Beer Price Rise in karnataka /ಮದ್ಯದ ಬೆಲೆ ಮತ್ತೆ ಹೆಚ್ಚಳ! ದಕ್ಷಿಣ ಭಾರತದಲ್ಲೀಗ ರಾಜ್ಯದಲ್ಲಿಯೇ ಲಿಕ್ಕರ್ ದುಬಾರಿ?ರೇಟು ಎಷ್ಟು

Beer Price Rise in karnataka Set to Rise Again! How much is the rate

Beer Price Rise in karnataka /ಮದ್ಯದ ಬೆಲೆ ಮತ್ತೆ ಹೆಚ್ಚಳ! ದಕ್ಷಿಣ ಭಾರತದಲ್ಲೀಗ ರಾಜ್ಯದಲ್ಲಿಯೇ ಲಿಕ್ಕರ್ ದುಬಾರಿ?ರೇಟು ಎಷ್ಟು
image used for representational purpose only

SHIVAMOGGA  |  Jan 24, 2024  |   Beer Price Rise in karnataka ರಾಜ್ಯ ಸರ್ಕಾರ ಪುನಃ ಮದ್ಯದ ದರ ಏರಿಸುವ ಸಲುವಾಗಿ ಪ್ರಯತ್ನ ಆರಂಭಿಸಿದೆ. ಕೇವಲ ಏಳು ತಿಂಗಳಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ಸರ್ಕಾರವು ಬಿಯರ್ ಮೇಲಿನ ಸುಂಕವನ್ನು ಶೇಕಡಾ 10 ರಷ್ಟು ಹೆಚ್ಚಿಸಲು ಸಜ್ಜಾಗಿದೆ

ಮುಂದಿನ ತಿಂಗಳು ಫೆಬ್ರವರಿ ಮೊದಲ ವಾರದಿಂದ ಈ ಹೊಸದರ  ಜಾರಿಗೆ ಬರುವ ಸಾಧ್ಯತೆಯಿದೆ. ಈ ಸಂಬಂಧ ಜನವರಿ 27ರೊಳಗೆ ಆಕ್ಷೇಪಣೆಯನ್ನು ಆಹ್ವಾನಿಸಲಾಗಿದೆ. ಆ ಬಳಿಕ  ಅಬಕಾರಿ ಇಲಾಖೆ  ಹೊಸ ದರವನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂದು ರಾಜ್ಯಮಟ್ಟದ ಮಾಧ್ಯಮಗಳು ವರದಿ ಮಾಡಿವೆ. ಈ ಸಂಬಂಧ  ಹೆಚ್ಚುವರಿ ಅಬಕಾರಿ ಆಯುಕ್ತ ಟಿ.ನಾಗರಾಜಪ್ಪ ಮಾಧ್ಯಮಗಳಿಗೆ ಮಾಹಿತಿ ನೀಡಿದ್ಧಾರೆ. 

ಹೆಚ್ಚುವರಿ ಅಬಕಾರಿ ಸುಂಕದ additional excise duty ಹಿನ್ನೆಲೆಯಲ್ಲಿ 650 ಎಂಎಲ್ ಬಿಯರ್ ಬಾಟಲ್​ವೊಂದಕ್ಕೆ ಕನಿಷ್ಟ 8 ರಿಂದ 10 ರೂ.ಗೆ ಹೆಚ್ಚಿಸುವ ನಿರೀಕ್ಷೆಯಿದೆ. ಇನ್ನೂ ಈ ಮೂಲಕ ಪ್ರತಿ ತಿಂಗಳು ರಾಜ್ಯ ಸರ್ಕಾರ 20 ಕೋಟಿ ರೂಪಾಯಿ ಆದಾಯ ನಿರೀಕ್ಷೆ ಮಾಡುತ್ತಿದೆ ಎನ್ನಲಾಗಿದೆ.