ಆನ್ಲೈನ್ ವಂಚನೆಯ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಎಚ್ಚರಿಸುತ್ತಲೇ ಬಂದಿದೆ. ಅಲ್ಲದೆ ಈ ಸಂಬಂಧ ಮಾಧ್ಯಮಗಳು ಸಹ ನಡೆಯುತ್ತಿರುವ ಘಟನೆಗಳ ವರದಿ ಮೂಲಕ ಜಾಗೃತಿ ಮೂಡಿಸುತ್ತಿವೆ. ಇನ್ನೂ ಜನರು ಸಹ ಜಾಗೃತರಾಗುತ್ತಿದ್ದಾರೆ. ವಿಪರ್ಯಾಸವೆಂದರೆ, ಇದರ ಜೊತೆಗೆ ಮೋಸದ ಜಾಲ ಕೂಡ, ಇನ್ನಷ್ಟು ಮತ್ತಷ್ಟು ಶಾರ್ಪ್ ಆಗುತ್ತಿದೆ. ಇದಕ್ಕೆ ಸಾಕ್ಷಿ ಶಿವಮೊಗ್ಗದಲ್ಲಿ ನಡೆದ ಘಟನೆ
ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ
ಶಿವಮೊಗ್ಗದ ನಿವಾಸಿಯೊಬ್ಬರು ಆನ್ಲೈನ್ ಶಾಪಿಂಗ್ ಸಂಸ್ಥೆಯ (Online transactions) ಮೂಲಕ ಆಫರ್ ನೋಡಿ ವಸ್ತುವೊಂದನ್ನ ಬುಕ್ ಮಾಡಿದ್ದರಂತೆ. ಮನೆಗೆ ಡೆಲಿವರಿ ಆದಾಗ, ಖರೀದಿಸಿದ್ದ ವಸ್ತು ಜೊತೆ ಆಫರ್ನಲ್ಲಿ ನೀಡಿದ್ದ ವಸ್ತು ಬಂದಿರಲಿಲ್ಲ. ಹೀಗಾಗಿ ನಿವಾಸಿಯು, ಡೆಲಿವರಿ ಬಾಯ್ ಬಳಿ ವಿಚಾರಿಸಿದ್ಧಾರೆ. ಅವರು ಕಸ್ಟಮರ್ ಕೇರ್ನ್ನ ವಿಚಾರಿಸಿ ಎಂದಿದ್ಧಾರೆ.
ದಿನದ ರಾಜಕಾರಣದ ಸುದ್ದಿ : ಮೋದಿ & ಬೊಮ್ಮಾಯಿ ವಿರುದ್ಧ ದೇವರಿಗೆ ಉಯಿಲು ಕೊಡಲಿ ಹರತಾಳು ಹಾಲಪ್ಪ
ಹೀಗಾಗಿ ಆ ನಿವಾಸಿಯು ಕಸ್ಟಮರ್ ಕೇರ್ಗೆ ಕರೆಮಾಡಿ ವಿಚಾರಿಸಿದ್ದಾರೆ. ಈ ವೇಳೆ ಆ ಕಡೆಯಿಂದ ಫೋನ್ ಕರೆ ಸ್ವೀಕರಿಸಿದವರು, ಹೌದು ಮಿಸ್ಟೇಕ್ ಆಗಿದೆ, ನಿಮ್ಮ ಹಣವನ್ನು ರಿಫಂಡ್ ಮಾಡುತ್ತೇವೆ ಎಂದು, ಅದಕ್ಕಾಗಿ ಬ್ಯಾಂಕ್ ಡಿಟೇಲ್ಸ್ ಕೇಳಿ, ಓಟಿಪಿ ಬರುತ್ತೆ ಕೊಡಿ ಎಂದಿದ್ದಾರೆ. ಹೀಗೆ ಓಟಿಪಿ ಕೊಟ್ಟಿದ್ದರಿಂದ, ಕೆಲವೇ ಹೊತ್ತಿನಲ್ಲಿ ಆ ನಿವಾಸಿಯ ಅಕೌಂಟ್ನಿಂದ ಸುಮಾರು 50 ಸಾವಿರ ರೂಪಾಯಿವರೆಗೂ ಡ್ರಾ ಆಗಿದೆ.
ಮಲೆನಾಡು ಟುಡೆ ಮಾಹಿತಿ : ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್ ನ್ಯೂಸ್ / ದಾವಣಗೆರೆ, ಆನವೇರಿ, ಮಲೆಬೆನ್ನೂರು, ಹರಿಹರ ಕೃಷಿಕರಿಗೆ ಅನುಕೂಲ
ಇಲ್ಲಿ ನಿವಾಸಿಯು ಕಸ್ಟಮರ್ ಕೇರ್ ನಂಬರ್ನ್ನು ಆನ್ಲೈನ್ನಲ್ಲಿ ಸರ್ಚ್ ಮಾಡುವಾಗ, ಡೂಪ್ಲಿಕೇಟ್ ಸಂಸ್ಥೆಯ ನಂಬರ್ ಸಿಕ್ಕಿದೆ. ಈ ಮಧ್ಯೆಯು ನಿವಾಸಿಯು ಜಾಗೃತೆ ವಹಿಸಿದ್ದರು. ಆದರೆ ಕಸ್ಟಮರ್ ಕೇರ್ ಹೆಸರಿನ ಕರೆಯಲ್ಲಿದ್ದವರು, ನಿವಾಸಿಯನ್ನು ನಂಬಿಸಿ ಓಟಿಪಿ (OTP fraud) ಪಡೆದಿದ್ಧಾರೆ ಎನ್ನಲಾಗಿದೆ. ನಂಬಿದ್ದರ ಫಲವಾಗಿ ನಿವಾಸಿಯ ಬ್ಯಾಂಕ್ ಅಕೌಂಟ್ನಲ್ಲಿದ್ದ ಹಣ ವಿತ್ ಡ್ರಾ ಆಗಿದೆ.
ಸಾರ್ವಜನಿಕರ ಗಮನಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ/ ಈ ಎರಡು ದಿನ ಮೈಸೂರು-ತಾಳಗಪ್ಪ ಟ್ರೈನ್ನಲ್ಲಿ ಈ ವ್ಯವಸ್ಥೆಯಿದೆ/ ವಿವರ ಇಲ್ಲಿದೆ
ಈ ಸಂಬಂಧ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದೂರು ಕೊಡಲು ನಿವಾಸಿಯು ಮುಂದಾಗಿದ್ದಾರೆ. ಆದರೆ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್ ನೀಡಲು ಸಾದ್ಯವಾಗಿಲ್ಲ ಇದಕ್ಕೆ ಕಾರಣ ಬ್ಯಾಂಕ್ಗಳಿಗೆ ಇವತ್ತು ರಜೆ. ಹೀಗಾಗಿ ಕಂಪ್ಲೆಂಟ್ ಕೊಡಲು ಇನ್ನೂ ಸಾಧ್ಯವಾಗಿಲ್ಲವಂತೆ. ಸದ್ಯ ಈ ಬಗ್ಗೆ ಮಾಹಿತಿ ತಿಳಿದ ವಿದ್ಯಾರ್ಥಿ ಸಂಘಟನೆಯೊಂದು ವಿಚಾರ ತಿಳಿದು ಜಾಗೃತಿ ಮೂಡಿಸುವ ಸಲುವಾಗಿ ಟುಡೆ ತಂಡಕ್ಕೆ ಮಾಹಿತಿ ನೀಡಿದೆ
ಇದನ್ನು ಸಹ ಓದಿ : ಹರತಾಳು ಹಾಲಪ್ಪರವರು ಶರಾವತಿ ಸಂತ್ರಸ್ತರಿಗಾಗಿ ಧರ್ಮಸ್ಥಳದಲ್ಲಿ ನ್ಯಾಯ ಕೇಳಲು ಹೋಗಿದ್ದಕ್ಕೆ ಕಾಂತಾರ ಮಹಿಮೆ ಕಾರಣ
ಶಿವಮೊಗ್ಗದ ನಾಗರಿಕರು ಇಂತಹ ಘಟನೆಗಳಿಂದ ಇನ್ನಷ್ಟು ಜಾಗೃತಿ ವಹಿಸುವುದು ಉತ್ತಮ. ಆನಲೈನ್ನಲ್ಲಿ ಏನೇ ಖರೀದಿಸಿದರೂ ಅದಕ್ಕೆ ಪೂರಕವಾಗಿ ಬೇಕಿರುವ ಸುರಕ್ಷತೆಯನ್ನು ವಹಿಸಿ, ಅಲ್ಲದೆ ಆಗಾಗ ಸುರಕ್ಷತಾ ಪಾಸ್ವರ್ಡ್ಗಳನ್ನು ಬದಲಾಯಿಸುವುದು ಒಳ್ಳೆಯದು. ಎಲ್ಲದಕ್ಕಿಂತ ಹೆಚ್ಚಾಗಿ ಅನಗತ್ಯವಾಗಿ ಬರುವ ಮೆಸೇಜ್ಗಳನ್ನು ಕ್ಲಿಕ್ ಮಾಡಬೇಡಿ, ಮೇಲಾಗಿ ಯಾವ ಕಾರಣಕ್ಕೂ ಇನ್ನೊಬ್ಬರಿಗೆ ಒಟಿಪಿಯನ್ನು ನೀಡಬೇಡಿ, ಬ್ಯಾಂಕ್ಗಳೇ ಆಗಲಿ, ಕಂಪನಿಗಳೇ ಆಗಲಿ ನಿಮ್ಮ ಓಟಿಪಿಯನ್ನು ಕೇಳುವುದಿಲ್ಲ. ಇಂತಹ ಘಟನೆಗಳಲ್ಲಿ ಅಪರಾಧಿಗಳನ್ನು ಹಿಡಿದು ಸಂತ್ರಸ್ತರಿಗೆ ನ್ಯಾಯ ಕೊಡಿಸುವುದು ಪೊಲೀಸ್ ಇಲಾಖೆಗೂ ಸವಾಲಿನ ಕೆಲಸವಾಗುತ್ತದೆ. ಹಾಗಾಗಿ ಜಾಗೃತೆ ವಹಿಸುವುದೊಂದೇ ಸರಿಯಾದ ದಾರಿಯಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
— SP Shivamogga (@Shivamogga_SP) December 24, 2022
