ಜುಲೈ ಒಂದರಿಂದ ಕಡಿಮೆಯಾಗುತ್ತಾ ಮದ್ಯದ ರೇಟು? ಹೀಗೊಂದು ಗುಡ್‌ ನ್ಯೂಸ್‌

possibility of liquor prices decreasing in Karnataka starting from July 1st.

ಜುಲೈ ಒಂದರಿಂದ ಕಡಿಮೆಯಾಗುತ್ತಾ ಮದ್ಯದ ರೇಟು? ಹೀಗೊಂದು ಗುಡ್‌ ನ್ಯೂಸ್‌

SHIVAMOGGA | MALENADUTODAY NEWS | Jun 20, 2024  ಮಲೆನಾಡು ಟುಡೆ 

ಬೆಲೆ ಏರಿಕೆಯ ಸುದ್ದಿಗಳ ನಡುವೆ ಬರುವ ಜುಲೈ ಒಂದರಿಂದ ಮದ್ಯದ ಬೆಲೆ ಕಡಿಮೆಯಾಗುವ ಸುಳಿವಿನ ಬಗ್ಗೆ ರಾಜ್ಯಮಟ್ಟದ ಪತ್ರಿಕೆಗಳು ವರದಿ ಮಾಡಿವೆ. ವರದಿಗಳ ವಿವರ ಹೀಗಿದೆ. ದುಬಾರಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಸರ್ಕಾರ ಇಳಿಕೆ ಮಾಡಲಿದೆಯಂತೆ. ಬರುವ ಜುಲೈ 1ರಿಂದ ಭಾರಿ ಬೆಲೆಯ ಬ್ರ್ಯಾಂಡ್‌ಗಳ ಮದ್ಯದ ದರ ಅಗ್ಗವಾಗಲಿದೆ ಎಂದು ಹೇಳಲಾಗುತ್ತಿದೆ. 

ನೆರೆಯ ರಾಜ್ಯಗಳ ಮದ್ಯದ ದರಗಳಿಗೆ ಪೂರಕವಾಗಿ ಮದ್ಯದ ದರ ಪರಿಷ್ಕರಣೆ ಮಾಡುವುದಾಗಿ ಈ ಹಿಂದೆ ಬಜೆಟ್‌ನಲ್ಲಿ ಹೇಳಲಾಗಿತ್ತು. ಅದನ್ನ ಇದೀಗ  ಈಗ ಜಾರಿಗೆ ತರಲಾಗುತ್ತಿದೆ ಎನ್ನಲಾಗಿದೆ.  2023ರ ಜುಲೈನಲ್ಲಿ ಭಾರತೀಯ ಉತ್ಪಾದಿತ ಮದ್ಯದ ಮೇಲಿನ ಎಇಡಿ ಅಬಕಾರಿ ತೆರಿಗೆ ಹೆಚ್ಚಳ  ಮಾಡಲಾಗಿತ್ತು. ಆನಂತರ  2024ರ ಜನವರಿಯಲ್ಲಿ ಬಿಯರ್‌ ಮೇಲಿನ ಎಇಡಿ ಹೆಚ್ಚಿಸಲಾಗಿತ್ತು. ಇದೀಗ ಈ ತೆರಿಗೆ ಕಡಿಮೆ ಮಾಡುವ ಮಾತುಕತೆಗಳು ನಡೆಯುತ್ತಿದೆ.  

possibility of liquor prices decreasing in Karnataka starting from July 1st. plans to reduce the additional excise duty on expensive liquor brands. This move aims to align liquor prices