ಶಿವಮೊಗ್ಗಕ್ಕೆ ಸ್ವಾದ್ವಿ ಪ್ರಜ್ಞಾಸಿಂಗ್​/ ಬೃಹತ್​ ಶೋಭಾಯಾತ್ರೆಗೆ ಹಿಂದೂ ಜಾಗರಣ ವೇದಿಕೆ ಸಿದ್ಧತೆ/ ಸಮ್ಮೆಳನದ ಫುಲ್​ ಡಿಟೇಲ್ಸ್ ಇಲ್ಲಿದೆ ಓದಿ

ಇನ್ನೂ ಇವತ್ತು ಶೋಭಾಯಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್​ ಮಾಡಿದ್ದಾರೆ. ಅಲ್ಲದೆ ಶುಷ್ಕ ದಿನ ಘೋಷಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಲಭ್ಯವಾಗಿಲ್ಲ.

ಶಿವಮೊಗ್ಗಕ್ಕೆ ಸ್ವಾದ್ವಿ ಪ್ರಜ್ಞಾಸಿಂಗ್​/ ಬೃಹತ್​ ಶೋಭಾಯಾತ್ರೆಗೆ ಹಿಂದೂ ಜಾಗರಣ ವೇದಿಕೆ ಸಿದ್ಧತೆ/ ಸಮ್ಮೆಳನದ ಫುಲ್​ ಡಿಟೇಲ್ಸ್ ಇಲ್ಲಿದೆ ಓದಿ

ಶಿವಮೊಗ್ಗದಲ್ಲಿ ಇವತ್ತು ಹಿಂದು ಜಾಗರಣಾ ವೇದಿಕೆಯ ದಕ್ಷಿಣ ಕರ್ನಾಟಕದ ವತಿಯಿಂದ 3ನೇ  ತ್ರೈ ವಾರ್ಷಿಕ ಸಮ್ಮೇಳನ ನಡೆಯಲಿದೆ. 

ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತುಹೇಗಾಯ್ತುವಿವರ ಓದಿ

ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಕೇಸರಿಮಯವಾಗಿದೆ, ಎಲ್ಲೆಡೆ ಕೇಸರಿ ಧ್ವಜ, ಬ್ಯಾನರ್, ಬಂಟಿಂಗ್ಸ್​, ಹಾಗೂ ಕಟೌಟ್​ಗಳನ್ನು ಹಾಕಲಾಗಿದೆ. ಇನ್ನೂ ಇವತ್ತು ಶೋಭಾಯಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್​ ಮಾಡಿದ್ದಾರೆ. ಅಲ್ಲದೆ ಶುಷ್ಕ ದಿನ ಘೋಷಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಲಭ್ಯವಾಗಿಲ್ಲ. 

ದಿನದ ರಾಜಕಾರಣದ ಸುದ್ದಿ : ಮೋದಿ & ಬೊಮ್ಮಾಯಿ ವಿರುದ್ಧ ದೇವರಿಗೆ ಉಯಿಲು ಕೊಡಲಿ ಹರತಾಳು ಹಾಲಪ್ಪ

ಇನ್ನೂ ಸಮ್ಮೇಳನ ಹಾಗೂ ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದ ಅಮಿರ್ ಅಹಮದ್​ ಸರ್ಕಲ್​ನಲ್ಲಿ ಕೇಸರಿ ಬಣ್ಣಗಳಿಂದ ಶೃಂಗರಿಸಲಾಗಿದೆ. ಇನ್ನೂ ನೆಹರು ರೋಡ್​ನ ಉದ್ದಕ್ಕೂ, ವಿವಿಧ ಘಟನೆಗಳಲ್ಲಿ ಮೃತ ಪಟ್ಟ ಹಿಂದೂ ಯುವಕರ ಫೋಟೋಗಳ ಜೊತೆ ಅಡಿಬರಹವಿರುವ ಬ್ಯಾನರ್​ಗಳನ್ನ ಹಾಕಲಾಗಿದೆ. ಗೋಪಿ ಸರ್ಕಲ್​ನಲ್ಲಿ ವಿಶೇಷವಾಗಿ ರಂಗೋಲಿಯನ್ನು ಬಿಡಿಸಲಾಗಿದ್ದು, ರಂಗೋಲಿ ಜನರ ಗಮನ ಸೆಳೆಯುತ್ತಿದೆ. 

ಮಲೆನಾಡು ಟುಡೆ ಮಾಹಿತಿ : ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್​ ನ್ಯೂಸ್ / ದಾವಣಗೆರೆಆನವೇರಿಮಲೆಬೆನ್ನೂರುಹರಿಹರ ಕೃಷಿಕರಿಗೆ ಅನುಕೂಲ

3 ವರ್ಷಕ್ಕೊಮ್ಮೆ ನಡೆಯುವ ಈ ಪ್ರಾಂತ ಸಮ್ಮೇಳನ ಈ ಸಲ ಶಿವಮೊಗ್ಗದಲ್ಲಿ ನಡೆಯುತ್ತಿದ್ದು,  ಒಟ್ಟು 18 ಜಿಲ್ಲೆಗಳಿಂದ  ಸಾವಿರಾರು ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಮಾವೇಶ ನಡೆಯುವ ಎನ್​ಇಎಸ್​ ಮೈದಾನದಲ್ಲಿ ಈಗಾಗಲೇ ಸಕಲ ವ್ಯವಸ್ಥೆ ಮಾಡಲಾಗಿದ್ದು ಬೃಹತ್​ ವೇದಿಕೆಯನ್ನು ನಿರ್ಮಿಸಲಾಗಿದೆ. 

ಸಾರ್ವಜನಿಕರ ಗಮನಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ/ ಈ ಎರಡು ದಿನ ಮೈಸೂರು-ತಾಳಗಪ್ಪ ಟ್ರೈನ್​ನಲ್ಲಿ ಈ ವ್ಯವಸ್ಥೆಯಿದೆ/ ವಿವರ ಇಲ್ಲಿದೆ

ಏಷ್ಟೊತ್ತಿಗೆ ಏನೇನು ಕಾರ್ಯಕ್ರಮ  

  • ಇವತ್ತು ಬೆಳಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದ ಹಿಂಭಾಗದ ಎನ್‌ಐಎಸ್‌ ಕಾಲೇಜು ಮೈದಾನದಲ್ಲಿ ಸಮ್ಮೇಳನ ಉದ್ಘಾಟನೆಯಾಗಲಿದೆ.
  • ಬಳಿಕ ಮಧ್ಯಾಹ್ನದ ವರೆಗೆ ವಿವಿಧ ಗೋಷ್ಠಿಗಳು ಸಮ್ಮೇಳನದಲ್ಲಿ ನಡೆಯಲಿದೆ/ ಹಿಂದು ಸಮಾಜ ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರಗಳ ಕುರಿತಾಗಿ ಚರ್ಚೆ ನಡೆಯಲಿದೆ. 
  • ಇನ್ನೂ  2.30 ಕ್ಕೆ ಎನ್​ಇಎಸ್​ ಮೈದಾನದಿಂದ ಬೃಹತ್​ ಶೋಭಾಯಾತ್ರೆಯು ನಡೆಯಲಿದೆ. 
  • ಈ ಶೋಭಾಯಾತ್ರೆಯು  ಎನ್ ಇಎಸ್ ಮೈದಾನದಿಂದ ಕೃಷ್ಣಕೆಫೆ ರಸ್ತೆಗೆ ಬಂದು, ಅಲ್ಲಿಂದ ಗಾಂಧಿಬಜಾರ್, ನೆಹರೂ ರಸ್ತೆ ಮೂಲಕ ಮತ್ತೆ ಎನ್ ಇಎಸ್ ಮೈದಾನ ಸೇರಲಿದೆ
  • ಸಂಜೆ 4.30  ಪ್ರಾಂತೀಯ ಕಾರ್ಯಕರ್ತರ ಸಮಾಗಮ ಹಾಗೂ ಬೃಹತ್ ಸಭೆ ನಡೆಯಲಿದೆ. 

ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ರಾಮಮನೋಹರ ಶಾಂತವೇರಿ ಭಾಗವಹಿಸಲಿದ್ದಾರೆ. ಭೋಪಾಲ್ ಸಂಸದರಾದ ಸಾದ್ವಿಪ್ರಜ್ಞಾಸಿಂಗ್ ಫಾಕೂರ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್‌ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ 

ಶಿವಮೊಗ್ಗಕ್ಕೆ ಸಾದ್ವಿ ಪ್ರಜ್ಞಾಸಿಂಗ್​

ಇವತ್ತು ಪ್ರಾಂತ ಸಮ್ಮೇಳನದ ಹಿನ್ನೆಲೆಯಲ್ಲಿ ಸ್ವಾದ್ವಿ ಪ್ರಜ್ಞಾಸಿಂಗ್​ ವಿಶೇಷ ವಿಮಾನದಲ್ಲಿ ಬಂದಳಿದಿದ್ದು, ಶಿವಮೊಗ್ಗಕ್ಕೆ ಬರುತ್ತಿದ್ದಾರೆ, ಈ ಸಂಬಂಧ ಅವರು ಏರ್​ಪೋರ್ಟ್​ನಿಂದ ಹೊರಕ್ಕೆ ಬರುತ್ತಿರುವ ವಿಡಿಯೋ ಇಲ್ಲಿದೆ ನೋಡಿ