shivamogga kote police station / ಶಿವಮೊಗ್ಗದಲ್ಲಿ ಚಿನ್ನ ಕದ್ದವ ಕೊಲ್ಕತ್ತಾದಲ್ಲಿ ಸಿಕ್ಕಿಬಿದ್ದ! ಕೋಟೆ ಪೊಲೀಸ್ ಸ್ಟೇಷನ್​ ಕೇಸ್​

Shivamogga Kota Police Station/ Man caught stealing gold in Shivamogga caught in Kolkata

shivamogga kote police station / ಶಿವಮೊಗ್ಗದಲ್ಲಿ ಚಿನ್ನ ಕದ್ದವ ಕೊಲ್ಕತ್ತಾದಲ್ಲಿ ಸಿಕ್ಕಿಬಿದ್ದ! ಕೋಟೆ ಪೊಲೀಸ್ ಸ್ಟೇಷನ್​ ಕೇಸ್​
shivamogga kote police station

SHIVAMOGGA  |  Jan 24, 2024  |    ಶಿವಮೊಗ್ಗ ನಗರದ ಕೋಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇರುವ ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬನನ್ನ ಪೊಲೀಶರು ಬಂದಿಸಿದ್ದಾರೆ. 

ಕೋಟೆ ಪೊಲೀಸ್ ಸ್ಟೇಷನ್​ 

ಲಷ್ಕರ್ ಮೊಹಲ್ಲಾ ವಾಸಿ  ಅನಿಸೂರ್ ಇಸ್ಲಾಂ, 42 ವರ್ಷ  ರವರ ಚಿನ್ನ ಬೆಳ್ಳಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಪಶ್ಚಿಮ ಬಂಗಾಳದ ವಾಸಿಯಾದ ಅದಿತೋ ಮಾಜಿ ಎಂಬುವವನು ದಿನಾಂಕಃ 04-01-2024 ರಂದು ಸದರಿ ಅಂಗಡಿಯಲ್ಲಿ ಬಂಗಾರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ. ಈ ಸಂಬಂಧ ದೂರು ಸಹ ದಾಖಲಾಗಿತ್ತು. ಪ್ರಕರಣದ ವಿಚಾರಣೆ ಆರಂಭಿಸಿದ ಪೊಲೀಸರು ಪಶ್ಚಿಮ ಬಂಗಾಳ ರಾಜ್ಯಕ್​ಕೆ ತೆರಳಿ ಅಲ್ಲಿ ನ ಹೌರಾ ಜಿಲ್ಲೆಯ ಜೈಪುರ್​ ಸ್ಟೇಷನ್ ಲಿಮಿಟ್ಸ್​ ನ ಖಜಿರ್ದೋ ಗ್ರಾಮದ ನಿವಾಸಿ ಆದಿತೋ ಎಂಬಾತನನ್ನ ಕೊಲ್ಕೊತ್ತಾದಲ್ಲಿ ಬಂಧಿಸಿ ರಾಜ್ಯಕ್ಕೆ ಕರೆತಂದಿದೆ. 

ಈತನಿಂದ  ಕೊಲ್ಕತ್ತಾದಲ್ಲಿ ಅಂದಾಜು ಮೌಲ್ಯ 2,70,000/- ರೂಗಳ 45 ಗ್ರಾಂ ತೂಕದ ಬಂಗಾರದ ಆಭರಣ, ಹೈದರಾಬಾದ್ ಮತ್ತು ಸಿಕಂದರಬಾದ್ ನಲ್ಲಿ ಅಂದಾಜು ಮೌಲ್ಯ 5,75,000/- ರೂಗಳ ಒಟ್ಟು 85 ಗ್ರಾಂ ಬಂಗಾರ ಸೇರಿ ಒಟ್ಟು ಅಂದಾಜು ಮೌಲ್ಯ 8,45,000/- ರೂಗಳ 130 ಗ್ರಾಂ ತೂಕದ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.