ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ಹೇಗೆ ನಡೆದಿದೆ ಸಿದ್ದತೆ! ಎಲ್ಲಿಂದ ಎಲ್ಲಿಗೆ ಸಾಗಲಿದೆ ಮೆರವಣಿಗೆ ! ಇಲ್ಲಿದೆ ವಿವರ !

Here is the details of the preparations for the Eid Milad procession to be held in Shimoga cityಶಿವಮೊಗ್ಗ ನಗರದಲ್ಲಿಂದು ನಡೆಯಲಿರುವ ಈದ್ ಮಿಲಾದ್ ಮೆರವಣಿಗೆಯ ಸಿದ್ದತೆಯ ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Oct 1, 2023 SHIVAMOGGA NEWS’ 

ಶಿವಮೊಗ್ಗ ಹಿಂದು ಮಹಾಸಭಾ ಮತ್ತು ಓಂ ಗಣಪತಿ ರಾಜಬೀದಿ ಉತ್ಸವದ ಬಳಿಕ ಇಂದು  ಈದ್ ಮಿಲಾದ್ ಮೆರವಣಿಗೆಗೆ  ಸಜ್ಜಾಗಿದೆ. ಶಿವಮೊಗ್ಗ ನಗರದ ವಿವಿಧ ಗಲ್ಲಿಗಳಲ್ಲಿ ವಿಶೇಷವಾದ ಅಲಂಕಾರ ಮಾಡಲಾಗಿದ್ದು, ಶಾಂತಿಯುತ ಹಬ್ಬದ ಮೆರವಣಿಗೆ ಪೊಲೀಸ್ ಇಲಾಖೆ ಸಕಲ ಬಂದೋಬಸ್ತ್​ ಮಾಡಿಕೊಂಡಿದೆ. 2500 ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ. .  

ಸೆ.28ರಂದೇ ಈದ್ ಮಿಲಾದ್ ಹಿಂದು ಮಹಾಸಭಾ ಗಣಪತಿ ರಾಜಬೀದಿ ಉತ್ಸವದ ಹಿನ್ನೆಲೆಯಲ್ಲಿ ಮೆರವಣಿಗೆಯನ್ನು ಅ.1ಕ್ಕೆ ಮುಂದೂಡಿದ್ದರು, ಅದರಂತೆ ಸಕಲ ಸಿದ್ದತೆಗಳು ನಡೆದಿದ್ದು, ಹಸಿರು-ಬಿಳಿ ಬಂಟಿಂಗ್ಸ್, ಧ್ವಜಗಳು, ರಾರಾಜಿಸುತ್ತಿದೆ.

ಅದರಲ್ಲಿಯು ವಿಶೇಷವಾಗಿ ಅಮೀರ್ ಅಹಮದ್ ಸರ್ಕಲ್​ನಲ್ಲಿ ಟಿಪ್ಪು ಸುಲ್ತಾನ್​ ಪ್ರತಿಕೃತಿಯನ್ನು ನಿಲ್ಲಿಸಲಾಗಿದ್ದು, ನಡು ಸರ್ಕಲ್​ನ ಕಮಾನಿನಲ್ಲಿ ಹಸಿರಿನ ಗುಮ್ಮಟ ನಿರ್ಮಿಸಲಾಗಿದೆ. ಅಲ್ಲದೆ ಟಿಪ್ಪು ಕಾಲ ಪಿರಂಗಿ ಪ್ರತಿಕೃತಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ

ಎಲ್ಲೆಲ್ಲಿ ಸಂಚಾರ?

ಅ.1ರಂದು ಮಧ್ಯಾಹ್ನದಿಂದ ಗಾಂಧಿಬಜಾರ್ ಜಾಮೀಯಾ ಮಸೀದಿಯಿಂದ ಆರಂಭವಾಗುವ ಮೆರವಣಿಗೆಯು ನಾಗಪ್ಪನ ಕೇರಿ, ಲಷ್ಕರ್ ಮೊಹಲ್ಲಾ, ಸಿ.ಆರ್.ಎನ್.ರಸ್ತೆ, ಓಲ್ಡ್ ಬಾರ್ ಲೈನ್, ಪೆನ್ಯನ್ ಮೊಹಲ್ಲಾ, ಬಿ.ಎಚ್.ರಸ್ತೆ, ಮೀನಾಕ್ಷಿ ಭವನ, ಟ್ಯಾಂಕ್ ಮೊಹಲ್ಲಾ, ಟ್ಯಾಂಕ್ ಬಂಡ್ ರಸ್ತೆ, ಬಾಪೂಜಿನಗರ ಮುಖ್ಯರಸ್ತೆ, ಬಾಲರಾಜ್ ಅರಸ್ ರಸ್ತೆ, ಮಹಾವೀರ ವೃತ್ತ, ಸೀನಪ್ಪ ಶೆಟ್ಟಿ ವೃತ್ತ, ನೆಹರು ರಸ್ತೆ, ಅಮೀರ್ ಅಹಮ್ಮದ್ ರಸ್ತೆ, ಬಿ.ಎಚ್.ರಸ್ತೆ, ಅಶೋಕ ವೃತ್ತ, ಎನ್.ಟಿ.ರಸ್ತೆ, ಗುರುದೇವ ರಸ್ತೆ, ಕ್ಲಾರ್ಕ್‌ಪೇಟೆ, ನೂರಾನಿ ಮಸೀದಿ, ಕೆ.ಆರ್.ಪುರಂ ರಸ್ತೆ ಮಾರ್ಗವಾಗಿ ಅಮೀರ್ ಅಹಮ್ಮದ್ ವೃತ್ತ ತಲುಪಲಿದೆ

ಮಲೆನಾಡು ಟುಡೆ ಹಾರೈಕೆ

ಹಬ್ಬಗಳು ಇರುವುದು ಸಂಭ್ರಮಕ್ಕೆ, ಅಂತಹ ಸಂಭ್ರಮಕ್ಕೆ ಶಿವಮೊಗ್ಗ ಸಾಕ್ಷಿಯಾಗುತ್ತಿದೆ. ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಯು ಶಿವಮೊಗ್ಗದ ಉತ್ಸವವಾಗಿ ಮಾರ್ಪಡುತ್ತಿರುವ ಹಾಗೆಯೇ ಶಿವಮೊಗ್ಗದಲ್ಲಿ ನಡೆಯುತ್ತಿರುವ ಈದ್ ಮಿಲಾದ್ ಮೆರವಣಿಗೆಯು ಸಹ ವಿಶೇಷವೆನ್ನಿಸಿಕೊಳ್ತಿದೆ. ಇಲ್ಲಿ ಕೈಗೊಳ್ಳುವ ಅಲಂಕಾರಗಳು ಜನಮನ ಸೆಳೆಯುತ್ತಿವೆ. ಪರಸ್ಪರ ಸಹಕಾರ ಮತ್ತು ಜನರ ಉತ್ಸಾಹದಿಂದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನಡೆದಿದೆ. ಅದೇ ರೀತಿಯಲ್ಲಿ ಈದ್ ಮಿಲಾದ್ ಮೆರವಣಿಗೆ ಕೂಡ ಸಂಭ್ರಮದಿಂದ ನಡೆಯಲಿ! ಶಾಂತಿಯುತವಾಗಿ ಸಾಗಲಿ ಎಂದು ಮಲೆನಾಡು ಟುಡೆ ಹಾರೈಸುತ್ತದೆ.  


 

ಇನ್ನಷ್ಟು ಸುದ್ದಿಗಳು 

 

  1. ರಾಷ್ಟ್ರೀಯ ಹೆದ್ದಾರಿ 169 A ನಲ್ಲಿ ಬೆಳಗಿನ ಜಾವ ಧಗಧಗ ಹೊತ್ತಿ ಉರಿದ ಮರ! ಏನಿದು ಘಟನೆ

  2. ವಿಐಎಸ್​ಎಲ್​​ ಆವರಣದಲ್ಲಿ ಕಾಣಿಸಿಕೊಳ್ತು ಮತ್ತೊಂದು ಚಿರತೆ!

  3. ಸಿಗಂದೂರು ಚೌಡೇಶ್ವರಿ ದರ್ಶನ ಪಡೆದು ಬೆಂಗಳೂರಿಗೆ ಹೋಗುತ್ತಿದ್ದಾಗ ಶಾಕ್! ಸೂಡೂರು ಸಮೀಪ ಆಕ್ಸಿಡೆಂಟ್!