ಒಂದು ಕೆಲಸಕ್ಕೆ ₹40 ಲಕ್ಷ ವಸೂಲಿ! ಸಾಗರ ಶಾಸಕ ಗೋಪಾಲ ಕೃಷ್ಟ ಬೇಳೂರುರವರಿಂದ ಗಂಭೀರ ಆರೋಪ! ಏನಿದು ಹಗರಣ?

MLA Belur Gopalakrishna has alleged that there is malpractice in the recruitment of DCC Bank in Shimogaಶಿವಮೊಗ್ಗ ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಅವ್ಯವಹಾರ ಆಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ

ಒಂದು ಕೆಲಸಕ್ಕೆ  ₹40 ಲಕ್ಷ ವಸೂಲಿ!  ಸಾಗರ ಶಾಸಕ ಗೋಪಾಲ ಕೃಷ್ಟ ಬೇಳೂರುರವರಿಂದ ಗಂಭೀರ ಆರೋಪ! ಏನಿದು ಹಗರಣ?

KARNATAKA NEWS/ ONLINE / Malenadu today/ Sep 29, 2023 SHIVAMOGGA NEWS’ 

ಇವತ್ತು ಶಿವಮೊಗ್ಗ ಡಿಸಿಸಿ ಬ್ಯಾಂಕ್​ನಲ್ಲಿ  ಅಧ್ಯಕ್ಷ ಸ್ಥಾನದ ಚುನಾವಣೆಯಿತ್ತು. ಅದರಲ್ಲಿ ಆರ್ ಎಂ ಮಂಜುನಾಥ ಗೌಡರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ (MLA Belur Gopalakrishna) ಡಿಸಿಸಿ ಬ್ಯಾಂಕ್ ನಲ್ಲಿ ಉದ್ಗೋಗ ನೀಡಲು ಅಭ್ಯರ್ಥಿಯಿಂದ ಸಾಲ ಕೊಡಿಸಿ ಹುದ್ದೆ ನೀಡಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. 

ರಾಜಕೀಯದಲ್ಲಿ ಸಹಕಾರ ಕ್ಷೇತ್ರಗಳನ್ನು ಅತಂತ್ರ ಮಾಡುವುದು ತಪ್ಪು. ರೈತರ ಪರ ಕೆಲಸ ಮಾಡುವ ಜಬಾಬ್ದಾರಿಯುತ ಸಂಸ್ಥೆ ಸಹಕಾರಿ ಬ್ಯಾಂಕ್ ಆಗಿದೆ. ವಿನಾಕಾರಣ ಆರೋಪದಡಿ ಮಂಜುನಾಥ್ ಗೌಡರನ್ನು ಉದ್ದೇಶಪೂರ್ವಕವಾಗಿ ಕೆಳಗಿಳಿಸಲಾಗಿತ್ತು.. ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ ರಾಘವೇಂದ್ರ ಸಹಕಾರಿ ಕ್ಷೇತ್ರಗಳಲ್ಲಿ ರಾಜಕೀಯ ತಂದು ಹಾಳುಗೆಡವಿದ್ದಾರೆ. ಮಂಜುನಾಥ್ ಗೌಡರು ರೈತರ ಪರವಾಗಿ ಕೆಲಸ ಮಾಡಿದ್ದಾರೆ. ಮುಂದೆ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗುವ ಅವಕಾಶವಿದೆ ಎಂದು ಹೇಳಿದರು.ಮಂಜುನಾಥ್ ಗೌಡರು ತಮ್ಮ ಮೇಲೆ ಬಂದ ಆರೋಪಗಳನ್ನು ಎದುರಿಸಿ ಮತ್ತೆ ಅಧಿಕಾರ ಹಿಡಿದಿದ್ದಾರೆ. 



ಡಿಸಿಸಿ ಬ್ಯಾಂಕ್ ನಲ್ಲಿ ಈ ಹಿಂದೆ ಖಾಲಿ ಇದ್ದ ಹುದ್ದೆಗಳ ಭರ್ತಿಗಾಗಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಲಂಚ ಪಡೆಯಲಾಗಿದೆ. ಲೋನ್ ಮಾಡಿಸಿ ಅಭ್ಯರ್ಥಿಗಳಿಂದ ಲಂಚ ಪಡೆದಿದ್ದಾರೆ. ಕೋಟ್ಯಾಂತರ ರೂಪಾಯಿ ಹಗರಣವಾಗಿದೆ. 35 ರಿಂದ 40 ಲಕ್ಷ ದವರೆಗೆ ಕೆಲಸ ಕೊಡಿಸುವುದಾಗಿ ಉದ್ಯೋಗಕಾಂಕ್ಷಿಗಳಿಂದ  ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಸೇರಿದಂತೆ, ಮಾಜಿ ಸಿಎಂರವರ  ಫಾಲೋವರ್ಸ್ ಗಳನ್ನು ತನಿಖೆಗೆ ಒಳಪಡಿಸಬೇಕು ಎಂದ ಬೇಳೂರು ಗೋಪಾಲಕೃಷ್ಣರವರು, ಬಿಎಸ್​ವೈರವರ ಮಗ ನಾಲ್ಕು ವರ್ಷ ಯಾವ ಹಳ್ಳಿಗೂ ಹೋಗಿರಲಿಲ್ಲ.ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಈಗ ಹಳ್ಳಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ರು. 


ಇನ್ನಷ್ಟು ಸುದ್ದಿಗಳು 

  1. ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ! ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ! ಎಲ್ಲೆಲ್ಲಿಗೆ ಯಾರ್ಯಾರು ಓದಿ

  2. 2 ಲಕ್ಷ ಜನ! 3 ಸಾವಿರಕ್ಕೂ ಹೆಚ್ಚು ಪೊಲೀಸ್ ! ನಾಳಿನ ಬಂದೋಬಸ್ತ್​ ಬಗ್ಗೆ ಎಸ್​ಪಿ ಬ್ರೀಫಿಂಗ್​!

  3. ಹಿಂದೂ ಮಹಾಸಭಾದ ಮೊದಲ ಗಣಪತಿ ಪ್ರತಿಷ್ಟಾಪನೆಯಾಗಿದ್ದು ಶಿವಮೊಗ್ಗದಲ್ಲೆ! ಇಲ್ಲಿದೆ ನೋಡಿ ಇತಿಹಾಸದ ವಿನಾಯಕನ ದೃಶ್ಯಗಳು!

  4. ಹಿಂದೂ ಮಹಾಸಭಾ ಗಣಪತಿಗೆ ಸರ್ವಧರ್ಮ ‘ಸೌಹಾರ್ದ’ ಹೂವಿನ ಹಾರ!