ಹೊಸಮನೆ ಹಾವಳಿ | ದೊಡ್ಡಪೇಟೆ ಪೊಲೀಸ್ ಸ್ಟೇಷನ್‌ನಲ್ಲಿ FIR | ಏನಿದೆ ಗೊತ್ತಾ ಅದರಲ್ಲಿ ?
On May 30, 2024, at 2:15 AM, a group of 2-3 unidentified individuals vandalized vehicles parked in front of a house in Hosamane, causing damage to an auto rickshaw and cars. An FIR has been filed against the unknown individuals under IPC 1860 (U/s-427,34) and the Prevention of Destruction and Loss of Property Act, 1981 (U/s-2(A)).
SHIVAMOGGA | MALENADUTODAY NEWS | May 31, 2024 ಮಲೆನಾಡು ಟುಡೆ
ಶಿವಮೊಗ್ಗದ ಹೊಸಮನೆ ಮೂರನೇ ಕ್ರಾಸ್‌ನಲ್ಲಿ ಮೊನ್ನೆ ರಾತ್ರಿ ನಡೆದ ಮಾದಕ ದುಷ್ಕರ್ಮಿಗಳ ಹಾವಳಿ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. : IPC 1860 (U/s-427,34); PREVENTION OF DESTRUCTION AND LOSS OF PROPERTY ACT, 1981 (U/s-2(A)) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಅಪರಿಚಿತ ಮೂವರು ವ್ಯಕ್ತಿಗಳನ್ನು ಎ ಒನ್ ಮಾಡಲಾಗಿದೆ. ನಿರ್ಧಿಷ್ಟವಾಗಿ ಆರೋಪಿಗಳ ಹೆಸರನ್ನು ಹಾಕಲಾಗಿಲ್ಲ.
ಏನಿದೆ ಎಫ್‌ಐಆರ್ ನಲ್ಲಿ
ದಿನಾಂಕ 30-05-2024 ರಂದು ಬೆಳಗಿನ ಜಾವ 02.15 ಎ.ಎಂ ಗಂಟೆಗೆ ಸಮಯದಲ್ಲಿ ಹೊಸಮನೆ ಮೂರನೇ ಕ್ರಾಸ್‌ನಲ್ಲಿ ಯಾವುದೋ ಹುಡುಗರು ಗಲಾಟೆ ಮಾಡುತ್ತಿರುವ ಸದ್ದು ಕೇಳಿಸಿದೆ. ಆ ಬಳಿಕ ಯಾರೋ ಎರಡರಿಂದ ಮೂರು ಜನ ಅಪರಿಚಿತ ವ್ಯಕ್ತಿಗಳು ಅವರ ಮನೆಯ ಮುಂಭಾಗದಲ್ಲಿ ನಿಲಿಸಿದ್ದ ವಾಹನಗಳನ್ನು ಜಖಂಗೊಳಿಸುತ್ತಿದ್ದರು. ಯಾರೋ 02 ರಿಂದ 03 ಜನ ಕಿಡಿಗೇಡಿಗಳು ದಿನಾಂಕ 30-05-2024 ರ ಬೆಳಗಿನ ಜಾವ 02.15 ಗಂಟೆ ಸಮಯದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಆಟೋ ರಿಕ್ಷಾ, ಕಾರುಗಳಿಗೆ ಕಲು ಮತ್ತು ದೊಣ್ಣೆಗಳಿಂದ ಹೊಡೆದು ಜಖಂಗೊಳಿಸಿ ಲುಕ್ಷಾನ್ ಮಾಡಿ ಓಡಿ ಹೋಗಿರುತ್ತಾರೆ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
This is a news report from Malenadu Today about an incident of vandalism in Shivamogga. On May 30, 2024, at 2:15 AM, a group of 2-3 unidentified individuals vandalized vehicles parked in front of a house in Hosamane, causing damage to an auto rickshaw and cars. An FIR has been filed against the unknown individuals under IPC 1860 (U/s-427,34) and the Prevention of Destruction and Loss of Property Act, 1981 (U/s-2(A)).