ಶಿವಮೊಗ್ಗದಲ್ಲಿ ಇನ್ನೂ ನಡೀತಿದ್ಯಾ ಸೆಕೆಂಡ್ಸ್, ಥರ್ಡ್ಸ್​​ ಎಣ್ಣೆ ವಹಿವಾಟು/ ಗೃಹಸಚಿವರ ಜಿಲ್ಲೆಯಲ್ಲಿ ನಕಲಿ ಮದ್ಯಕ್ಕೆ ಅಬಕಾರಿ ಇಲಾಖೆ ಕಡಿವಾಣ ಹಾಕಿಲ್ವಾ?

ಈ ಘಟನೆಯನ್ನು ಸ್ಥಳೀಯರು ಅಕ್ರಮ ಹಾಗೂ ನಕಲಿ ಮದ್ಯ ಮಾರಾಟಕ್ಕೆ ಲಿಂಕ್​ ಮಾಡಿ ಆರೋಪಿಸಿದ್ಧಾರೆ. ತುಂಗಾನಗರದಲ್ಲಿ ತಡರಾತ್ರಿಯವರೆಗೂ ಮದ್ಯ ಮಾರಾಟವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇಷ್ಟೆ ಅಲ್ಲದೆ ಇದೇ ರೀತಿ ಇನ್ನಿಬ್ಬರು ಸಹ ಸಾವನ್ನಪ್ಪಿದ್ದರು ಎಂದು ಸ್ಥಳೀಯರು ದೂರಿದ್ದಾರೆ.

ಶಿವಮೊಗ್ಗದಲ್ಲಿ ಇನ್ನೂ  ನಡೀತಿದ್ಯಾ ಸೆಕೆಂಡ್ಸ್, ಥರ್ಡ್ಸ್​​ ಎಣ್ಣೆ ವಹಿವಾಟು/ ಗೃಹಸಚಿವರ ಜಿಲ್ಲೆಯಲ್ಲಿ ನಕಲಿ ಮದ್ಯಕ್ಕೆ ಅಬಕಾರಿ ಇಲಾಖೆ ಕಡಿವಾಣ ಹಾಕಿಲ್ವಾ?

ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ,  ಪಾನಮತ್ತನಾಗಿದ್ದ ಯುವಕನೊಬ್ಬ ಸಾವನ್ನಪ್ಪಿದ್ದ ಕೇಸ್​ ದಾಖಲಾಗಿದೆ. 

ತುಂಗಾನಗರದ ನಿವಾಸಿಯಾದ ಯುವಕ, ಮಂಗಳವಾರ ರಾತ್ರಿ ಹೊಟ್ಟೆ ತುಂಬ ಕುಡಿದು ಮನೆಗೆ ಬಂದಿದ್ದ. ಆನಂತರ ಆತನ ಆರೋಗ್ಯದಲ್ಲಿ ವತ್ಯಾಸವಾಗಿ, ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಆತ ಮೃತಪಟ್ಟಿದ್ದಾನೆ. 

ಇದನ್ನು ಸಹ ಓದಿ : NIA NEWS / ಸತ್ಯ ಬಾಯ್ಬಿಟ್ಟ ಮಾಜ್​/ ಶಿವಮೊಗ್ಗದಲ್ಲಿ ಕ್ರಿಪ್ಟೋ ಕರೆನ್ಸಿ ಶಂಕಿತ ಅರೆಸ್ಟ್​/ NIA ಹೇಳಿದ ಬೆಂಕಿ ಹಚ್ಚುವ ದುಷ್ಕತ್ಯದ ಸ್ಕೆಚ್​ ಏನು?

ಈ ಘಟನೆಯನ್ನು ಸ್ಥಳೀಯರು ಅಕ್ರಮ ಹಾಗೂ ನಕಲಿ ಮದ್ಯ ಮಾರಾಟಕ್ಕೆ ಲಿಂಕ್​ ಮಾಡಿ ಆರೋಪಿಸಿದ್ಧಾರೆ. ತುಂಗಾನಗರದಲ್ಲಿ ತಡರಾತ್ರಿಯವರೆಗೂ ಮದ್ಯ ಮಾರಾಟವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇಷ್ಟೆ ಅಲ್ಲದೆ ಇದೇ ರೀತಿ ಇನ್ನಿಬ್ಬರು ಸಹ ಸಾವನ್ನಪ್ಪಿದ್ದರು ಎಂದು ಸ್ಥಳೀಯರು ದೂರಿದ್ದಾರೆ. 

ಫೆಬ್ರವರಿಗೆ ಪ್ರಧಾನಿ ಮೋದಿ ಆಗಮನ/ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ದಿನಾಂಕ ಫಿಕ್ಸ್​? ಏನಿದು ಅಪ್​ಡೇಟ್ಸ್​

ಗೃಹಸಚಿವರು ಈ ಹಿಂದೆ ಶಾಸಕರಿದ್ದಾಗಲೇ ಅಕ್ರಮ ಮದ್ಯ ಮಾರಾಟದ ವಿರುದ್ಧ ಗುಡುಗಿದ್ದರು, ಅಲ್ಲದೆ ಅಕ್ರಮವಾಗಿ ಮಾರಾಟ ಮಾಡುವುದನ್ನ ತಪ್ಪಿಸಲು ಸಾಧ್ಯವಾಗದಿರುವ ಹತಾಶೆಯನ್ನು ಸಹ ವ್ಯಕ್ತಪಡಿಸಿದ್ದರು. ಇದೀಗ ಅವರ ಜಿಲ್ಲೆಯಲ್ಲಿ ಅಕ್ರಮ ಮದ್ಯಮಾರಾಟ ಸಾವಿಗೆ ಕಾರಣವಾಗಿರುವ ಆರೋಪ ಕೇಳಿಬಂದಿದೆ. 

BREKING NEWS/ ಇವತ್ತು ದಾವಣೆಗೆರೆ/7 ನೇ ತಾರೀಖು ಶಿವಮೊಗ್ಗ ಮತ್ತು ಭದ್ರಾವತಿಗೆ ಬರ್ತಿದ್ದಾರೆ ಸೆಂಚುರಿ ಸ್ಟಾರ್ ಶಿವಣ್ಣ/ ಕಾರಣವೇನು ಗೊತ್ತಾ? ಇಲ್ಲಿದೆ ವಿವರ

ಮೃತ ವ್ಯಕ್ತಿಯ ಸಾವಿಗೆ ಅಸಲಿ ಕಾರಣ ಮರಣೋತ್ತರ ಪರೀಕ್ಷೆಯಲ್ಲಿ ತಿಳಿಯಲಿದೆ. ಆದಾಗ್ಯು ಶಿವಮೊಗ್ಗದಲ್ಲಿ ಅಕ್ರಮ ಮದ್ಯಮಾರಾಟ ತಡೆಯಬೇಕಿದ್ದ ಅಬಕಾರಿ ಇಲಾಖೆಯು, ಸೇಲ್ಸ್​ನಲ್ಲಿ ಹೆಚ್ಚು ತೊಡಗಿಸಿಕೊಂಡಂತಿದೆ.

BREAKING NEWS / ಎನ್​ಐಎ ನಿಂದ ಶಿವಮೊಗ್ಗದಲ್ಲಿ ಮತ್ತೊಬ್ಬ ಶಂಕಿತನ ವಿಚಾರಣೆ ಪ್ರಕರಣ ಯಾವುದು? ಇಲ್ಲಿದೆ ಸ್ಟೋರಿ

ಇನ್ನೊಂದಡೆ ದರ ಹೆಚ್ಚುತ್ತಿರುವುದರಿಂದ ಸೆಕೆಂಡ್ಸ್​, ಥರ್ಡ್ಸ್​ ಮದ್ಯಗಳ ಮಾರಾಟವೂ ಚುರುಕಾಗಿದ್ಯಾ ಎಂಬ ಶಂಕೆ ಮೂಡುತ್ತಿದೆ. ಅಬಕಾರಿ ಇಲಾಖೆ ಅಕ್ರಮ ತಡೆಯುವ ಕೆಲಸವನ್ನು ಪೊಲೀಸ್ ಇಲಾಖೆಯ ಹೆಗಲಿಗೆ ಹಾಕಿ ಸುಮ್ಮನಾಯಿತೆ ಎಂಬ ಅನುಮಾನ ಮೂಡುತ್ತಿದೆ. 

SADNEWS/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಭೀಕರ ಅಪಘಾತ/ ಸಂತೆಗೆ ಹೋಗಿ ಬರ್ತಿದ್ದ ಇಬ್ಬರ ದುರ್ಮರಣ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ