ಹೊಸಮನೆ ಘಟನೆ ಬೆನ್ನಲ್ಲೆ ಕಾಲ್ನಡಿಗೆ ಗಸ್ತು ಇನ್ನಷ್ಟು ಬಿಗಿ | 42 ಕೇಸ್‌ ದಾಖಲು

foot patrols and area domination patrols were conducted across various locations, leading to the filing of 42 minor cases against individuals involved in public nuisance and suspicious activities.

ಹೊಸಮನೆ ಘಟನೆ ಬೆನ್ನಲ್ಲೆ ಕಾಲ್ನಡಿಗೆ ಗಸ್ತು ಇನ್ನಷ್ಟು ಬಿಗಿ | 42 ಕೇಸ್‌ ದಾಖಲು
foot patrol,area domination patrol,

SHIVAMOGGA | MALENADUTODAY NEWS | May 31, 2024  ಮಲೆನಾಡು ಟುಡೆ

ಏರಿಯಾ ಡಾಮಿನೇಷನ್‌ ಗಸ್ತು ನಡುವೆಯು ಶಿವಮೊಗ್ಗ ಸಿಟಿಯಲ್ಲಿ ಪುಂಡರ ಹಾವಳಿ ಜಾಸ್ತಿಯಾಗಿದೆ ಎನ್ನುವುದಕ್ಕೆ ಹೊಸಮನೆಯಲ್ಲಿ ನಡೆದ ಘಟನೆ ಸಾಕ್ಷಿಯಾಗಿತ್ತು. ಇದರ ನಡುವೆ ಶಿವಮೊಗ್ಗ ಪೊಲೀಸರು ವಿಶೇಷ ಗಸ್ತನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ. 

ಇದಕ್ಕೆ ಪೂರಕವಾಗಿ  ದಿನಾಂಕಃ 30-05-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ  ಸೀಗೆಹಟ್ಟಿ, ಬೈಪಾಸ್ ರಸ್ತೆ, ಹೊಸಮನೆ, ಶರಾವತಿ ನಗರ, ಲಷ್ಕರ್ ಮೊಹಲ್ಲ, ಮೀನು ಮಾರುಕಟ್ಟೆ, ಹಾಲೆಮನೆ ಕೇರಿ ನಾಗಪ್ಪ ಕೇರಿ, ಗಾಂಧಿ ಬಜಾರ್, ಅಶೋಕ ರಸ್ತೆ, ಕೆಳಗಿನ ತುಂಗಾ ನಗರ ಕೆಕೆ ಶೆಡ್, ಪದ್ಮ ಟಾಕೀಸ್ ನಲ್ಲಿ ಗಸ್ತು ತಿರುಗಲಾಗಿದೆ. 

ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ದುರ್ಗಿಗುಡಿ, ತಿಲಕ್ ನಗರ ರಾಘವೇಂದ್ರ ಮಠ, ಪುರ್ಲೆ, ಚಿಕ್ಕಲ್, ಸಾಗರ ಉಪ ವಿಭಾಗ ವ್ಯಾಪ್ತಿಯ  ಜೆ ಸಿ ರಸ್ತೆ, ಸಾಗರ ವೃತ್ತ, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಕಡದಕಟ್ಟೆ, ವೀರಾಪುರ,  ಸೀತಾರಾಮಪುರ,  ಭೂತನ ಗುಡಿ, ಹೊಳೆ ಹೊನ್ನೂರಿನ ಎನ್ ಟಿ ವೃತ್ತ,  ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಹೊಸನಗರದ ಚೌಡಮ್ಮ ರಸ್ತೆ ಏರಿಯಾದಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  (Foot Patrolling) ಮತ್ತು ಠಾಣಾ ವ್ಯಾಪ್ತಿಗಳ ಹೊರ ವಲಯಗಳಲ್ಲಿ Area Domination ವಿಶೇಷ ಗಸ್ತು ಮಾಡಿದ್ದಾರೆ. 

ಈ ವೇಳೆ   Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 42 ಲಘು ಪ್ರಕರಣಗಳನ್ನು  ದಾಖಲಿಸಲಾಗಿದೆ. 

Despite increased police patrols, hooliganism remains a problem in Shivamogga, as evidenced by a recent incident in Hosamane. The police have intensified their efforts with special patrols, focusing on areas known for public nuisance and suspicious activity. On May 30, 2024, foot patrols and area domination patrols were conducted across various locations, leading to the filing of 42 minor cases against individuals involved in public nuisance and suspicious activities.