ಅಪರೂಪದ ಭೇಟಿ! ಕುತೂಹಲ ಮೂಡಿಸಿದ ಫೋಟೋಗಳು! ಏನಿದರ ವಿಶೇಷ ಗೊತ್ತಾ!

MP BY Raghavendra met cm, deputy CM, in-charge minister Madhu Bangarappa

ಅಪರೂಪದ ಭೇಟಿ! ಕುತೂಹಲ ಮೂಡಿಸಿದ ಫೋಟೋಗಳು! ಏನಿದರ ವಿಶೇಷ ಗೊತ್ತಾ!

 KARNATAKA NEWS/ ONLINE / Malenadu today/ Jun 13, 2023 SHIVAMOGGA NEWS

ಬಿ.ವೈ.ರಾಘವೇಂದ್ರ (by raghavendra)/  ಬದಲಾದ ರಾಜಕಾರಣ, ಹಳೆಯ ಕಥೆಗಳನ್ನು ಮರೆಸುತ್ತದೆ ಎಂಬುದಕ್ಕೆ ಇದುವರೆಗೂ ಹಲವು ಸಾಕ್ಷ್ಯಗಳು ಬಂದು ಹೋಗಿವೆ. ಇದೀಗ ಅದರ ಸಾಲಿಗೆ ಕೆಲವೊಂದು ಫೋಟೋಗಳು ಸೇರ್ಪಡೆಗೊಂಡಿವೆ.

 

ಚುನಾವಣೆಯಲ್ಲಿ ಬದ್ಧ ವೈರಿಗಳಾಗಿ ಸ್ಪರ್ಧಿಸಿ, ಒಬ್ಬರು ಸೋತು, ಇನ್ನೊಬ್ಬರು ಗೆದ್ದು ಬೀಗಿದ್ದವರು. ಇದೀಗ ಪರಸ್ಪರ ಹೂಗುಚ್ಚ ವಿನಿಮಯ ಮಾಡಿಕೊಂಡು, ಆಡಳಿತಾತ್ಮಕ ಗೆಳತನದ ಮಾತನಾಡಿದ್ದಾರೆ. ಮಧು ಬಂಗಾರಪ್ಪರವರನ್ನ ಭೇಟಿಯಾದ ಸಂಸದ ಬಿ.ವೈ ರಾಘವೇಂದ್ರರವರು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. 


ಅಂದು ಇಂದು?

ಅಂದು ಸೋತಿದ್ದ ಮಾಜಿ ಸಿಎಂ ದಿವಂಗತ ಎಸ್​.ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪನವರು, ಇದೀಗ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವರು, ಜಿಲ್ಲೆ ಅಭಿವೃದ್ಧಿ ಅವರ ಸಹಕಾರ ಅತ್ಯಗತ್ಯ! ಇನ್ನೊಂದೆಡೆ ಕೇಂದ್ರದ ಸಂಪರ್ಕಕ್ಕೆ ಸಂಸದ ಬಿ.ವೈ ರಾಘವೇಂದ್ರರವರ ಸಹಕಾರವೂ ಅವಶ್ಯಕ. ಹೀಗಾಗಿ ಆಡಳಿತದ ವ್ಯವಸ್ಥೆಯಲ್ಲಿ ವೈಯಕ್ತಿಕ ಹಾಗೂ ರಾಜಕಾರಣ ಸಲ್ಲದು ಎಂಬುದಕ್ಕೆ ಈ ಭೇಟಿಯು ಸಾಕ್ಷೀಕರಿಸಿದೆ. 

ಕೇವಲ ಮಧು ಬಂಗಾರಪ್ಪನವರನ್ನಷ್ಟೆ ಅಲ್ಲದೆ ಮಾಜಿ ಸಿಎಂ ಬಿಎಸ್​ವೈರವರ ಪುತ್ರ ಹಾಲಿ ಸಿಎಂ ಸಿದ್ದರಾಮಯ್ಯರವರನ್ನ ಸಹ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಸಿದ್ದರಾಮಯ್ಯ ರಾಘವೇಂದ್ರರವರ ಬೆನ್ನುತಟ್ಟಿ ಕುಶಲೋಪಚರಿ ವಿಚಾರಿಸಿದರು. 



ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರನ್ನು ಭೇಟಿ ಮಾಡಿ ಶುಭಾಶಯವನ್ನು ತಿಳಿಸಿದ ಸಂಸದ ಬಿವೈ ರಾಘವೇಂಧ್ರ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಚರ್ಚಿಸಿ ಸಹಕಾರವನ್ನು ಕೋರಿದರು

ಇದೇ ವೇಳೆಯಲ್ಲಿ ಬೆಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ರನ್ನ ಭೇಟಿಮಾಡಿದ ಸಂಸದ ರಾಘವೇಂದ್ರ ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನಲ್ಲಿ ಕಡಲಕೊರೆತದಿಂದ ಉಂಟಾದ ಪ್ರದೇಶಗಳಲ್ಲಿ ಹಾನಿಯ ಬಗ್ಗೆ ಚರ್ಚಿಸಿ ಅಧಿಕಾರಿಗಳಿಗೆ ಸೂಚನೆ ನೀಡಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದರು


50  Sub Inspectors ವರ್ಗಾವಣೆ! ಶಿವಮೊಗ್ಗ ಜಿಲ್ಲೆಯಲ್ಲಿ ಯಾರ್ಯಾರು ಟ್ರಾನ್ಸಫರ್​! ಯಾರು ಹೊಸ ಪಿಎಸ್​ಐ! 

 

ಶಿವಮೊಗ್ಗ/ ಜಿಲ್ಲೆ ವಿವಿಧ ಠಾಣೆಗಳ ಪಿಎಸ್​ಐಗಳನ್ನ ವರ್ಗಾವಣೆ ಮಾಡಲಾಗಿದೆ. ರಾಜ್ಯ ಸರ್ಕಾರದ ಸಾಮಾನ್ಯ ವರ್ಗಾವಣೆ ಅನ್ವಯ ರಾಜ್ಯಾದ್ಯಂತ 50 ಪಿಎಸ್ಐ ಗಳನ್ನು ವರ್ಗಾವಣೆ ಗೊಳಿಸಿ ಆದೇಶ ಮಾಡಿದೆ.I  ಈ ಪೈಕಿ ಶಿವಮೊಗ್ಗದಲ್ಲಿ ಪ್ರಮುಖವಾಗಿ ರಿಪ್ಪನ್‌ಪೇಟೆ ಪಿಎಸ್ಐ ಶಿವಾನಂದ ಕೋಳಿ ಸೇರಿದಂತೆ ಹಲವರು ವರ್ಗಾವಣೆ ಗೊಂಡಿದ್ಧಾರೆ. ಶಿವಾನಂದರವರನ್ನ   ಹೊಸನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. 

 

ಭದ್ರಾವತಿಯ ಹೊಸಮನೆ ಪೊಲೀಸ್ ಸ್ಟೇಷನ್​  ಪಿಎಸ್ಐ ನಿಂಗಪ್ಪ ಕರಕಣ್ಣನವರ್ ಹಾವೇರಿ ಜಿಲ್ಲೆಯ ಬಂಕಾಪುರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. 

 

ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ಪಿಎಸ್ ಐ ಸಿ.ಆರ್.ಕೊಪ್ಪದ್  ಅವರನ್ನ ಆಗುಂಬೆ ಪೊಲೀಸ್ ಠಾಣೆಯ ಪಿಎಸ್ಐ ಆಗಿ ವರ್ಗಾಯಿಸಲಾಗಿದೆ.

 

ಭದ್ರಾವತಿಯ ಹೊಸಮನೆ ಠಾಣೆಯ ಪಿಎಸ್ಐ ಶಾಂತಲಾರನ್ನ ಭದ್ರಾವತಿ ಟ್ರಾಫಿಕ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

 

ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯಲ್ಲಿರುವ ಇ.ಕವಿತರನ್ನ ಪೇಪರ್ ಟೌನ್ ಠಾಣೆಗೆ ವರ್ಗಾಯಿಸಲಾಗಿದೆ.

 

ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ಸುರೇಶ್ ರನ್ನ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

 

ಮಲೇಬೆನ್ನೂರು ಪೊಲೀಸ್ ಠಾಣೆಯ ಯುವರಾಜ ಕೆ. ರನ್ನ ಆನಂದಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. 

 

ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿ ಸೇವೆಸಲ್ಲಿಸುತ್ತಿದ್ದ ತಿರುಮಲೇಶ್ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. 

 

ಹಾವೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿದ್ದ ಪಿಎಸ್ಐ ಬಿ.ಎನ್ ಮಂಜುನಾಥ್ ರನ್ನ ಶಿವಮೊಗ್ಗ ವಿನೋಬ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

 

ಪೇಪರ್ ಟೌನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಪಿಎಸ್ಐ ಭಾರತಿ ಎನ್ ಎಸ್ ರನ್ನ ನ್ಯೂ ಟೌನ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. 

 

ಆಗುಂಬೆ ಪಿಎಸ್ಐ ಶಿವಕುಮಾರ್ ರನ್ನ  ದೊಡ್ಡಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. 

 

ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯ ಕೆ.ಹೆಚ್.ಜಯಪ್ಪರನ್ನ ಮಹಿಳಾ ಠಾಣೆಗೆ ವರ್ಗಾಯಿಸಲಾಗಿದೆ.

 

ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯ ಪಿಎಸ್ ಐ ಶಿಲ್ಪಾ ನಾಯಿನೇಗಿಲಿಯರನ್ನ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. 

 

ನ್ಯೂಟೌನ್ ಠಾಣೆಯ ಪಿಎಸ್ಐ ರಂಗನಾಥ ಅಂತರಗಟ್ಟಿಯರನ್ನೂ ಭದ್ರಾವತಿ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.

 

ಹೊಸನಗರ ಠಾಣೆಯ ಪಿಎಸ್ಐ ನೀಲಪ್ಪ ನರಲಾರ್ ರನ್ನ ಹಿರೇಕೆರೂರು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. 

 

ಜಯನಗರ ಪೊಲೀಸ್ ಠಾಣೆಯ ರೂಪ ತೆಂಬದ್ ರನ್ನ ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ. 


 

ಶಿವಮೊಗ್ಗ/ ಜಿಲ್ಲೆ ಸೊರಬ ತಾಲ್ಲೂಕಿನ  ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮನವಳ್ಳಿ ಮತ್ತು ಎಣ್ಣೆಕೊಪ್ಪ ಗ್ರಾಮಗಳಲ್ಲಿ ಎಸ್​ಪಿ ಮಿಥುನ್ ಕುಮಾರ್​ ನಿನ್ನೆ  ಜನಸಂಪರ್ಕ ಸಭೆ ನಡೆಸಿ , ಕೆಲವೊಂದು ಸೂಚನೆಗಳನ್ನ ನೀಡಿದ್ದಾರೆ. ಅವುಗಳು ಯಾವುವು ಎಂದು ನೋಡುವುದಾದರೆ,  

 

1) ಗ್ರಾಮಗಳಲ್ಲಿ ಬೀಟ್ ಸಮಿತಿಯನ್ನು ರಚಿಸಿ, ನಿರಂತರವಾಗಿ ಬೀಟ್ ಅಧಿಕಾರಿ / ಸಿಬ್ಬಂಧಿಯವರು ಗ್ರಾಮಗಳಿಗೆ ಭೇಟಿ ನೀಡಿ, ಬೀಟ್ ಸಮಿತಿ ಸಭೆಯನ್ನು ನಡೆಸುತ್ತಾರೆ ಮತ್ತು ಗ್ರಾಮದಲ್ಲಿನ ಯುವಕರನ್ನೊಳಗೊಂಡ ಯುವಪಡೆಯನ್ನು ರಚಿಸಿ, ಅವರುಗಳು ಬೀಟ್ ಸಿಬ್ಬಂಧಿಗಳೊಂದಿಗೆ ಗಸ್ತು ಮಾಡುವುದು ಹಾಗೂ ಯಾವುದೇ ಕಾನೂನು ಬಾಹೀರ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಠಾಣೆ /  ಬೀಟ್ ಸಿಬ್ಬಂಧಿಗೆ ಮಾಹಿತಿ ನೀಡಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದು ಜನರಿಗೆ ಸೂಚಿಸಿದರು. 

 

2) ಸರಕು ಸಾಗಾಣಿಕೆ ಮತ್ತು ಇತರೆ ಎಲ್ಲಾ ತೆರನಾದ ವಾಹನಗಳ ಸವಾರರು ಚಾಲನಾ ಪರವಾನಿಗೆ ಮತ್ತು ವಾಹನದ ವಿಮೆ ಇಲ್ಲದೆ ವಾಹನಗಳನ್ನು ಚಾಲನೆ ಮಾಡುವುದು ಕಾನೂನು ರೀತ್ಯಾ ಅಪರಾಧವಾಗಿದ್ದು, ಈ ರೀತಿ ಚಾಲನೆ ಮಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. 

 

3) ದ್ವಿ ಚಕ್ರ ವಾಹನ ಸವಾರರು ಕೇವಲ ದಂಡವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಾತ್ರ ಹೆಲ್ಮೆಟ್ ಧರಿಸದೇ, ತಮ್ಮ ರಕ್ಷಣೆಯ ದೃಷ್ಠಿಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಮತ್ತು ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವುದರಿಂದ ಅಪಘಾತಗಳನ್ನು ತಡೆಗಟ್ಟಬಹುದು ಎಂದರು

 

4) ಬಾಲ್ಯ ವಿವಾಹ ಮಾಡುವುದು ಕಾನೂನು ರೀತ್ಯಾ ಅಪರಾಧವಾಗಿದ್ದು, ಈ ರೀತಿಯ ಘಟನೆಗಳು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದರು

 

5) ಖಾಸಗಿ ಬಸ್ ಗಳ ಚಾಲಕರು ರಸ್ತೆಯಲ್ಲಿ ಅತೀವೇಗವಾಗಿ ಚಾಲನೆ ಮಾಡುವುದರಿಂದ ಮತ್ತು ಹೆಚ್ಚಿನ ಶಬ್ದವನ್ನುಂಟು ಮಾಡುವ ಸ್ಪೀಕರ್ ಗಳಲ್ಲಿ ಹಾಡುಗಳನ್ನು ಹಾಕಿಕೊಂಡು ಚಾಲನೆ ಮಾಡುವುದರಿಂದ ರಸ್ತೆ ಅಫಘಾತಗಳು ಆಗುತ್ತಿವೆ ಎಂದು ಸಾರ್ವಜನಿಕರು ತಿಳಿಸಿದ್ದು, ಈ ಬಗ್ಗೆ ತಪಾಸಣೆ ನಡೆಸಿ, ಅಂತಹವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು. 

 

6) ಯಾವುದೇ ಅಗತ್ಯ ಮತ್ತು ತುರ್ತು ಸಂದರ್ಭದಲ್ಲಿ ERSS – 112  ಸಹಾಯವಾಣಿಗೆ ಕರೆಮಾಡಿ ಪೊಲೀಸ್ ಸಹಾಯ ಪಡೆದುಕೊಳ್ಳಿ ಎಂದು ತಿಳಿಸಿದರು.  

 


ಸದ್ದಿಲ್ಲದೇ ಬಂದ್ ಆಗುತ್ತಿದೆ VISL ! ಗುತ್ತಿಗೆ ಕಾರ್ಮಿಕರಲ್ಲಿ ಹೆಚ್ಚಿದ ಆತಂಕ! ಸುಳ್ಳಾಯ್ತಾ ಭರವಸೆಗಳು!?



ಭದ್ರಾವತಿ/  ಕೇಂದ್ರ ಉಕ್ಕು ಪ್ರಾಧಿಕಾರ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಹಂತ ಹಂತವಾಗಿ ಉತ್ಪಾದನೆ ಸ್ಥಗಿತಗೊಳ್ಳುತ್ತಿದ್ದು,, ಗುತ್ತಿಗೆ ಕಾರ್ಮಿಕರನ್ನ ಕೆಲಸದಿಂದ ತೆಗೆದುಹಾಕಲಾಗುತ್ತಿದೆ. 

 

ಈ ಹಿಂದೆ ಒಂದು ವರ್ಷದ ಅವಧಿಯವರೆಗೂ ಯಾವುದೇ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಳ್ಳುವುದಿಲ್ಲ ಎಂಬ ನಿರ್ಧಾರವನ್ನ ಸಂಸದ ಬಿ.ವೈ .ರಾಘವೇಂದ್ರರವರು ತಿಳಿಸಿದ್ದರು. ಆದರೆ ಇದೀಗ ಫ್ಯಾಕ್ಟರಿಯಲ್ಲಿ ನಿರ್ದಿಷ್ಟ ವಿಭಾಗಗಳನ್ನ ಬಂದ್ ಮಾಡಿ, ಕಾರ್ಮಿಕರನ್ನ ತೆಗೆದುಹಾಕಲಾಗುತ್ತಿದೆ.   ಎಚ್‌ಟಿಎಸ್ ಇಲಾಖೆಯಲ್ಲಿನ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ. 

 

ಕಾರ್ಖಾನೆಯನ್ನು ಮುಚ್ಚುವ ತೀರ್ಮಾನ ಹೊರಬಿದ್ದ ಬೆನ್ನಲ್ಲೆ ತೀವ್ರ ಪ್ರತಿಭಟನೆಗಳು ನಡೆದಿದ್ದವು, ರಾಜ್ಯದಲ್ಲೆಡೆ ಸೇವ್​ ವಿಐಎಸ್​ಎಲ್​ ಎಂಬ ಅಭಿಯಾನವೇ ಆರಂಭವಾಗಿತ್ತು. ಈ ಮಧ್ಯೆ ಸಂಸದರು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಒಂದು ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವ ಬಗ್ಗೆ ಮಾತನಾಡಿದ್ದರು. ಆದರೆ ಇದೀಗ ಮುಚ್ಚುವ ಪ್ರಕ್ರಿಯೆಗಳು ನಿರಾಂತಕವಾಗಿ ಸಾಗುತ್ತಿರುವುದು ಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ. 

 


ಭದ್ರಾವತಿಯಲ್ಲಿಂದು ವಿದ್ಯುತ್ ವ್ಯತ್ಯಯ

 

ಭದ್ರಾವತಿ/ ತಾಲೂಕಿನ ಮೆಸ್ಕಾಂ ಲಕ್ಕವಳ್ಳಿ66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಇವತ್ತು ಅಂದರೆ,   ಜೂ.13ರಂದು ಬೆಳಿಗ್ಗೆ 9ಗಂಟೆಯಿಂದ ಸಂಜೆ 6 ಗಂಟೆವರೆಗೆ  ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ

ಗೋಣಿಬೀಡು, ಸಿಂಗನಮನೆ, ಗ್ಯಾರೇಜ್ ಕ್ಯಾಂಪ್, ಶಾಂತಿನಗರ, ಶಂಕರಘಟ್ಟ, ತಾವರಘಟ್ಟ, ಎಚ್.ಕೆ ಜಂಕ್ಷನ್, ಕುವೆಂಪು ವಿಶ್ವ ವಿದ್ಯಾನಿಲಯ, ರಂಗನಾಥಪುರ, ತಮ್ಮಡಿಹಳ್ಳಿ, ಮಾಳೇನಹಳ್ಳಿ, ನೆಲ್ಲಿಸರ, ಮಲ್ಲಿಗೇನಹಳ್ಳಿ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.