BREAKING NEWS/ ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲಿನ ದಾಳಿ/ ತಮಿಳ್ ರಮೇಶ್ ಹಾಗೂ ದೀಪು ಬೆಂಗಳೂರಲ್ಲಿ ಸೆರೆಂಡರ್​

BREAKING NEWS/ Attack on handi Anni murder accused/ Tamil Ramesh and Deepu surrender in Bengaluru

BREAKING NEWS/  ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲಿನ ದಾಳಿ/ ತಮಿಳ್ ರಮೇಶ್ ಹಾಗೂ ದೀಪು ಬೆಂಗಳೂರಲ್ಲಿ ಸೆರೆಂಡರ್​

ಚೀಲೂರಿನ ಗೋವಿನ ಕೋವಿಯಲ್ಲಿ ನಡೆದಿದ್ದ ಡಬ್ಬಲ್​ ಅಟ್ಯಾಕ್ ಪ್ರಕರಣ ಸಂಬಂಧ  ದಾವಣಗೆರೆ ಪೊಲೀಸರು ಆರೋಪಿಗಳು ತನಿಖೆ ಇನ್ನೂ ಸಹ ಮುಂದುವರಿಸಿದ್ದಾರೆ. ಈ ಮಧ್ಯೆ ಆಂಧ್ರದಲ್ಲಿ ಆರೋಪಿಗಳು ಸೆರೆಂಡರ್ ಆಗಿದ್ದರು ಎಂಬ ಫೇಕ್​ ನ್ಯೂಸ್​ನ್ನ ಕೂಡ ಉದ್ದೇಶ ಪೂರ್ವಕ ಕಾಣದ ಕೈಯ್ಯೊಂದು ಹರಿಬಿಟ್ಟಿತ್ತು. ಆದರೆ ಇದೇ ಶರಣಾಗತಿ ಸುದ್ದಿ ಇದೀಗ ನಿಜವಾಗಿದೆ. 

ಕಳೆದ ಮಾರ್ಚ್ 15 ರಂದು ಹಂದಿ ಅಣ್ಣಿ ಕೊಲೆಯ ಆರೋಪಿಗಳಾದ ಆಂಜನೇಯ ಮತ್ತು ಮಧು ಮೇಲೆ ತಮಿಳ್ ರಮೇಶ್​ ನ ಗ್ಯಾಂಗ್ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಬೊಲೆರೋ ವಾಹನದಲ್ಲಿ ಬೈಕ್​ಗೆ ಡಿಕ್ಕಿ ಹೊಡೆಸಿ ಇಬ್ಬರಿಗೂ ಮಚ್ಚಿನಿಂದ ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಆಂಜನೇಯ ಸಾವನ್ನಪ್ಪಿದ್ದು, ಮಧು ಚೇತರಿಸಿಕೊಳ್ತಿದ್ದಾನೆ. 

ಘಟನೆ ಬೆನ್ನಲ್ಲೆ ದಾವಣಗೆರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದರು. ಅಷ್ಟರಲ್ಲಿ ಹಾವೇರಿಯ ಶಿಗ್ಗಾವಿಯಲ್ಲಿ ನಾಲ್ವರು ಆರೋಪಿಗಳು ಸೆರೆಂಡರ್ ಆಗಿದ್ದರು. ಅದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅವರು ಸೆರೆಂಡರ್ ಆಗಿಲ್ಲ ಅವರನ್ನಅರೆಸ್ಟ್ ಮಾಡಲಾಗಿದೆ ಎಂಬ ವಿಚಾರವೂ ಕೇಳಿಬಂದಿತ್ತು. 

ಇದರ ನಡುವೆ ಘಟನೆಯ ಮಾಸ್ಟರ್​ ಮೈಂಡ್ ತಮಿಳ್ ರಮೇಶ್ ಎಂಬುದು ಸ್ಪಷ್ಟವಾಗಿತ್ತಾದರೂ ಆತ ಎಸ್ಕೇಪ್ ಆಗಿದ್ದ, ಆತನ ಜೊತೆಗಿದ್ದ ದೀಪು ಸಹ ಅಬ್​ಸ್ಕ್ಯಾಂಡ್ ಆಗಿದ್ದ,. ಇವರಿಬ್ಬರಿಗೂ ಹೆಬ್ಬಟ್ಟು ಮಂಜ ಶೆಲ್ಟರ್ ಕೊಡುತ್ತಿದ್ಧಾನೆ ಎಂಬ ಗುಮಾನಿಯು ದಟ್ಟವಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರನ್ನು ಹಿಡಿಯುವ ಲಾಸ್ಟ್ ಮೂಮೆಂಟ್​ನಲ್ಲಿ ಮಾಧ್ಯಮಗಳಿಗೆ ಆರೋಪಿಗಳಿಬ್ಬರ ಶರಣಾಗತಿ ಎಂಬ ಸುದ್ದಿ ಲೀಕ್ ಆಗಿತ್ತು. 

ಸದ್ಯ ಲಭ್ಯ ಮಾಹಿತಿಯ ಪ್ರಕಾರ, ಬೆಂಗಳೂರಿನ ಹೈಗ್ರೌಂಡ್ಸ್​  ಪೊಲೀಸ್ ಸ್ಟೇಷನ್​ ಲಿಮಿಟ್ನಲ್ಲಿ ಆರೋಪಿ ತಮಿಳ್ ರಮೇಶ್ ಹಾಗೂ ದೀಪು ಸರೆಂಡರ್ ಆಗಿದ್ದಾರೆ ಎನ್ನಲಾಗಿದೆ. ಯಾವ ರೀತಿಯಲ್ಲಿ ಶರಣಾಗಿದ್ದಾರೆ. ಅದರ ಹಿನ್ನೆಲೆ ಏನು? ಎಂಬುದು ಇನ್ನಷ್ಟೆ ಸ್ಪಷ್ಟವಾಗಬೇಕಿದೆ. ಸದ್ಯ ದಾವಣಗೆರೆ ಪೊಲೀಸರು ಆರೋಪಿಗಳನ್ನ ಬೆಂಗಳೂರು ಪೊಲೀಸರು ಕೋರ್ಟ್​ಗೆ ಅಟೆಂಡ್ ಮಾಡಿಸಿದ ನಂತರ, ತಮ್ಮ ವಶಕ್ಕೆ ಕೋರ್ಟ್​  ಮೂಲಕ ಪಡೆದು ವಿಚಾರಣೆ ನಡೆಸಲಿದ್ದಾರೆ. 

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 




ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

 

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

 

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 



 

MALENADUTODAY.COM/ SHIVAMOGGA / KARNATAKA WEB NEWS


HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite