನದಲ್ಲಿ ಇದೆ. ಶಿವಮೊಗ್ಗ ಸೈಬರ್​ ಕ್ರೈಂ ವಿಭಾಗದ ಈ ಬಗ್ಗೆ ಸೀಕ್ರೆಟ್ ಆಗಿ ಆಪರೇಷನ್​ ಆರಂಭಿಸಿದೆ. ವಿಡಿಯೋ ಎಲ್ಲಿಯದ್ದು? ಯಾರದ್ದು? ಯಾರದನ್ನು ಹರಿಬಿಟ್ಟಿದ್ದು? ಹೀಗೆ ವಿಡಿಯೋಗಳ ಮೂಲವನ್ನು ಹುಡುಕುತ್ತಿದೆ. ಅಲ್ಲದೆ ವಿಡಿಯೋಗಳ ಹಂಚಿಕೆಯ ಬಗ್ಗೆ ಎಚ್ಚರಿಕೆ ನೀಡಿದ್ದು ಪ್ರಕಟಣೆಯನ್ನು ಸಹ ನೀಡಿದೆ. 

ಪ್ರಕಟಣೆಯಲ್ಲಿ ಏನಿದೆ? / WhatsApp ಹಾಗೂ ಇತರೆ Social Media ವನ್ನು ದುರುಪಯೋಗ ಮಾಡುತ್ತಿರುವವರಿಗೆ ಎಚ್ಚರಿಕೆ:-

ಯಾವುದೇ ಮಹಿಳೆ, ಮಕ್ಕಳ ಪುರುಷರ ಅಶ್ಲೀಲ ಫೋಟೋ/ವಿಡಿಯೋವನ್ನು Social Media ಗಳಲ್ಲಿ, ಅದರಲೂ ಹೆಚ್ಚಿನದಾಗಿ WhatsApp ಮೂಲಕ ಪಸಾರ ಮಾಡುತ್ತಿರುವ ಬಗ್ಗೆ ಮಾಹಿತಿ ಇರುತ್ತದೆ. ಈ ರೀತಿ ಪ್ರಸಾರ ಮಾಡುವುದು, ಪ್ರಸಾರ ಮಾಡಿರುವುದನ್ನು ಸ್ಟೋರ್ ಮಾಡುವುದು, ಕಲಂ 67(E) IT ACT ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು 05 ವರ್ಷಗಳ ಕಾರಾಗೃಹ ಹಾಗೂ ಜುಲ್ಮಾನೆಯ ಶಿಕ್ಷೆಯನ್ನು ವಿಧಿಸಬಹುದಾಗಿರುತ್ತದೆ. ಅಂತಹ ಚಟುವಟಿಕೆಯ ಮೇಲೆ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯವರು  ನಿಗಾವಣೆ ಇಡಲಾಗಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ WhatsApp ಗ್ರೂಪ್ Admin ರವರು ಎಚ್ಚರ ವಹಿಸುವುದು. 

ಪೊಲೀಸ್ ಇನ್ಸ್ ಪೆಕರ್ ಸಿ.ಇ.ಎನ್ ಕ್ರೈ೦ ಪೊಲೀಸ್ ಠಾಣೆ ಶಿವಮೊಗ