ಕ್ರಿಕೆಟ್ ಪಂದ್ಯಾವಳಿ ವೇಳೆ ಶಿವಮೊಗ್ಗ ಜಿಲ್ಲೆ ಆಟಗಾರ ಹೋಯ್ಸಳ ಸಾವು! ಕ್ರಿಕೆಟ್ ಲೋಕದ ಸಂತಾಪ!

Shimoga district player Hoysala dies during cricket tournament Condolences to the cricketing world!

ಕ್ರಿಕೆಟ್ ಪಂದ್ಯಾವಳಿ ವೇಳೆ ಶಿವಮೊಗ್ಗ ಜಿಲ್ಲೆ ಆಟಗಾರ ಹೋಯ್ಸಳ ಸಾವು! ಕ್ರಿಕೆಟ್ ಲೋಕದ ಸಂತಾಪ!
Shimoga district player Hoysala

SHIVAMOGGA  Feb 25, 2024 Shimoga district player Hoysala ಕ್ರಿಕೆಟ್ ಜಗತ್ತಿನಲ್ಲಿ ಬೆಳಗಬೇಕಿದ್ದ ಶಿವಮೊಗ್ಗ ಜಿಲ್ಲೆ ಯುವಕನೊಬ್ಬನ್ನ ಕಳೆದುಕೊಂಡಿದ್ದೇವೆ. ಕ್ರಿಕೆಟ್ ಆಟದ ವೇಳೆಯಲ್ಲಿಯೇ ಹೃದಯಾಘಾತವಾಗಿ ಸಾವನ್ನಪ್ಪಿದ ನಮ್ಮೂರ ಯುವಕನ ಸಾವು ಕೇವಲ ನಿಧನವಾರ್ತೆಯಾಗಿ ಪ್ರಕಟವಾಗಿದ್ದು ಕ್ರಿಕೆಟ್ ಪ್ರೇಮಿಗಳಲ್ಲಿಯು ನಿರಾಸೆ ಮೂಡಿಸಿದೆ. 

Death of the Hoysalas

 

ಕರ್ನಾಟಕದ ವೇಗದ ಬೌಲರ್ ಕೆ.ಹೊಯ್ಸಳ (35) ಕ್ರಿಕೆಟ್ ಪಂದ್ಯಾವಳಿ ವೇಳೆ  ಬೆಂಗಳೂರಿನಲ್ಲಿ ಹೃದಯಾಘಾತದಿಂದ ಈ ಗುರುವಾರ ನಿಧನರಾಗಿದ್ದಾರೆ. ಅವರು ವಿಐಎಸ್​ಎಲ್​ ನಿವೃತ್ತ  ಉದ್ಯೋಗಿಯಾಗಿರುವ ಡಾಕಪ್ಪರವರ ಅವರ ಪುತ್ರ. ಕೆ.ಹೊಯ್ಸಳ ಬೆಂಗಳೂರಿನ ಅಕೌಂಟ್​ ಜನರಲ್ ಆಫೀಸ್‌ನಲ್ಲಿ ಆಡಿಟರ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Death of the Hoysalas

 

ಬೆಂಗಳೂರಿನ .ಎಂ.ಜಿ.ರಸ್ತೆಯ ಆರ್​ಎಸ್​ಐ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದಕ್ಷಿಣ ವಲಯದ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ಪರವಾಗಿ ಆಟವಾಡಿ ಗೆದ್ದ  ಬಳಿಕ ಹೋಯ್ಸಳ ಡ್ರೆಸ್ಸಿಂಗ್ ರೂಂನಲ್ಲಿ ಕುಸಿದು ಬಿದ್ದಿದ್ದಾರೆ   ಕೂಡಲೇ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕೊಂಡೊಯ್ದಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ. 

Death of the Hoysalas

 

ಭದ್ರಾವತಿಯಲ್ಲಿ ಕ್ರಿಕೆಟ್​ ಆಟ ಆರಂಭಿಸಿದ್ದ ಹೋಯ್ಸಳ ಅಲ್ಲಿಂದ ಚಿಕ್ಕಮಗಳೂರಿಗೆ ಹೈ ಎಜುಕೇಷನ್​ ಓದಲು ತೆರಳುತ್ತಾರೆ. ರಾಣಾಸ್ ಸ್ಫೋಟ್ಸ್​ ಕ್ಲಬ್​ನಲ್ಲಿ ಕ್ರಿಕೆಟ್ ಮುಂದುವರಿಸಿದ ಅವರು, ಶಿವಮೊಗ್ಗ ಜೋನ್​ನಲ್ಲಿ ಕ್ರಿಕೆಟ್ ಆಡಿದ್ದರು. ಅಲ್ಲಿಂದ ಬೆಂಗಳೂರು ತೆರಳಿ ಅಂಡರ್​ 23 ಸ್ಟೇಟಸ್​ನಲ್ಲಿ ಆಟವಾಡಿದ್ದರು. ಕರ್ನಾಟಕದ ಜೂನಿಯರ್ ತಂಡದ ಪರ ಆಡಿದ ಹೊಯ್ಸಳರವರು  ಕೆಪಿಎಲ್‌ನಲ್ಲಿ ಶಿವಮೊಗ್ಗ ಬಳ್ಳಾರಿ  ತಂಡಗಳನ್ನು ಸಹ  ಪ್ರತಿನಿಧಿಸಿದ್ದರು. ಆನಂತರ ಎಜಿಎಸ್​ ಗ್ರೂಪ್ ಸೇರಿಕೊಂಡಿದ್ದರು. 

Death of the Hoysalas

 

ಕ್ರಿಕೆಟ್​ನಲ್ಲಿ ಉತ್ತಮ ಹೆಸರು ಮಾಡಿದ್ದ ಎಲ್ಲರೊಂದಿಗೂ ಸ್ನೇಹದಿಂದ ಇದ್ದರು, ಅಲ್ಲದೆ ಅವರು ಟೀಂನಲ್ಲಿದ್ದರೇ ಮ್ಯಾಚ್​ ಗೆಲುವು ಪಕ್ಕಾ ಎಂಬಂತ ಮಾತು ಕ್ರಿಕೆಟ್ ಟೀಂವಲಯದಲ್ಲಿತ್ತು. ಮೂಲತಃ ತೀರ್ಥಹಳ್ಳಿ ಆರಗದ ಕಡಗದ್ದೆಯವರಾದ ಹೋಯ್ಸಳರವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆದಿದೆ. 

Death of the Hoysalas

 

ಇನ್ನೂ ಮೃತರಿಗೆ ಶೃದ್ಧಾಂಜಲಿ ಸಲ್ಲಿಸಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶೃದ್ಧಾಂಜಲಿ ಸಲ್ಲಿಸಲಾಗಿದೆ. ನಾಳೆ ನಡೆಯಲಿರುವ ಪಂದ್ಯಗಳಲ್ಲಿಯು ಮೃತರಿಗೆ ಶೃದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಇನ್ನೂ ಬಗ್ಗೆ ಮಾತನಾಡಿರುವ ಐಡಿಯಲ್​ ಗೋಪಿಯವರು, ಹೋಯ್ಸಳ ನಿಜಕ್ಕೂ ಅದ್ಭುತ ಆಟಗಾರ, ಆತನ ಕ್ರಿಕೆಟ್ ಬೆಳವಣಿಗೆ ಕಂಡು ಸಾಕಷ್ಟು ಖುಷಿ ಪಟ್ಟಿದ್ದೆ. ಆತನ ಅಗಲಿಗೆ ನೋವು ತಂದಿದೆ. ಅವರ ಕುಟುಂಬಕ್ಕೆ ಹೋಯ್ಸಳರ  ಅಗಲಿಗೆಯ ನೋವು ತಡೆಯುವ ಶಕ್ತಿ ದೇವರು ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.